ಬೆಂಗಳೂರು: ಚಂದನವನದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ (81) ಮಂಗಳವಾರ ಬೆಳಿಗ್ಗೆ ಕಾಲವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಸ್ವಗೃಹದಲ್ಲಿ ಕೊನೆಯುಸಿರೆಳದಿದ್ದಾರೆ.
- ಚಿತ್ರದುರ್ಗ ಜಿಲ್ಲೆಯ ವಸತಿ ರಹಿತರಿಗೆ ಸುವರ್ಣಾವಕಾಶ
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
ಕನ್ನಡ ಚಲನಚಿತ್ರ ನಿರ್ಮಾಪಕ, ನಿರ್ದೇಶಕ, ನಟ, ನಾಯಕ ನಟ, ಪೋಷಕ ನಟ, ಹಾಸ್ಯ ಕಲಾವಿದರಾಗಿ ಹೆಸರಾಗಿದ್ದ ದ್ವಾರಕೀಶ್ ಕನ್ನಡ ಚಿತ್ರರಂಗದಲ್ಲಿ ಕುಳ್ಳ ಎಂದೇ ಹೆಸರಾಗಿದ್ದರು. ಡಾ. ವಿಷ್ಣುವರ್ಧನ್, ಡಾ.ರಾಜ್ ಕುಮಾರ್ ಮೊದಲಾದ ನಟರ ಚಿತ್ರಗಳ ನಿರ್ಮಾಣವನ್ನು ಇವರು ಮಾಡಿದ್ದರು.
ದ್ವಾರಕೀಶ್ ನಿರ್ಮಾಣ / ನಿರ್ದೇನದ ಚಿತ್ರಗಳು
೧೯೬೬ – ಮಮತೆಯ ಬಂಧನ -ಕನ್ನಡ
೧೯೬೯ – ಮೇಯರ್ ಮುತ್ತಣ್ಣ – ಕನ್ನಡ
೧೯೭೨ – ಕುಳ್ಳ ಏಜೆಂಟ್ ೦೦೦ – ಕನ್ನಡ
೧೯೭೩ – ಕೌಬಾಯ್ ಕುಳ್ಳ – ಕನ್ನಡ
೧೯೭೭ – ಭಾಗ್ಯವಂತರು – ಕನ್ನಡ
೧೯೭೭ – ಕಿಟ್ಟು ಪುಟ್ಟು –ಕನ್ನಡ
೧೯೭೮ – ಸಿಂಗಪೂರಿನಲ್ಲಿ ರಾಜಾ ಕುಳ್ಳ -ಕನ್ನಡ
೧೯೭೮ – ಪ್ರೀತಿ ಮಾಡು ತಮಾಷೆ ನೋಡು – ಕನ್ನಡ
೧೯೮೦ – ಕುಳ್ಳ ಕುಳ್ಳಿ – ಕನ್ನಡ
೧೯೮೦ – ಮಂಕುತಿಮ್ಮ- ಕನ್ನಡ
೧೯೮೧ – ಗುರು ಶಿಷ್ಯರು –ಕನ್ನಡ
೧೯೮೧ – ಮನೆ ಮನೆ ಕಥೆ –ಕನ್ನಡ
೧೯೮೨ – ಪೆದ್ದ ಗೆದ್ದ – ಕನ್ನಡ
೧೯೮೨ – ಅದೃಷ್ಟವಂತ -ಕನ್ನಡ
೧೯೮೨ – ನ್ಯಾಯ ಎಲ್ಲಿದೆ -ಕನ್ನಡ
೧೯೮೩ – ಗೆದ್ದ ಮಗ -ಕನ್ನಡ
೧೯೮೩ – ಆನಂದ ಭೈರವಿ – ಕನ್ನಡ
೧೯೮೩ – ಅಡಿತ್ತ ವಾರಿಸ್ –ತಮಿಳು
೧೯೮೪ – ಪ್ರಚಂಡ ಕುಳ್ಳ -ಕನ್ನಡ
೧೯೮೪ – ಪೊಲೀಸ್ ಪಾಪಣ್ಣ –ಕನ್ನಡ
೧೯೮೪ – ಇಂದಿನ ರಾಮಾಯಣ –ಕನ್ನಡ
೧೯೮೪ – ಗಂಗ್ವಾ – ಹಿಂದಿ
