ರಾಜಾಜಿನಗರ ಕಾಯಕಯೋಗಿ ಶ್ರೀ ಬಸವೇಶ್ವರರ ಪುತ್ಥಳಿ ಅನಾವರಣ

7 months ago

ಬೆಂಗಳೂರು: ರಾಜಾಜಿನಗರ ವೆಸ್ಟ್ ಆಫ್ ಕಾರ್ಡ್ ರೋಡ್ ಮೋದಿ ರಸ್ತೆಯಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರರ ಪುತ್ಥಳಿ ಅನಾವರಣ ಸಮಾರಂಭ ಮತ್ತು ಮಾತೆಂಬುದು ಜ್ಯೋತಿರ್ಲಿಂಗ ಕೃತಿ ಬಿಡುಗಡೆ ಸಮಾರಂಭ ನಡೆಯಿತು.

ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ,  ಡಾ.ನಿರ್ಮಲಾನಂದನಾಥ ಮಹಾಸ್ವಾಮಿ, ಡಾ.ಮಾತೆ ಗಂಗಾದೇವಿ, ಶಿವಸಿದ್ದೇಶ್ವರ ಸ್ವಾಮೀಜಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಡಿಸಿಎಂ ಡಿ.ಕೆ.ಶಿವಕುಮಾರ್, ಶಾಸಕ ಎಸ್.ಸುರೇಶ್ ಕುಮಾರ್,  ಕೇಂದ್ರ ಸಚಿವೆ ಶೋಭ ಕರಾಂದ್ಲಾಜೆ, ಸಚಿರಾದ ಎಂ.ಬಿ.ಪಾಟೀಲ್, ಈಶ್ವರ್ ಖಂಡ್ರೆರು, ಶಾಸಕ ಕೆ.ಗೋಪಾಲಯ್ಯ, ಮಾಜಿ ಸಚಿವ ಹೆಚ್.ಎಂ.ರೇವಣ್ಣ, ವಿಧಾನಪರಿಷತ್ ಸದಸ್ಯ ಪುಟ್ಟಣ್ಣ, ಬಸವ ಪುತ್ಥಳಿ ಪ್ರತಿಷ್ಠಾಪನಾ ಸಮಿತಿ ಅಧ್ಯಕ್ಷ ಸಿ.ಸೋಮಶೇಖರ್, ಸಂಚಾಲಕ ಹೆಚ್.ಆರ್.ಮಲ್ಲಿಕಾರ್ಜುನಯ್ಯ, ಅಖಿಲ ಭಾರತ ವೀರಶೈವ, ಲಿಂಗಾಯಿತ ಮಹಾಸಭಾ ನಗರಾಧ್ಯಕ್ಷ ನವೀನ್ ಕುಮಾರ್ ಬಿಡದಿ ಪುತ್ಥಳಿ ಅನಾವರಣ ಮಾಡಿದರು.

ಮಾಜಿ ಮೈರ್ ಗಂಗಾಂಬಿಕೆ ಮಲ್ಲಿಕಾರ್ಜುನ, ಬಿಬಿಎಂಪಿ ಮಾಜಿ ಸದಸ್ಯ ಜಿ.ಕೃಷ್ಣಮೂರ್ತಿರವರಿಗೆ ಸನ್ಮಾನಿಸಲಾಯಿತು.

ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ ಮಾತನಾಡಿ, ಬಸವೇಶ್ವರನಗರದಲ್ಲಿ ಬಸವೇಶ್ವರ ಪುತ್ಥಳಿ ಸ್ಥಾಪನೆಯಾಗಿರುವುದು ಅರ್ಥಪೂರ್ಣವಾಗಿದೆ. ಬಸವಣ್ಣನವರ ಕಲ್ಯಾಣವಾಗಲಿ ಆಶೀರ್ವಾದ ಮಾಡಿದಂತಹ ವಿಗ್ರಹವಾಗಿದೆ. ವಿಶ್ವಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ ಕೊಟ್ಟವರು ಅಣ್ಣ ಬಸವಣ್ಣನವರು. ಬದುಕಿನಲ್ಲಿ ಬಸವಮಾರ್ಗ ಆಳವಡಿಸಿಕೊಳ್ಳಬೇಕು. ಬಸವಣ್ಣ ಪ್ರತಿಮೆ ನೋಡಿದಾಗ ಅವರ ಆದರ್ಶಗಳನ್ನು ನಾವು ಆಳವಡಿಸಿಕೊಳ್ಳಬೇಕು ಎಂದು ಮನಸ್ಸು ಮಾಡಿದಾಗ ಜೀವನ ಸಾರ್ಥಕವಾಗುತ್ತದೆ ಎಂದರು.

ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಜಗಜ್ಯೋತಿ ಬಸವೇಶ್ವರರ ಆಶೀರ್ವಾದ ಎಲ್ಲರ ಮೇಲಿರಲಿ. ಮಠಕ್ಕೆ ಶಕ್ತಿ ಕೊಟ್ಟರೆ ಸಮಾಜಕ್ಕೆ ಅದ್ಬುತವಾದ ಕೊಡುಗೆ ನೀಡಬಲ್ಲದು. ನಗರದಲ್ಲಿ ಜ್ಞಾನ, ವಿಜ್ಞಾನ ಸಂಗಮವೇ ಬಸವೇಶ್ವರ ಪುತ್ಥಳಿ ಸ್ಥಾಪನೆಯಾಗಿದೆ. ಬದುಕು ನಶ್ವರ, ಜಗತ್ತಿಗೋಸ್ಕರ ಯಾರು ಬದುಕುತ್ತಾರೆ ಅವರ ಸತ್ತರು ಬದುಕಿರುತ್ತಾರೆ. 800 ವರ್ಷಗಳ ಹಿಂದೆ ಬಸವಣ್ಣ ಕೊಟ್ಟ ಸಂದೇಶ ಇಂದಿಗೂ ಜನಮಾನಸದಲ್ಲಿ ಉಳಿದಿದೆ ಎಂದರು.

ಮಾಡುವ ಕಾಯಕವನ್ನು ಕೈಲಾಸಕ್ಕೆ ಹೋಲಿಸಿದರು. ಕಾಯಕ ತತ್ವದ ಅಡಿಯಲ್ಲಿ ಸಮಾಜ ನಿರ್ಮಿಸಿದರು. ಭಕ್ತಿಯನ್ನು ಸಾರಿ ಭಕ್ತಿ ಭಂಡಾರಿ ಬಸವಣ್ಣ ಎಂಬ ಕೀರ್ತಿಗೆ ಪಾತ್ರರರಾದರು. ಬಸವೇಶ್ವರರ ಆದರ್ಶ ಸಿದ್ದಾಂತದಲ್ಲಿ ಸಾಗಿದರೆ ಸಮ ಸಮಾಜ ನಿರ್ಮಾಣ ಸಾಧ್ಯ ಎಂದರು.

ಮಾತೆ ಗಂಗಾದೇವಿ ಮಾತನಾಡಿ, ಬಸವಣ್ಣನೇ ತಂದೆ, ತಾಯಿ ನನಗೆ. ಪುತ್ಥಳಿ ನೋಡಿ ಜೀವನ ಪಾವನವಾಯಿತು. ಬಸವಣ್ಣನವರ ಪುತ್ಥಳಿ ಉತ್ತಮ ಸ್ಥಳದಲ್ಲಿ ಅನಾವರಣವಾಗಿದೆ. ಧ್ಯಾನ, ಪೂಜೆ ಮಾಡಲು ಬಸವಣ್ಣನವರ ಮೂರ್ತಿ ಬೇಕು ಎಂದರು.

ಡಿ.ಕೆ.ಶಿವಕುಮಾರ್ ಮಾತನಾಡಿ, ಹೊಸ ಬೆಂಗಳೂರನ್ನು ಐದು ಭಾಗ ಮಾಡಿದ್ದೇವೆ. ಜನರಿಗೆ ಉತ್ತಮ ಆಡಳಿತ ವ್ಯವಸ್ಥೆ ಮಾಡಬೇಕು ಎಂದು ಮಾಡಲಾಗಿದೆ.  ಟೀಕೆಗಳು ಬರುತ್ತವೆ ಸಾಧನೆಗಳು ನಿಲ್ಲುತ್ತವೆ. ರಾಜಾಜಿನಗರಕ್ಕೂ ನನಗೂ ಹಳೆಯ ನಂಟು ಇದೆ. ಜನನ ಉಚಿತ, ಸಾವು ಖಚಿತ ಯಾವುದು ಶಾಶ್ವತವಲ್ಲ. ನಾವು ಮಾಡಿದ ಕೆಲಸ ಶಾಶ್ವತವಾಗಿ ಉಳಿಯುತ್ತದೆ. ಕೊಟ್ಟ ಮಾತು ಉಳಿಸಿಕೊಂಡರೆ ಮಾತ್ರ ರಾಜಕೀಯದಲ್ಲಿ ಉಳಿಯಲು ಸಾಧ್ಯ. ಬಸವೇಶ್ವರ ಒಂದೇ ಜಾತಿ ಸೀಮಿತವಾಗಿಲ್ಲ, ಸಾಂಸ್ಕೃತಿಕ ನಾಯಕರಾಗಿದ್ದಾರೆ. ದೇಹಕ್ಕೆ ಬಡತನ ಬರುವುದಿಲ್ಲ, ಮನಸ್ಸಿಗೆ ಬಡತನ ಬರುತ್ತದೆ. ಶ್ರೀ ಬಸವೇಶ್ವರರ ಆಚಾರ, ವಿಚಾರ ಆಳವಡಿಸಿಕೊಂಡು ಹೋಗಬೇಕು ಎಂದರು.

