ಧಾರವಾಡ: ಧಾರವಾಡ ಟೋಲ್ ನಾಕಾದ ಹತ್ತಿರ ಇರುವ ಹೋಟೇಲ್ ಸ್ನೇಹ ಸಾಗರದ ಮಾಲೀಕರಾದ ಸುಧಾಕರ ಶೆಟ್ಟಿ ಅನ್ನುವವರು ಹಲುವು ವರ್ಷಗಳಿಂದ ಎದುರುದಾರ ಕೇರ್ ಹೆಲ್ತ್ ವಿಮಾ ಕಂಪನಿಯ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದರು.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಅಕ್ಟೋಬರ್-2021 ರಿಂದ ಅಕ್ಟೋಬರ್-2023 ರವರೆಗಿನ ಅವಧಿಗೆ ರೂ.14,977/- ಪ್ರೀಮಿಯಮ್ ಹಣ ಕಟ್ಟಿ ದೂರುದಾರ ಕುಟುಂಬದ ಎಲ್ಲ ಸದಸ್ಯರ ಹೆಲ್ತ್ ವಿಮಾ ಪಾಲಸಿ ಪಡೆದಿದ್ದರು. ದಿ:12/11/2022 ರಂದು ದೂರುದಾರರ ಹೆಂಡತಿ ಮಣಿಪಾಲದ ಕಸ್ತೂರಿ ಬಾ ಆಸ್ಪತ್ರೆಯಲ್ಲಿ ಹರ್ನಿಯಾ ತೊಂದರೆ ಬಗ್ಗೆ ಒಳರೋಗಿಯಾಗಿ ಚಿಕಿತ್ಸೆ ಪಡೆದಿದ್ದರು. ಈ ಬಗ್ಗೆ ಅವರಿಗೆ ರೂ.37,035/- ಆಸ್ಪತ್ರೆಯ ಖರ್ಚು ವೆಚ್ಚ ಬಂದಿತ್ತು. ಆ ಖರ್ಚು ವೆಚ್ಚ ಭರಿಸಿಕೊಡುವಂತೆ ದಾಖಲೆಗಳ ಸಮೇತ ದೂರುದಾರರು ಎದುರುದಾರ/ವಿಮಾ ಕಂಪನಿಗೆ ಕ್ಲೇಮ್ಅರ್ಜಿ ಸಲ್ಲಿಸಿದ್ದರು. ದೂರುದಾರರಿಗೆ ರಕ್ತ ದೊತ್ತಡ ಕಾಯಿಲೆ ಇದ್ದು ವಿಮಾ ಪಾಲಸಿ ಪಡೆಯುವಾಗ ಆ ಸಂಗತಿಯನ್ನು ತಿಳಿಸಿಲ್ಲ ಅನ್ನುವ ಕಾರಣದ ಮೇಲೆ ಅವರ ಕ್ಲೇಮನ್ನು ಎದುರುದಾರ/ವಿಮಾಕಂಪ ನಿಯವರು ತಿರಸ್ಕರಿಸಿದ್ದರು.
ತಮ್ಮ ವಿಮಾ ಪಾಲಸಿ ಚಾಲ್ತಿಯಿದ್ದರೂ ಎದುರುದಾರರು ತಮ್ಮ ಕ್ಲೇಮನ್ನು ತಿರಸ್ಕರಿಸಿರುವುದು ಗ್ರಾಹಕರ ಹಿತ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ದೂರುದಾರ ಸುಧಾಕರ ಶೆಟ್ಟಿ ದಿ:04/07/2023 ರಂದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ ಸದಸ್ಯರು, ದೂರುದಾರರು ಪಡೆದಿರುವುದು ಕುಟುಂಬದ ವಿಮಾ ಪಾಲಸಿ ಇದೆ. ಅದರ ಪ್ರಕಾರ ಕುಟುಂಬದ ಯಾವುದೇ ಸದಸ್ಯರಿಗೆ ಆರೋಗ್ಯ ತೊಂದರೆ ಬಂದರೆ ಅದರ ಖರ್ಚು ವೆಚ್ಚ ನಿಭಾಯಿಸಿಕೊಡುವುದು ವಿಮಾ ಪಾಲಿಸಿಯ ನಿಯಮದಲ್ಲಿ ಇದೆ.
ಇತ್ತೀಚಿನ ದಿನಮಾನದಲ್ಲಿ ರಕ್ತದೊತ್ತಡ ಅಥವಾ ಸಕ್ಕರೆ ಕಾಯಿಲೆ ಸರ್ವೆ ಸಾಮಾನ್ಯ ಆರೋಗ್ಯ ಸಮಸ್ಯೆಗಳಾಗಿವೆ. ಆ ಕಾರಣದ ಮೇಲೆ ವಿಮಾ ಕ್ಲೇಮು ತಿರಸ್ಕರಿಸಲು ಬರುವುದಿಲ್ಲ ಅಂತಾ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶವಿದೆ. ಆದರೂ ಎದುರುದಾರ/ವಿಮಾ ಕಂಪನಿಯವರು ದೂರುದಾರರ ಕ್ಲೇಮನ್ನ ತಿರಸ್ಕರಿಸಿರುವುದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ. ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಕ್ಲೇಮು ತಿರಸ್ಕರಿಸಿದ ದಿನಾಂಕದಿಂದ ಶೆ8% ರಂತೆ ಬಡ್ಡಿ ಲೆಕ್ಕ ಹಾಕಿ ದೂರುದಾರ ಹೆಂಡತಿಯ ಆಸ್ಪತ್ರೆಯ ಖರ್ಚು ವೆಚ್ಚ ರೂ.38,035/- ಕೊಡುವಂತೆ ಆಯೋಗ ಎದುರುದಾರರಿಗೆ ನಿರ್ದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ತೊಂದರೆಗಾಗಿ ರೂ.50,000/- ಪರಿಹಾರ ಹಾಗೂ ರೂ.10,000/- ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಆಯೋಗ ಎದುರುದಾರ/ ವಿಮಾ ಕಂಪನಿಯವರಿಗೆ ಆಯೋಗ ಸೂಚಿಸಿದೆ.




