ಜಾತಿವಾರು ಸಮೀಕ್ಷೆಗೆ ಮೇಲ್ಜಾತಿ ವಿರೋಧ ಹಾಗು ದಾರಿತಾಪ್ಪಿಸುವ ಹುನ್ನಾರ
ವಿಷಯ: ಜಾತಿವಾರು ಸಮೀಕ್ಷೆಗೆ ಮೇಲ್ಜಾತಿ ವಿರೋಧ ಹಾಗು ದಾರಿತಾಪ್ಪಿಸುವ ಹುನ್ನಾರ ಖಂಡಿಸುವ ಬಗ್ಗೆ
ಸಮಾಜದ ಪಟ್ಟಭದ್ರ ಹಿತಾಸಕ್ತಿಗಳ ಹಾಗೂ ಸ್ವಪಕ್ಷದ ಬಲಿಷ್ಠ ಜಾತಿಗಳ ತೀವ್ರ ವಿರೋಧ ಹಾಗೂ ಇಡೀ ಸಮೀಕ್ಷಾ ಪ್ರಕ್ರಿಯೆಯನ್ನೇ ಸ್ಥಗಿಸಿಗೊಳಿಸುವ ಹುನ್ನಾರದ ಒತ್ತಡದ ನಡುವೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಕೈಗೊಳ್ಳುವ ದಿಟ್ಟ ತೀರ್ಮಾನವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕೈಗೊಂಡಿದ್ದಾರೆ. ಇದಕ್ಕಾಗಿ ನಾವು ಅವರನ್ನು ಅಭಿನಂದಿಸುತ್ತೇವೆ ಮತ್ತು ನಾಗರೀಕ ಸಮಾಜದ ಪರವಾಗಿ ಅವರ ಜೊತೆಗೆ ನಿಲ್ಲುತ್ತೇವೆ.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಮೇಲ್ಜಾತಿಯ ರಾಜಕೀಯ ಹುನ್ನಾರದ ಇಂಥ ಸವಾಲನ್ನು ಬೇರಾವ ಮುಖ್ಯಮಂತ್ರಿಯೂ ಎದುರಿಸಲಾಗುತ್ತಿರಲಿಲ್ಲ ಎಂಬುದು ನಮ್ಮ ಅಭಿಪ್ರಾಯ.
ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ತೀವ್ರ ಆಕ್ಷೇಪ ಬಂದ ಹಿನ್ನೆಲೆಯಲ್ಲಿ ಜಾತಿವಾರು ಸಮೀಕ್ಷೆಯನ್ನು ಕೈ ಬಿಡಲಾಗುವುದು ಇಲ್ಲವೇ ಮುಂದೂಡಲಾಗುವದು ಎಂಬ ದಟ್ಟ ವದಂತಿಗಳು ಹರಡಿದ್ದವು. ಇದರ ನಡುವೆ ಮುಖ್ಯಮಂತ್ರಿಗಳ ಈ ದಿಟ್ಟ ನಿಲುವಿನಿಂದ ಈ ಬಗೆಗಿನ ಗೊಂದಲ ನಿವಾರಣೆಯಾದಂತಾಗಿದೆ. ಆದರೂ ಈ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಗೆ ಅಡ್ಡಗಾಲು ಹಾಕುವ ಮಸಲತ್ತುಗಳು ನಡೆಯುತ್ತಲೇ ಇವೆ ಮತ್ತು ಸಮೀಕ್ಷೆಯ ನಂತರವೂ ಮುಂದುವರಿಯುತ್ತವೆ.
ಸದಾ ಕಾಲ ತಮ್ಮ ಜಾತಿ ಬಲದಿಂದಲೇ ಯಜಮಾನಿಕೆ ಆಳ್ವಿಕೆ ಮಾಡಿದ ಈ ಜನರಿಗೆ ಜಾತಿಗಣತಿ ಕುರಿತಂತೆ ಮೊದಲಿನಿಂದಲೂ ಆತಂಕವಿದೆ. ಆದರೂ ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯದೇ ದಸರಾ ಸಂದರ್ಭದಲ್ಲೇ ಈ ಸಮೀಕ್ಷೆಯನ್ನು ಪ್ರಾರಂಭಿಸಿದ್ದು ನಾಡಿನ ಒಳತಿನ ದೃಷ್ಟಿಯಿಂದ ಸೂಕ್ತ.
