ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ ತೂಫಾನ್

5 years ago

ಫರ್ಹಾನ್‍ ಅಖ್ತರ್, ಮೃಣಾಲ್ ಠಾಕೂರ್ ಮತ್ತು ರಾಕೇಶ್ ಓಂಪ್ರಕಾಶ್ ಮೆಹ್ರಾ ಸುಂದರವಾದ ಉದ್ಯಾನನಗರಿ – ಬೆಂಗಳೂರಿಗೆ ತೂಫಾನ್‍ಅನ್ನು ತಂದಿದ್ದಾರೆ

ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ತೂಫಾನ್‍ನ ವಿಶ್ವ ಪ್ರಥಮ ಪ್ರದರ್ಶನಕ್ಕೆ ಮುಂಚಿತವಾಗಿ, ತೂಫಾನ್‍ತಂಡವು ಸ್ಥಳೀಯ ಮಾಧ್ಯಮಗಳೊಂದಿಗೆ ವಿಶೇಷ ಸಂವಾದ ನಡೆಸಿತು.

ಎಕ್ಸೆಲ್‍ಎಂಟರ್ಟೈನ್ಮೆಂಟ್ ಮತ್ತು ರಾಂಪ್ ಪಿಕ್ಚರ್ಸ್ ಸಹಯೋಗದೊಂದಿಗೆ ಅಮೆಜಾನ್ ಪ್ರೈಮ್ ವಿಡಿಯೋ ಪ್ರಸ್ತುತಪಡಿಸಿರುವ ತೂಫಾನ್‍ಅನ್ನು ರಿತೇಶ್ ಸಿಧ್ವಾನಿ, ರಾಕೇಶ್‍ಒಂಪ್ರಕಾಶ್ ಮೆಹ್ರಾ ಮತ್ತು ಫರ್ಹಾನ್‍ಅಖ್ತರ್ ನಿರ್ಮಿಸಿದ್ದಾರೆ.

ಭಾರತದ ಮತ್ತು240 ದೇಶಗಳು ಮತ್ತು ಪ್ರಾಂತ್ಯಗಳಲ್ಲಿನ ಪ್ರೈಮ್ ಸದಸ್ಯರು ಜುಲೈ 16, 2021ರಿಂದ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಪ್ರತ್ಯೇಕವಾಗಿ ತೂಫಾನ್‍ ಅನ್ನು ವೀಕ್ಷಿಸಬಹುದು.

ಈ ಚಿತ್ರದಲ್ಲಿ ಫರ್ಹಾನ್ ಅಖ್ತರ್, ಮೃನಾಲ್ ಠಾಕೂರ್, ಪರೇಶ್ ರಾವಲ್, ಸುಪ್ರಿಯಾ ಪಾಠಕ್  ಕರ್ಪೂರ್, ಹುಸೇನ್ ದಲಾಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ ಮತ್ತುಇದನ್ನುರಾಕೇಶ್ ಓಂಪ್ರಕಾಶ್ ಮೆಹ್ರಾ ನಿರ್ದೇಶಿಸಿದ್ದಾರೆ.

ಬೆಂಗಳೂರು: ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ತೂಫಾನ್‍ ಅನ್ನುಬಿಡುಗಡೆ ಮಾಡುವ ಮುನ್ನ, ತೂಫಾನ್ ತಂಡ – ಫರ್ಹಾನ್‍ ಅಖ್ತರ್, ಮೃಣಾಲ್ ಠಾಕೂರ್ ಮತ್ತು ರಾಕೇಶ್‍ಒಂಪ್ರಕಾಶ್ ಮೆಹ್ರಾ – ವಿಶೇಷ ವರ್ಚುವಲ್ ಸಿಟಿ ಪ್ರವಾಸದ ಮೂಲಕ ಭಾರತದ ಉದ್ಯಾನ ನಗರ ಬೆಂಗಳೂರಿಗೆ ಭೇಟಿ ನೀಡಿದರು.