ಬಿ.ಎಸ್.ಯುಡಿಯೂರಪ್ಪ ಮಾತನಾಡಿ, ಶತಶತಮಾನಗಳಿಂದ ಜ್ಞಾನ ಬೆಳಕು ಚೆಲ್ಲಿದ ಕಾಯಕಯೋಗಿ ಬಸವೇಶ್ವರರು, ಕಾಯಕ ಮಹತ್ವ ವಿಶ್ವಕ್ಕೆ ಸಾರಿದರು. ಸಮಾಜಕ್ಕೆ ನಿರಂತರ ಸ್ಪೂರ್ತಿಯಾಗಿದ್ದಾರೆ. ಪ್ರಜಾಪ್ರಭುತ್ವದ ಮೌಲ್ಯ, ಸಮ ಸಮಾಜದ ನಿರ್ಮಾಣ ಮಾಡಿದರು. ಬಸವೇಶ್ವರರ ಪುತ್ಥಳಿ ಎಲ್ಲರಿಗೂ ಚೈತನ್ಯಶಕ್ತಿ ತುಂಬಲಿ, ಯುವ ಪೀಳಿಗೆಗೆ ಬಸವೇಶ್ವರ ಸಿದ್ದಾಂತಗಳು ದಾರಿದೀಪವಾಗಲಿ ಎಂದರು.

ಈಶ್ವರ್ ಖಂಡ್ರೆ ಮಾತನಾಡಿ, ಬಸವಣ್ಣನವರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಜಾತ್ಯತೀತ ಸಿದ್ದಾಂತ ಮತ್ತು ಸಮ ಸಮಾಜದ ಹರಿಕಾರರು. ಬಸವಣ್ಣ ಎಂದರೆ ಕಾಯಕ, ದಾಸೋಹ ಮತ್ತು ಬಸವೇಶ್ವರರ ಚಿಂತನೆಗಳು 800 ವರ್ಷವಾದರು ಇಂದಿಗೂ ಜೀವಂತವಾಗಿದೆ. ಎಲ್ಲರು ಬಸವತತ್ವ, ವಚನ ಸಾಹಿತ್ಯ ಅಧ್ಯಯನ ಮಾಡಬೇಕು ಎಂದರು.

ಎಸ್.ಸುರೇಶ್ ಕುಮಾರ್ ಮಾತನಾಡಿ, ಬಸವೇಶ್ವರ ನಗರ ಸ್ಥಾಪನೆಯಾಗಿ ಬಹಳ ವರ್ಷಗಳ ಕನಸು ಇಂದು ನನಸಾಗಿದೆ. ಬಸವಣ್ಣನವರ ವ್ಯಕ್ತಿತ್ವ ಎಲ್ಲರಿಗೂ ದಾರಿದೀಪ. ಬಸವಣ್ಣ ಬದುಕು, ವಿಚಾರ, ವಚನ ಎಲ್ಲರಿಗೂ ಸ್ಪೂರ್ತಿಯಾಗಿದೆ. ಅವರ ಮಾರ್ಗದರ್ಶನದಲ್ಲಿ ಸಾಗೋಣ ಎಂದರು.

ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಮಾತನಾಡಿ, ನಾನು ಮಹಾಪೌರರಾಗಿ ಆಡಳಿತದಲ್ಲಿ ಇದ್ದಾಗ 2019ರ ಬಜೆಟ್ ನಲ್ಲಿ ಶ್ರೀ ಬಸವೇಶ್ವರರ ಪುತ್ಥಳಿ ನಿರ್ಮಾಣಕ್ಕೆ ಅನುದಾನ ನೀಡಿದ್ದೆ. ಈ ಭಾಗದ ಬಸವಭಿಮಾನಿಗಳಿಗೆ ಬಸವೇಶ್ವರನಗರದಲ್ಲಿ ಪುತ್ಥಳಿ ಇಲ್ಲ ಎಂಬ ಕೊರಗು ಇತ್ತು. ಇಂದು ಅವರ ಆಶಯದಂತೆ ನಿರ್ಮಾಣವಾಗಿದೆ. ಬಸವಣ್ಣನವರು ಎಲ್ಲ ಜಾತಿ ಧರ್ಮದವರಿಗೆ ಆದರ್ಶವಾಗಿದ್ದರು ಎಂದರು.

Leave a Reply