ಜಾತಿ ಜನಗಣತಿ ಪ್ರಕ್ರಿಯೆಗೆ ತೀವ್ರ ವಿರೋಧ ಎದುರಾಗುತ್ತಿರುವ ಈ ಸನ್ನಿವೇಶದಲ್ಲಿ ಪ್ರಜ್ಞಾವಂತ ನಾಗರೀಕರು ಕೆಲವು ಅಂಶಗಳನ್ನು ಅವಲೋಕಿಸಬೇಕಿದೆ.
ಶತಮಾನಗಳಿಂದ ಅನ್ಯಾಯಕ್ಕೊಳಗಾಗಿರುವ ಸಮಾಜದ ನೊಂದ ಜನ ವರ್ಗಗಳ ಆರ್ಥಿಕ, ಸಾಮಾಜಿಕ ಏಳಿಗೆಗೆ ಮೊದಲಿನಿಂದಲೂ ವಿರೋಧ ಬರುತ್ತಲೇ ಇದೆ. ವಿರೋಧದ ಸ್ವರೂಪ ಸ್ವಲ್ಪ ಬದಲಾಗಿದ್ದರೂ, ವಿರೋಧದ ಉದ್ದೇಶ ಬದಲಾಗಿಲ್ಲ. ಸಮಾಜದ ಪಟ್ಟಭದ್ರ ಹಿತಾಸಕ್ತಿಗಳು ಸಕಲರಿಗೂ ಸಮಾನಾವಕಾಶ ಕಲ್ಪಿಸುವ ಯಾವುದೇ ಪ್ರಕ್ರಿಯೆಯನ್ನು ಸುಲಭಕ್ಕೆ ಒಪ್ಪಿಕೊಳ್ಳುವದಿಲ್ಲ. ತಮ್ಮ ಜಾತಿಯ ಜನಸಾಮಾನ್ಯರ ಸಂಖ್ಯಾಬಲವನ್ನು ತೋರಿಸಿ ತಮ್ಮದೇ ಸಾಮ್ರಾಜ್ಯವನ್ನು ಸ್ಥಾಪಿಸಿಕೊಂಡು, ರಾಜಕೀಯ ಕೋಟೆಯನ್ನು ಕಟ್ಟಿಕೊಂಡವರಿಗೆ ಈ ಸಮೀಕ್ಷೆ ಬೇಡವಾಗಿದೆ. ಇವರೇನು ರಾಜಕೀಯ ನಾಯಕರೋ ತಮ್ಮ ಜಾತಿಗಳ ನಾಯಕರೋ ಎಂಬ ಸಂದೇಹ ಬರುತ್ತದೆ. ತಮ್ಮ ಜಾತಿಯ ಮತಗಳಿಂದ ಮಾತ್ರ ಸದನಕ್ಕೆ ಆರಿಸಿ ಬಂದಿಲ್ಲ. ಎಲ್ಲ ಸಮುದಾಯಗಳ ಜನ ಸೇರಿ ಇವರನ್ನು ಚುನಾಯಿಸಿದ್ದಾರೆ ಎಂಬ ಅರಿವು ಇವರಿಗೆ ಇರಬೇಕು. ತಾವು ತಮ್ಮ ಜಾತಿಯ ನಾಯಕರು ಮಾತ್ರವಲ್ಲ ಎಲ್ಲ ಸಮುದಾಯಗಳ ನಾಯಕರು ಎಂಬ ವಿಶಾಲ ಮನಸ್ಸು ನಮ್ಮ ನಾಯಕರಿಗಿರಬೇಕು.