ಭಾರತದಾದ್ಯಂತ ಅನೇಕ ನಗರಗಳನ್ನು ಒಳಗೊಂಡ ಈ ರೀತಿಯ ವರ್ಚುವಲ್ ಪ್ರವಾಸದಲ್ಲಿ, ತಂಡವು ವಿವಿಧ ರಾಜ್ಯಗಳ ಮಾಧ್ಯಮಗಳು, ಅಭಿಮಾನಿಗಳು ಮತ್ತು ಸ್ಥಳೀಯ ಹೀರೋಗಳೊಂದಿಗೆ ಸಂವಹನ ನಡೆಸುತ್ತದೆ. ಇದು ನಿರೀಕ್ಷೆ ಮತ್ತುಉತ್ಸಾಹವನ್ನು ಹೆಚ್ಚಿಸುವಂತೆ ಚಲನಚಿತ್ರದ ತಯಾರಿಕೆಯ ಒಂದು ಝಲಕ್‍ಅನ್ನು ಮಾಧ್ಯಮಗಳಿಗೆ ಪ್ರತ್ಯೇಕವಾಗಿತೋರಿಸಲಾಯಿತು.

ತೂಫಾನ್‍ಗಾಗಿಅವರ ವರ್ಚುವಲ್ ಸಿಟಿ ಭೇಟಿಗಳ ಬಗ್ಗೆ ಉತ್ಸುಕರಾಗಿದ್ದ ಪ್ರಖ್ಯಾತ ನಟ ಮತ್ತು ಸಹ-ನಿರ್ಮಾಪಕ ಫರ್ಹಾನ್‍ಅಖ್ತರ್‍, “ಬೆಂಗಳೂರು ಕೇವಲ ಭಾರತದ ಐಟಿ ಅಥವಾ ಪಬ್ ನಗರ ಎಂದು ಸೀಮಿತವಾಗಿಲ್ಲದೆ, ಇತರ ಎಲ್ಲ ನಗರಗಳಂತೆ ಇದು ಉತ್ತಮ ಸಂಸ್ಕೃತಿ ಮತ್ತು ಸ್ಪೂರ್ತಿದಾಯಕ ಕಥೆಗಳ ದೇಶವಾಗಿದೆ. ಇದು ದೇಶದ ಕೆಲವು ಅಪ್ರತಿಮ ಕ್ರೀಡಾಪಟುಗಳ ನೆಲೆಯಾಗಿದೆ ಮತ್ತುಅವರ ಕೊಡುಗೆಯ ಬಗ್ಗೆ ನಮಗೆ ಹೆಮ್ಮೆತರುತ್ತಿದೆ. ಒಬ್ಬನಿರ್ಮಾಪಕ ಮತ್ತು ನಟನಾಗಿ, ಬೆಂಗಳೂರಿನಲ್ಲಿ ಸ್ಥಳೀಯ ಮಾಧ್ಯಮಗಳೊಂದಿಗೆ ಸಂವಹನ ನಡೆಸಲು ಮತ್ತು ತೂಫಾನ್‍ನ ಶಕ್ತಿಯುತ ಮತ್ತು ಸ್ಪೂರ್ತಿದಾಯಕ ಕಥೆಯ ಒಳನೋಟವನ್ನು ನೀಡಲು ನಾನು ಅವಕಾಶವನ್ನು ಪಡೆದಿದ್ದಕ್ಕಾಗಿ ನನಗೆ ಬಹಳ ಸಂತೋಷವಾಗಿದೆ. ಈ ನಗರವು ವರ್ಷದುದ್ದಕ್ಕೂ ನನಗೆ ನೀಡುತ್ತಿರುವ ಪ್ರೀತಿ ಮತ್ತು ಬೆಂಬಲವನ್ನು ನೋಡುವುದು ವಿಪರೀತ ಸಂತೋಷವಾಗಿದೆ. ವಿವಿಧ ಪಾಕಪದ್ಧತಿಗಳ ಹೊರತಾಗಿ, ಹಲವಾರು ಉದ್ಯಾನವನಗಳಲ್ಲಿ ಅಡ್ಡಾಡದೆ ಬೆಂಗಳೂರಿನ ಯಾವುದೇ ಭೇಟಿಯು ಪೂರ್ಣವಾಗುವುದಿಲ್ಲ. ನಾನು ಇಲ್ಲಿನ ವಾತಾವರಣವನ್ನು ಪ್ರೀತಿಸುತ್ತೇನೆ ಮತ್ತುಗದ್ದಲಮಯ ನಗರದ ಮಧ್ಯೆ ನಿಮಗೆ ಎದ್ದುಕಾಣುವ ಸುಂದರವಾದ ಉದ್ಯಾನವನಗಳು ನನಗೆ ಅತ್ಯಂತ ಇಷ್ಟ ಎಂದರು.

