ಸುಮಾರು 15 ವರ್ಷಗಳ ನಂತರ ಇಂದು ಕುಟುಂಬ ಸಮೇತ ಚಿತ್ರಮಂದಿರಕ್ಕೆ ತೆರಳಿ ‘ಪ್ರೇಮದ ಊರಲ್ಲಿ’ ಚಿತ್ರವನ್ನು ವೀಕ್ಷಿಸಿದೆ.
- ‘ಬಾಬಾ ಸಾಹೇಬ್ ಅಂಬೇಡ್ಕರ್ ಕೊನೆಯ ದಿನಗಳು’ ಶೀರ್ಷಿಕೆ ಅನಾವರಣ
- ಪ್ರಕಾಶಕರು, ಮಾರಾಟಗಾರರಿಗೆ ಆಹ್ವಾನ
- ಬ್ಲಾಕ್ಮೇಲ್ ತಂತ್ರಗಳಿಗೆ ಹೆದರುವುದಿಲ್ಲ, ಪ್ರತಿಷ್ಠೆ ಬಿಡಿ
- ದರ್ಶನ್ ಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಫಿಸಿಯೋಥೆರಪಿಗೆ ಕೋರ್ಟ್ ಅಸ್ತು
- ಸಂವಿಧಾನ ರಕ್ಷಣೆಗಾಗಿ ಎರಡನೇ ಸ್ವಾತಂತ್ರ್ಯ ಹೋರಾಟ ಅಗತ್ಯ: ಸಿದ್ದರಾಮಯ್ಯ
ಬಹಳ ದಿನಗಳ ನಂತರ ಮನಸ್ಸಿಗೆ ಮುದ ನೀಡಿದ, ಕುಟುಂಬದೊಂದಿಗೆ ಕುಳಿತು ನೋಡಬಹುದಾದ ಒಂದು ಅದ್ಭುತ ಕನ್ನಡ ಚಿತ್ರ ಇದಾಗಿದೆ.
ಮೊದಲಿಗೆ, ಕನ್ನಡ ಚಿತ್ರರಂಗಕ್ಕೆ ಇಂತಹ ಸುಂದರ ಚಿತ್ರವನ್ನು ನೀಡಿದ ನಿರ್ದೇಶಕ ಮನೋಜ್ ಕುಮಾರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಯಾವುದೇ ಆಡಂಬರ, ಅತಿರೇಕವಿಲ್ಲದೆ ಸರಳವಾದ ಕಥೆಯನ್ನು ಅತ್ಯಂತ ಸುಂದರವಾಗಿ, ಸಹಜವಾಗಿ ಮತ್ತು ಮನಮುಟ್ಟುವಂತೆ ತೆರೆ ಮೇಲೆ ಕಟ್ಟಿಕೊಟ್ಟಿರುವುದು ನಿಜಕ್ಕೂ ಮೆಚ್ಚುವಂತಹದ್ದು.
ಚಿತ್ರದ ಮತ್ತೊಂದು ವಿಶೇಷತೆ ಕೌಟುಂಬಿಕ ಮೌಲ್ಯಗಳ ಸುಂದರ ನಿರೂಪಣೆ. ಸಂಬಂಧಗಳ ಬೆಲೆ, ಪ್ರೀತಿ, ಭಾವನೆ, ಕುಟುಂಬದ ಬಂಧ—ಇವೆಲ್ಲವನ್ನೂ ಹೃದಯಕ್ಕೆ ನಾಟುವಂತೆ ಚಿತ್ರಿಸಲಾಗಿದೆ. ಇಂದಿನ ವೇಗದ ಜೀವನದಲ್ಲಿ ಕುಟುಂಬದ ಮಹತ್ವವನ್ನು ಅರಿಯಲು, ವಿಶೇಷವಾಗಿ ಯುವ ಪೀಳಿಗೆ ತಪ್ಪದೇ ನೋಡಬೇಕಾದ ಸಿನಿಮಾ ಇದು.
ಹಿರಿಯ ನಟ ರಂಗಾಯಣ ರಘು ಅವರಿಂದ ಹಿಡಿದು ಪ್ರತಿಯೊಬ್ಬ ಕಲಾವಿದರೂ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಪಾತ್ರಗಳು ಅಭಿನಯಿಸಿದಂತೆ ಕಾಣದೆ, ನಮ್ಮ ಸುತ್ತಮುತ್ತಲಿನ ಬದುಕಿನ ಭಾಗವೇ ಆಗಿ ಕಾಣಿಸುತ್ತವೆ.
ಸರಳ ಕಥೆಗೆ ಸುಂದರ ಭಾವನೆಗಳನ್ನು ಬೆರೆಸಿ, ಕನ್ನಡ ಪ್ರೇಕ್ಷಕರಿಗೆ ಒಂದು ಮನಮುಟ್ಟುವ ಚಿತ್ರವನ್ನು ನೀಡಿದ ನಿರ್ದೇಶಕ ಮನೋಜ್ ಕುಮಾರ್, ನಿರ್ಮಾಪಕರು ಹಾಗೂ ಚಿತ್ರತಂಡದ ಪ್ರತಿಯೊಬ್ಬರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು.
ಕನ್ನಡ ಚಿತ್ರರಂಗದಲ್ಲಿ ಇನ್ನಷ್ಟು ಇಂತಹ ಅರ್ಥಪೂರ್ಣ, ಕುಟುಂಬ ಸಮೇತ ಕುಳಿತು ನೋಡಬಹುದಾದ ಚಿತ್ರಗಳು ಮೂಡಿಬರಲಿ.
‘ಪ್ರೇಮದ ಊರಲ್ಲಿ’ — ಸಿನಿಮಾ ಮುಗಿದರೂ ಮನಸ್ಸಿನಲ್ಲಿ ಉಳಿಯುವ ಒಂದು ಸುಂದರ ಅನುಭವ.
– ಡಾ.ಸಿ.ಎನ್.ಮಂಜುನಾಥ್, ಸಂಸದ