ಈ ಬಾರಿ ಈ ವಿರೋಧಕ್ಕೆ ರಾಜಕಾರಣಿಗಳು ಮಾತ್ರವಲ್ಲ ಕಾವಿಧಾರಿ ಮಠಾಧೀಶರೂ ಬೀದಿಗೆ ಬಂದಿದ್ದಾರೆ. ಮಾನವ ಧರ್ಮ ಸ್ಥಾಪಿಸಬೇಕಾದ ಈ ಮಹಾಪುರುಷರು, ಜಾತಿ ಹಿಂದೆ ಬಿದ್ದು ಮಾನವೀಯತೆಯನ್ನು ಅಪಮೌಲ್ಯಗೊಳಿಸಿದ್ದಾರೆ. ಸದಾ ಬಸವಣ್ಣನವರ ಹಾಗೂ ಕುವೆಂಪುರವರ ಹೆಸರನ್ನು ಬಂಡವಾಳ ಮಾಡಿಕೊಂಡಿರುವ ಇವರು, ಬಾಯಿಯಲ್ಲಿ ಇವನಾರವ, ಇವನಾರವ ಎನಬೇಡ, ಇವ ನಮ್ಮವ, ಇವ ನಮ್ಮವ ಎಂದೆನಿಸಯ್ಯ ಎಂದು ಹೇಳುತ್ತಾ, ಕೃತಿಯಲ್ಲಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ.
ಮೇಲ್ಜಾತಿ ಹಾಗೂ ಧರ್ಮದ ರಾಜಕೀಯವನ್ನೇ ತನ್ನ ತಂತ್ರವನ್ನಾಗಿರಿಸಿಕೊಂಡಿರುವ ಬಿಜೆಪಿ ಈ ಸಮೀಕ್ಷೆಯಿಂದ ಹೆದರಿ ಕಂಗಾಲಾಗಿದೆ. ಇದು ಹಿಂದುಗಳನ್ನು ವಿಭಜಿಸುವ ತಂತ್ರ ಎಂದು ಹತಾಶೆಯಿಂದ ಟೀಕಿಸುತ್ತಿದೆ. ಬಿಜೆಪಿ ನಿಲುವಿಗೆ ಬೆಂಬಲವಾಗಿ ನಿಂತಿರುವ ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯದ ಮಠಾಧೀಶರು “ಸಮೀಕ್ಷೆಯ ಧರ್ಮದ ಕಾಲಂ ನಲ್ಲಿ ಹಿಂದೂ ಎಂದು ಮತ್ತು ಜಾತಿ, ಉಪಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಎಂದು ಬರೆಸಬೇಕೆಂದು ಸಮಾಜದ ಸಭೆಯನ್ನು ಕರೆದು ಪತ್ವಾ ಹೊರಡಿಸಿದ್ದಾರೆ. ಈ ವಿಷಯದಲ್ಲಿ ಒಕ್ಕಲಿಗ ಸ್ವಾಮಿಗಳು ಮತ್ತು ಪಂಚ ಮಠಾಧೀಶರ ನಿಲುವು ಸಹ ಇದೇ ಆಗಿದ್ದು ದುರಂತದ ಸಂಗತಿಯಾಗಿದೆ. ಇದ್ದುದರಲ್ಲಿ ಲಿಂಗಾಯತ ಸ್ವಾಮಿಗಳ ನಿಲುವು ಸ್ವಾಗತಾರ್ಹವಾಗಿದೆ.
ಅರಸು ನಂತರ ಈಗಿನ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಯಾವುದನ್ನೂ ಲೆಕ್ಕಿಸದೆ ಮುಂದುವರಿಯುತ್ತಿರುವುದು ಅವರ ಸಾಮಾಜಿಕ ನ್ಯಾಯ ಮತ್ತು ಎಲ್ಲರ ಒಳಿತನ್ನು ಕಾಪಾಡುವ ಬದ್ಧತೆಯಾಗಿದೆ.
ಸಿದ್ಧರಾಮಯ್ಯನವರು ಅಹಿಂದ ಸಮುದಾಯದಗಳು ಮಾತ್ರವಲ್ಲ ಎಲ್ಲ ಸಮುದಾಯಗಳ ಶ್ರಮಜೀವಿಗಳ ಒಲವನ್ನು ಗಳಿಸಿಕೊಂಡಿದ್ದಾರೆ. ಇದು ಜಾತಿ ಅಥವ ಮತದ ಜನಗಣತಿ ಅಲ್ಲ. ಆದರೆ ಎಲ್ಲ ಜಾತಿಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಯ ಗಣತಿಯಾಗಿದೆ. ಇದರಿಂದ ಯಾವುದೇ ತೊಂದರೆ ಇಲ್ಲ.
ಆದರೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಅತ್ಯಂತ ಸಂಘಟಿತವಾಗಿರುವ ಕೋಮುವಾದಿ, ಮನುವಾದಿ ಶಕ್ತಿಗಳನ್ನು ಎದುರು ಹಾಕಿಕೊಂಡು ಈ ಸಮೀಕ್ಷೆಯನ್ನು ನಡೆಸಿ ಜಾರಿಗೆ ತರಬೇಕಾಗಿದೆ. ಈ ನಿಟ್ಟಿನಲ್ಲಿ ಅವರು ಯಶಸ್ವಿಯಾಗುವರೆಂದು ಅವರ ಪಕ್ಷದ ವಿರೋಧಿಗಳೇ ದಿಗಿಲುಗೊಂಡಿದ್ದಾರೆ.
ಏನೇ ಆಗಲಿ ಸ್ವಪಕ್ಷದವರೂ ಸೇರಿದಂತೆ ಕೋಮುವಾದಿಗಳನ್ನು ಹಿಮ್ಮೆಟ್ಟಿಸಿ ಗೆಲ್ಲುವ ಮತ್ತು ಪಕ್ಷವನ್ನು ಗೆಲ್ಲಿಸುವ ಸಾಮರ್ಥ್ಯವಿರುವುದು ಸಿದ್ದರಾಮಯ್ಯನವರಿಗೆ ಮಾತ್ರ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ.
ಈ ವಿಷಯದಲ್ಲಿ ಯಾವುದೇ ರಾಜಿಗೆ ಒಳಗಾಗದೆ ಮುಖ್ಯಮಂತ್ರಿಗಳು ಮುಂದುವರಿಯಬೇಕೆಂದು ನಾವು ಒತ್ತಾಯಿಸುತ್ತೇವೆ. ಈ ವಿಷಯದಲ್ಲಿ ನಾವು ಅವರ ಪರವಾಗಿ ನಿಲ್ಲುತ್ತೇವೆ.
ಸನತ್ ಕುಮಾರ ಬೆಳಗಲಿ, ಬೆಂಗಳೂರು.
ನಿರಂಜನಾರಾಧ್ಯ ವಿ ಪಿ , ಬೆಂಗಳೂರು.
ಬಸವರಾಜ ಸೂಳೆಭಾವಿ , ಗದಗ
ಚಂದ್ರಕಾಂತ ವಡ್ಡು, ಬೆಂಗಳೂರ
ಜಿ.ಪಿ ಬಸವರಾಜು, ಮೈಸೂರು
ಬಿ. ಶ್ರೀನಿವಾಸ ದಾವಣಗೆರೆ
ಸುನಂದಾ ಕಡಮೆ ಹುಬ್ಬಳ್ಳಿ
ಜಿ ವಿ ಆನಂದಮೂರ್ತಿ ತುಮಕೂರು.