ಅವರ ಪಾತ್ರದ ಬಗ್ಗೆ ಮಾತಾಡಿ, “ತೂಫಾನ್‍ನಿಂದ ನಾನು ಕಲಿತಿದ್ದೇನೆಂದರೆ, ನಾವು ದೈಹಿಕವಾಗಿ ಎಷ್ಟೇ ಸದೃಢರಾಗಿದ್ದರೂ, ಬಾಕ್ಸರ್‍ನ ಸ್ಥಾನದಲ್ಲಿ ಹೆಜ್ಜೆ ಹಾಕುವುದು ಸಂಪೂರ್ಣ ಹೊಸ ಚೆಂಡಿನ ಆಟ ಎಂದು. ಪಾತ್ರಕ್ಕಾಗಿ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ತಯಾರಾಗಲು ನಾನು ದಿನಕ್ಕೆ 8 ರಿಂದ9 ಗಂಟೆಗಳ ಕಾಲ ಕಠಿಣ ತರಬೇತಿಯನ್ನು ಪಡೆಯುತ್ತಿರುವುದರೊಂದಿಗೆ, ಈ ಪಾತ್ರ ಮತ್ತು ಕಥೆಗಳು ನನ್ನ ಹೃದಯಕ್ಕೆ ಹತ್ತಿರವಾಗಿವೆ ಮತ್ತು ಪ್ರೇಕ್ಷಕರಿಗೂ ಸಹ ಅದೆ ರೀತಿ ಆಗುತ್ತದೆ ಎಂದು ನಾನು ಆಶಿಸುತ್ತೇನೆ” ಎಂದರು.

ವರ್ಚುವಲ್ ಸಿಟಿ ಭೇಟಿಗಳ ಬಗ್ಗೆ ತನ್ನ ಉತ್ಸಾಹವನ್ನು ಹಂಚಿಕೊಂಡ ನಟಿ ಮೃಣಾಲ್‍ಠಾಕೂರ್, “ಬೆಂಗಳೂರು ಕ್ರೀಡಾ ವಿಶ್ವಕ್ಕೆ ಉತ್ತಮ ಕೊಡುಗೆ ನೀಡಿದೆ ಎಂಬ ಫರ್ಹಾನ್‍ ಅವರ ಆಲೋಚನೆಗಳನ್ನು ನಾನು ಪ್ರತಿಧ್ವನಿಸುತ್ತೇನೆ ಮತ್ತು ಇಲ್ಲಿಂದ ಜನರೊಂದಿಗೆ ಸಂವಹನ ನಡೆಸುತ್ತಿರುವುದು ನನಗೆ ತುಂಬಾ ಸಂತೋಷವನ್ನು ತರುತ್ತದೆ. ವರ್ಷಗಳಲ್ಲಿ, ಬೆಂಗಳೂರು ಸಂಸ್ಕೃತಿ ಮತ್ತು ಪರಂಪರೆಯ ಮಿಶ್ರಣವಾಗಿ ಮಾರ್ಪಟ್ಟಿದೆ. ಈ ನಗರದರಲ್ಲಿರುವ ವೈವಿಧ್ಯತೆಯು ನನಗೆ ಬಹಳ ಇಷ್ಟ. ಅದರ ಜನರಿಂದ ಹಿಡಿದು ಪಾಕಪದ್ಧತಿಯವರೆಗೆ, ಭಾರತದೆಲ್ಲೆಡೆಯ ಪಾಕಪದ್ಧತಿಯನ್ನುಇಲ್ಲಿ ಸವಿಯಬಹುದು ಎಂದರು.

