ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳ ಫಲಾನುಭವಿಗಳಿಂದ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

11 months ago

ಬಳ್ಳಾರಿ: ಕುರೇಕುಪ್ಪ ಪುರಸಭೆ ವತಿಯಿಂದ 2025-26 ನೇ ಸಾಲಿನ ಎಸ್‌ಎಫ್‌ಸಿ ಮುಕ್ತನಿಧಿ ಯೋಜನೆಯಡಿ ಶೇ.24.10 ಮತ್ತು ಶೇ.7.25 ರಡಿ ಕಾಯ್ದಿರಿಸಿದ ಅನುದಾನದಲ್ಲಿ ವೈಯಕ್ತಿಕ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಕುರೆಕುಪ್ಪ ಪುರಸಭೆಯ ಮುಖ್ಯಾಧಿಕಾರಿ ತಿಳಿಸಿದ್ದಾರೆ.

ಸೌಲಭ್ಯದ ವಿವರ: ಪುರಸಭೆ ಕುರೇಕುಪ್ಪ ವ್ಯಾಪ್ತಿಯಲ್ಲಿ ಬರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ಫಲಾನುಭವಿಗಳಿಗೆ ಲ್ಯಾಪ್‌ಟಾಪ್ ಪಡೆಯಲು, ಸ್ವಯಂ ಉದ್ಯೋಗ ಪ್ರಾರಂಭಿಸಲು ಬ್ಯಾಂಕ್‌ನಿಂದ ಪಡೆಯುವ ಸಾಲಕ್ಕೆ ಬ್ಯಾಕ್ ಎಂಡ್ ಸಬ್ಸಿಡಿ ಸಹಾಯಧನ, ಪ.ಜಾತಿ ಫಲಾನುಭವಿಗಳಿಗೆ ಲ್ಯಾಪ್‌ಟಾಪ್ ಪಡೆಯಲು(2024-25) ಸಹಾಯಧನ ನೀಡಲಾಗುತ್ತದೆ.

ಪುರಸಭೆ ಕುರೇಕುಪ್ಪ ವ್ಯಾಪ್ತಿಯಲ್ಲಿ ಬರುವ ವಿಶೇಷ ಚೇತನ ಫಲಾನುಭವಿಗಳಿಗೆ ಶ್ರವಣ ಯಂತ್ರ, ವೀಲ್‌ಚೇರ್, ವಾಕರ್ ಹಾಗೂ ಇತರೆ ಸಾಧನ ಸಲಕರಣೆಗಳ ಖರೀದಿಗಾಗಿ ಸಹಾಯ ಧನ, ಬ್ಯಾಂಕ್‌ನಿಂದ ಪಡೆಯುವ ಸಾಲಕ್ಕೆ ಬ್ಯಾಕ್ ಎಂಡ್ ಸಬ್ಸಿಡಿ ಸಹಾಯಧನ ನೀಡಲಾಗುತ್ತದೆ.

ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ಪುರಸಭೆ ಕಚೇರಿಯಿಂದ ಪಡೆದು ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ಜೂನ್ 24 ರೊಳಗಾಗಿ ಸಲ್ಲಿಸಬೇಕು.

ತಡವಾಗಿ ಬಂದ ಮತ್ತು ಅಪೂರ್ಣ ದಾಖಲಾತಿ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಹಾಗೂ ಹಿಂಬರಹ ನೀಡದೇ ತಿರಸ್ಕರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕುರೆಕುಪ್ಪ ಪುರಸಭೆ ಕಚೇರಿಗೆ ಸಂಪರ್ಕಿಸಬಹುದು.

Leave a Reply