೧೯೮೫ – ನೀ ಬರೆದ ಕಾದಂಬರಿ- ಕನ್ನಡ – ನಿರ್ಮಾಣ ಮತ್ತು ನಿರ್ದೇಶನ
೧೯೮೫ – ನೀ ತಂದ ಕಾಣಿಕೆ – ಕನ್ನಡ – ನಿರ್ಮಾಣ ಮತ್ತು ನಿರ್ದೇಶನ
೧೯೮೫ – ಮದುವೆ ಮಾಡು ತಮಾಷೆ ನೋಡು – ಕನ್ನಡ –
೧೯೮೫ – ಬ್ರಹ್ಮಗಂಟು – ಕನ್ನಡ
೧೯೮೬ – ನಾನ್ ಅಡಿಮೈ ಇಲ್ಲೈ – ತಮಿಳು – ನಿರ್ಮಾಣ ಮತ್ತು ನಿರ್ದೇಶನ
೧೯೮೬ – ಆಫ್ರಿಕಾದಲ್ಲಿ ಶೀಲ -ಕನ್ನಡ – ನಿರ್ಮಾಣ ಮತ್ತು ನಿರ್ದೇಶನ
೧೯೮೬ – Kizhakku Africavil Sheela – ತಮಿಳು – ನಿರ್ಮಾಣ ಮತ್ತು ನಿರ್ದೇಶನ
೧೯೮೭ – Sheela –Hindi
೧೯೮೭ – ಡ್ಯಾನ್ಸ್ ರಾಜ ಡ್ಯಾನ್ಸ್ – ಕನ್ನಡ
೧೯೮೭ – ಒಂದೇ ಗೂಡಿನ ಹಕ್ಕಿಗಳು – ಕನ್ನಡ
೧೯೮೭ – ರಾವಣ ರಾಜ್ಯ – ಕನ್ನಡ
೧೯೮೮ – ಗಂಡ ಮನೆ ಮಕ್ಕಳು – ಕನ್ನಡ
೧೯೮೯ – ಜೈ ಕರ್ನಾಟಕ – ಕನ್ನಡ – ನಿರ್ಮಾಣ ಮತ್ತು ನಿರ್ದೇಶನ
೧೯೮೯ – ಕೃಷ್ಣಾ ನೀ ಕುಣಿದಾಗ – ಕನ್ನಡ – ನಿರ್ಮಾಣ ಮತ್ತು ನಿರ್ದೇಶನ
೧೯೯೦ – ಶೃತಿ – ಕನ್ನಡ – ನಿರ್ಮಾಣ
೧೯೯೧ – ಗೌರಿ ಕಲ್ಯಾಣ – ಕನ್ನಡ – ನಿರ್ಮಾಣ ಮತ್ತು ನಿರ್ದೇಶನ
೧೯೯೨ – ಹೊಸ ಕಳ್ಳ ಹಳೇ ಕುಳ್ಳ – ಕನ್ನಡ – ನಿರ್ಮಾಣ ಮತ್ತು ನಿರ್ದೇಶನ
೧೯೯೩ – ರಾಯರು ಬಂದರು ಮಾವನ ಮನೆಗೆ – ಕನ್ನಡ – ನಿರ್ದೇಶನ
೧೯೯೪ – ರಸಿಕ – ಕನ್ನಡ – ನಿರ್ಮಾಣ
೧೯೯೪ – ಕಿಲಾಡಿಗಳು – ಕನ್ನಡ
೧೯೯೫ – ಕಿಡ್ನಾಪ್ – ಕನ್ನಡ – ನಿರ್ಮಾಣ ಮತ್ತು ನಿರ್ದೇಶನ
೧೯೯೫ – ಗಿಡ್ಡು ದಾದ – ಕನ್ನಡ
೧೯೯೬ – ಹೃದಯ ಕಳ್ಳರು – ಕನ್ನಡ – ನಿರ್ಮಾಣ ಮತ್ತು ನಿರ್ದೇಶನ
೧೯೯೭ – ಶೃತಿ ಹಾಕಿದ ಹೆಜ್ಜೆ – ಕನ್ನಡ
೨೦೦೧ – ಮಜ್ನು – ಕನ್ನಡ
೨೦೦೫ – ಆಪ್ತಮಿತ್ರ – ಕನ್ನಡ
೨೦೧೧ – ವಿಷ್ಣುವರ್ಧನ – ಕನ್ನಡ
೨೦೧೫ – ಚಾರುಲತಾ – ಕನ್ನಡ
೨೦೧೫ – ಆಟಗಾರ – ಕನ್ನಡ
೨೦೧೭ – ಚೌಕ – ಕನ್ನಡ
೨೦೧೮ – ಅಮ್ಮ ಐ ಲವ್ ಯು – ಕನ್ನಡ