ಬೆಣ್ಣೆ ಮಸಾಲ ದೋಸೆಯಂತಹ ಕೆಲವು ವಿಶಿಷ್ಟ ರುಚಿಯ ತಿನಿಸುಗಳನ್ನು ಸವಿದದ್ದು ಈ ನಗರದ ಕುರಿತ ನನ್ನ ಕೆಲವು ಉತ್ತಮ ನೆನಪುಗಳಾಗಿವೆ. ನಾನು ಈ ನಗರಕ್ಕೆ ಭೇಟಿ ನೀಡಿದಾಗಲೆಲ್ಲಾ, ಬಿಡುವು ಮಾಡಿಕೊಂಡು ಸ್ಥಳೀಯ ಸಿಹಿ ಮತ್ತು ಖಾರದ ಖಾದ್ಯಗಳನ್ನು ಪ್ರಯತ್ನಿಸುತ್ತೇನೆ. ವಿವಿಧ ಪಾಕಪದ್ಧತಿಯಲ್ಲದೆ, ಬೆಂಗಳೂರು ಪ್ರವಾಸಿ ಸ್ಥಳಗಳಿಗೆ ಸಹ ಪ್ರಸಿದ್ಧವಾಗಿದ್ದು, ಅವು ನನ್ನ ಜೀವನದಲ್ಲಿಒಮ್ಮೆಯಾದರೂ ಭೇಟಿ ನೀಡಬಯಸುವ ಕೆಲವು ತಾಣಗಳಾಗಿವೆ” ಎಂದರು.

ತಮ್ಮ ಪಾತ್ರದ ಬಗ್ಗೆ ಮಾತನಾಡುತ್ತಾ, “ಅಲ್ಲಿ ರಿಂಗ್‍ನಲ್ಲಿರುವ ಪ್ರತಿಯೊಬ್ಬ ಪುರುಷನ ಹಿಂದೆ ಒಬ್ಬ ಮಹಿಳೆಯ ಬೆಂಬಲವಿದೆ. ಅಜೀಜ್ ಆಗಿ ರೂಪಾಂತರಗೊಳ್ಳುವ ಅಜ್ಜು ಭಾಯ್‍ ಅವರ ಸಂಪೂರ್ಣ ಪ್ರಯಾಣದಲ್ಲಿ ಅನನ್ಯಾ ಎಂಬ ನನ್ನ ಪಾತ್ರವು ವೇಗವರ್ಧಕವಾಗಿ ಕೆಲಸ ಮಾಡುತ್ತದೆ. ಈ ಹುಡುಗಿಯ ಆತ್ಮವಿಶ್ವಾಸ, ಸಹಾನುಭೂತಿ ಮತ್ತು ಉದಾರತೆಗಳು ಅವಳನ್ನು ಪ್ರತ್ಯೇಕಿಸುತ್ತವೆ. ಅನನ್ಯಾ ಪಾತ್ರವನ್ನು ನಿರ್ವಹಿಸಿದ ನಂತರ, ನಾನು ಹೆಚ್ಚು ದೃಢ ಮತ್ತು ಆತ್ಮವಿಶ್ವಾಸವನ್ನು ಹೊಂದಿದ ನಟಿಯಾಗಿದ್ದೇನೆ ಎಂದು ಅನಿಸುತ್ತಿದೆ ಎಂದರು.

