ಧಾರವಾಡ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ನಿವಾಸಿಯಾದ ಮಾಲತೇಶ ಮೈಲಾರಿ ಇವರು ತಮ್ಮ ಸರಕು ಸಾಗಾಣಿ ವಾಹನಕ್ಕೆ ರೂ.43,473 ಪ್ರೀಮಿಯಮ್ ಕಟ್ಟಿ ಪ್ಯಾಕೇಜ್ ಪಾಲಿಸಿಯನ್ನು ಮಾಡಿಸಿದ್ದರು. ಆ ವಾಹನದ ಆಯ್.ಡಿ.ವಿ. ಮೌಲ್ಯ ರೂ.12,54,475/-ಗೆ ಪಾಲಸಿ ಇತ್ತು. ದಿ:01/06/2022ರಂದು ಯಲ್ಲಾಪುರ ಠಾಣಾ ವ್ಯಾಪ್ತಿಯ ಬಿಡತ್ತಿ ಬ್ರೀಜ್ ಬಳಿ ಆ ವಾಹನ ಅಪಘಾತಕ್ಕೀಡಾಗಿ ವಾಹನ ಪೂರ್ತಿ ಜಖಂಗೊಂಡಿತ್ತು. ದೂರುದಾರ ಇದರ ಬಗ್ಗೆ ಯಲ್ಲಾಪುರ ಪೋಲಿಸ್ ಠಾಣೆಯಲ್ಲಿ ಪಿರ್ಯಾದಿಯನ್ನು ಕೊಟ್ಟಿದ್ದರು. ವಾಹನಕ್ಕಾದ ಜಖಂಗಳ ರಿಪೇರಿಗೆ ರೂ.10,54,472/- ತಗಲುತ್ತದೆ ಅಂತಾ ಮೆಕ್ಯಾನಿಕ್ ನಿಂದ ಅಂದಾಜು ವೆಚ್ಚದ ಸರ್ವೆ ಮಾಡಿಸಿದ್ದರು. ತಾವು ಮಾಡಿಸಿದ ವಿಮಾ ಪಾಲಿಸಿ ಚಾಲ್ತಿಯಲ್ಲಿದ್ದ ಕಾರಣ ಆ ಎಲ್ಲ ದಾಖಲೆಗಳೊಂದಿಗೆ ರೂ.10,54,472/-ಖರ್ಚು ವೆಚ್ಚ ಕೊಡುವಂತೆ ಎದುರುದಾರರಿಗೆ ಎಲ್ಲ ದಾಖಲೆಗಳೊಂದಿಗೆ ಕ್ಲೇಮ್ ಅರ್ಜಿ ಸಲ್ಲಿಸಿದ್ದರು. ಅಪಘಾತ ಕಾಲಕ್ಕೆ ಆ ವಾಹನದಲ್ಲಿ ಒಬ್ಬ ವ್ಯಕ್ತಿ ಅನಧಿಕೃತ ಪ್ರಯಾಣಿಕನಿದ್ದ ಮತ್ತು ಅದಕ್ಕೆ ವಾಯು ಮಾಲಿನ್ಯ ಪರಿಶೀಲನಾ ಪ್ರಮಾಣ ಪತ್ರ ಇಲ್ಲ ಅನ್ನುವ ಕಾರಣದ ಮೇಲೆ ಎದುರುದಾರ ವಿಮಾ ಕಂಪನಿಯವರು ದೂರುದಾರರ ಕ್ಲೇಮ ಅರ್ಜಿಯನ್ನು ತಿರಸ್ಕರಿಸಿದ್ದರು.
ಸರ್ವೋಚ್ಛ ನ್ಯಾಯಾಲಯದ ತೀರ್ಪುಗಳ ಪ್ರಕಾರ ಒಬ್ಬರು ಪ್ರಯಾಣಿಕರು ಹಾಗೂ ವಾಯು ಮಾಲಿನ್ಯ ಪರಿಶೀಲನೆಯ ಪ್ರಮಾಣ ಪತ್ರ ಇಲ್ಲದ ಸಂಗತಿಗಳು ವಿಮಾ ಪಾಲಸಿಯ ಷರತ್ತುಗಳನ್ನು ಉಲ್ಲಂಘಿಸಿದಂತೆ ಆಗುವುದಿಲ್ಲ. ಕಾರಣ ಎದುರುದಾರರು ತಮ್ಮ ಕ್ಲೇಮನ್ನು ತಿರಸ್ಕರಿಸಿರುವುದು ವಿಮಾ ನಿಯಮಕ್ಕೆ ವಿರುದ್ಧವಾಗಿದೆ ಹಾಗೂ ಅಂತಹ ಅವರ ನಡಾವಳಿಕೆ ಗ್ರಾಹಕರರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಅವರ ಮೇಲೆ ಸೂಕ್ತ ಕ್ರಮ ಕೈಗೊಂಡು ಪರಿಹಾರ ಕೊಡಿಸುವಂತೆ ದೂರುದಾರರು ದಿ.01/07/2023 ರಂದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.