ಎಚ್ ಎಸ್ ಬಸವಪ್ರಭು ಕಲಬುರ್ಗಿ
ವೈ. ಬಿ. ಹಿಮ್ಮಡಿ ಬೆಳಗಾವಿ
ಕೆ ಪಿ ಸುರೇಶ ಬೆಂಗಳೂರ
ನಾ ದಿವಾಕರ ಮೈಸೂರ
ಕ. ಮ. ರವಿಶಂಕರ, ಚಿತ್ರದುರ್ಗ
ಮುತ್ತು ಬಿಳೆಯಲಿ ಗದಗ
ಚಂದ್ರಶೇಖರ ಗೋರೆಬಾಳ ಸಿಂಧನೂರ
ಪ್ರಾ. ಎಸ್ ಜಿ ಚಿಕ್ಕನರಗುಂದ ರಾಮದುರ್ಗ
ಸಿ ಎಸ್ ಭೀಮರಾಯ ಶಹಾಪುರ
ಕೆ. ಬಿ. ವೀರಲಿಂಗನಗೌಡ ಸಿದ್ದಾಪುರ
ಅನಿಲ ಹೊಸಮನಿ ಬಿಜಾಪುರ
ಶಾಂತಕುಮಾರ ಹರ್ಲಾಪುರ ಅಣ್ಣಿಗೇರಿ
ಮಹೇಶ್ ಹರವೆ, ಮೈಸೂರು
ಸೋಮಶೇಖರ ವಾಲಿ ರಾಮದುರ್ಗ
ಪ್ರೊ. ಚನ್ನಬಸಪ್ಪ ಐನಳ್ಳಿ ಧಾರವಾಡ
ಎನ್ ರವಿಕುಮಾರ ಟೆಲೆಕ್ಸ್ ಶಿವಮೊಗ್ಗ
ನೊಯೆಲ್ ಚುಂಗಿಗುಡ್ಡೆ ಕುಂದಾಪುರ
ವಿಜಯಕಾಂತ ಪಾಟೀಲ ಹಾನಗಲ್ಲ
ನಾಗರಾಜ ಹರಪನಹಳ್ಳಿ ಕಾರವಾರ
ಕೆ ಮಲ್ಲೇಶಪ್ಪ, ಮೈಸೂರ
ಗಿರಿಧರ ಕಾರ್ಕಳ,
ಟಿ ಎನ್ ಚಂದ್ರಕಾಂತ ತುಮಕೂರ
ಶರಣಪ್ಪ ಬಾಚಲಾಪುರ ಕೊಪ್ಪಳ
ಟಿ.ಕೆ.ಗಂಗಾಧರ ಪತ್ತಾರ, ಬಳ್ಳಾರಿ
ಡಾ.ವೆಂಕಟಯ್ಯ ಅಪ್ಪಗೆರೆ ಬಳ್ಳಾರಿ,
ಸರಿತ ಮಾರುತೇಶ ಚಳ್ಳಕೆರೆ
ಬಿ.ಸಿದ್ದಪ್ಪ, ಹಿರಿಯೂರು.
ನಾಗರಾಜು ಮಂಡ್ಯ.
ಎನ್ ಬಷಿರುದ್ದಿನ್, ಸೇಡಂ
ಡಾ. ಕೆ ನಾರಾಯಣ ಸ್ವಾಮಿ, ಬೆಂಗಳೂರು
ಗುರುಪ್ರಸಾದ್ ಎಂ. ಸಿ, ಚನ್ನಪಟ್ಟಣ
ತ್ರೀಭುವನೇಶ್ವರಿ, ಗೌರಿಬಿದನೂರ
ಪ್ರಿಯಾಂಕ ಮಾವಿನಕರ ಕಲಬುರ್ಗಿ
ಎ. ಸಯೀದ್ ಅಹ್ಮದ್ ಖಾನ್, ತುಮಕೂರು.
ಭೀಮನಗೌಡ ಪರಗೊಂಡ ಅಥಣಿ
ಕರಿಯಪ್ಪ ಸಂಶಿ ಹುಲಕೋಟಿ
ಡಾ. ಶಶಿಕಾಂತ ಕೆ ಲಿಂಗಸುಗೂರ
ಖಾಸಿಂಅಲಿ ಜಿ ಹುಜರತಿ. ಹಂಪಿ ಶ್ರೀಶೈಲ ಮಾಡ್ಯಾಳೆ ಆಳಂದ
ಬೈರೇಶ್ವರ ವಕೀಲರು ದಾವಣಗೆರೆ
ಡಾ.ದಾದಾ ಹಯಾತ್ ಬಾವಾಜಿ ಹಂಪಿ
ಹನುಮಂತಪ್ಪ ಗಿಡ್ಡಿ ಗಂಗಾವತಿ
ಕುಮಾರ ಆರ್ ಉದ್ಧೂರು
ಬಸನಗೌಡ ಸುಳೇಕಲ್ ಕನಕಗಿರಿ
ಡಾ.ಪ್ರದೀಪ್ ಮಾಲ್ಗುಡಿ, ಘಟಪ್ರಭಾ