- ವ್ಯಕ್ತಿಯನ್ನು ಗುರುತಿಸಿದರೆ ಸಮಾಜವನ್ನೇ ಗುರುತಿಸಿದಂತೆ: ಡಾ. ಎ ಆರ್ ಗೋವಿಂದಸ್ವಾಮಿ
- ಸಂವಿಧಾನ ಪೀಠಿಕೆ ದೇಶದ ಆತ್ಮವಿದ್ದಂತೆ: ಆದಿತ್ಯ ಚಟರ್ಜಿ
- ಕುಸಿಯುತ್ತಿರುವ ಪ್ರಜಾಪ್ರಭುತ್ವದ ವ್ಯಾಪ್ತಿ ಮತ್ತು ದೀರ್ಘಾವಧಿ ಪ್ರಧಾನಿಯ ಸಾಧನೆಗಳು
- ಜೀರಾ ರೈಸ್, ಘೀ ರೈಸ್ ಮತ್ತು ಲೆಮನ್ ರೈಸ್ ಮಾಡುವ ಸರಳ ವಿಧಾನ
- ಸಮಾಧಾನ್ ಸಮಾರೋಹ್ ಯಶಸ್ವಿಗೊಳಿಸಿ: ಡಾ.ಶಾಲಿನಿ ರಜನೀಶ್
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ ಸದಸ್ಯರು, ದೂರುದಾರರ ಸರಕು ಸಾಗಣಿ ವಾಹನದ ಮೇಲೆ ಎದುರುದಾರರ ವಿಮಾ ಪಾಲಸಿ ಚಾಲ್ತಿಯಲ್ಲಿದೆ. ಸರ್ವೋಚ್ಛ ನ್ಯಾಯಾಲಯದ ಇತ್ತೀಚಿನ ತೀರ್ಪುಗಳ ಪ್ರಕಾರ ಒಬ್ಬ ಪ್ರಯಾಣಿಕ ವಾಹನದಲ್ಲಿ ಪ್ರಯಾಣಿಸಿದ ಸಂಗತಿ ಅಥವಾ ಆ ವಾಹನಕ್ಕೆ ವಾಯು ಮಾಲಿನ್ಯ ಪ್ರಮಾಣ ಪತ್ರ ಇಲ್ಲ ಅನ್ನುವ ಸಂಗತಿಗಳು ಉಭಯತರ ಮಧ್ಯೆ ಆಗಿರುವ ವಿಮಾ ಪಾಲಿಸಿಯ ಷರತ್ತುಗಳ ಉಲ್ಲಂಘನೆ ಆಗುವುದಿಲ್ಲ ಅಂತಾ ನಿಯಮ ಇದೆ. ಆ ನಿಯಮಗಳನ್ನು ಪರಿಗಣಿಸಿದೆ ಎದುರುದಾರ ವಿಮಾ ಕಂಪನಿಯವರು ದೂರುದಾರರ ಕ್ಲೇಮ್ ಅರ್ಜಿಯನ್ನು ತಿರಸ್ಕರಿಸಿರುವುದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.
ವಿಮಾ ಪಾಲಿಸಿ ಚಾಲ್ತಿಯಿರುವುದರಿಂದ ದೂರುದಾರರ ವಾಹನಕ್ಕೆ ಆಗಿರುವ ನಷ್ಟವನ್ನು ಭರಿಸಿಕೊಡುವುದು ಎದುರುದಾರರ ವಿಮಾ ಕಂಪನಿಯವರ ಕರ್ತವ್ಯವಾಗಿದೆ ಅಂತಾ ಆಯೋಗ ಅಭಿಪ್ರಾಯಪಟ್ಟು ಕ್ಲೇಮ್ ತಿರಸ್ಕರಿಸಿದ ದಿನಾಂಕದಿಂದ ಶೆ.8%ರಂತೆ ಬಡ್ಡಿ ಲೆಕ್ಕ ಹಾಕಿ ರೂ.10 ಲಕ್ಷ ವಿಮಾ ಪರಿಹಾರ ದೂರುದಾರರಿಗೆ ಕೊಡುವಂತೆ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ತೊಂದರೆಗಾಗಿ ರೂ. 1 ಲಕ್ಷ ಪರಿಹಾರ ಮತ್ತು ರೂ.10,000/- ಪ್ರಕರಣದ ಖರ್ಚು ವೆಚ್ಚ ಕೊಡುವಂತೆ ಸಹ ಆಯೋಗ ಎದುರುದಾರರಿಗೆ ಸೂಚಿಸಿದೆ.