ಬಾಲಿವುಡ್‍ನ ಪ್ರತಿಯೊಬ್ಬ ನಟಿಯೂ ನಟಿಸಲು ಆಶಿಸುವ ಪಾತ್ರಗಳಲ್ಲಿ ಇದು ಒಂದು ಎಂದು ನನಗೆ ವಿಶ್ವಾಸವಿದೆ. ಅನನ್ಯಾಳ ಪ್ರಬಲ ಮತ್ತು ತೀವ್ರವಾದ ಪಾತ್ರವನ್ನು ಮಾಡಲು ನನಗೆ ಈ ಅವಕಾಶ ದೊರೆತಿದೆ ಎಂದು ನನಗೆ ಖುಷಿಯಾಗಿದೆ ಎಂದರು.

ನಿರ್ದೇಶಕ ರಾಕೇಶ್‍ಒಂಪ್ರಕಾಶ್ ಮೆಹ್ರಾ ಮಾತಾಡಿ, “ಬೆಂಗಳೂರಿನಲ್ಲಿ ಪ್ರೇಕ್ಷಕರು ಬಹಳ ಸ್ನೇಹಪರರು. ಇಲ್ಲಿರುವ ಜನರ ವಿನಮ್ರ ಮತ್ತು ಸಭ್ಯ ಸ್ವಭಾವವು ನನಗೆ ಸಂಪೂರ್ಣವಾಗಿ ಮೆಚ್ಚುಗೆಯಾಗುತ್ತದೆ. ಸ್ಥಳೀಯ ಮಾಧ್ಯಮಗಳೊಂದಿಗೆ ಸಂವಹನ ನಡೆಸಿದ್ದು ಅದ್ಭುತವಾಗಿತ್ತು ಮತ್ತು ಈ ಎಲ್ಲಾ ವರ್ಷಗಳಲ್ಲಿ ಅವರು ತೋರಿಸಿದ ಎಲ್ಲ ಪ್ರೀತಿ ಮತ್ತು ಬೆಂಬಲಕ್ಕಾಗಿ ನನ್ನ ಹೃದಯದಾಳದಿಂದ ಅವರಿಗೆ ನಿಜವಾಗಿಯೂ ಧನ್ಯವಾದ ಹೇಳಲು ನಾನು ಬಯಸುತ್ತೇನೆ. ತೂಫಾನ್ ಗೂ ಸಹ ಅವರು ತಮ್ಮ ಪ್ರೀತಿ ಮತ್ತು ಆಶೀರ್ವಾದಗಳನ್ನು ಮುಂದುವರೆಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದರು.

“ತೂಫಾನ್‍ನ ಕಥೆಯು ಒಬ್ಬರ ಅಂತರಂಗದಲ್ಲಿ ಹಾದುಹೋಗುವ ಎಲ್ಲಾ ಸವಾಲುಗಳು ಮತ್ತು ಅವರು ಬಿಟ್ಟುಕೊಡದಿರುವುದು ಹೇಗೆ ಎಂಬುದರ ಕುರಿತಾಗಿದೆ. ಇದು ರೋಮಾಂಚನಕಾರಿ, ಚಿಂತನೆಯನ್ನು ಪ್ರಚೋದಿಸುವ ಮತ್ತು ಪ್ರೇರೇಪಿಸುವ ಒಂದು ಸಂಪೂರ್ಣ ಮನರಂಜನೆಯಾಗಿದೆ. ಆದ್ದರಿಂದ, ನಿಮ್ಮ ಕ್ಯಾಲೆಂಡರ್‍ಗಳಲ್ಲಿ ಗುರುತು ಹಾಕಿ ಮತ್ತು ಈ ಮನರಂಜನೆಯ ಚಿತ್ರವನ್ನು ಆನಂದಿಸಲು ನಿಮ್ಮ ಪಾಪ್‍ಕಾರ್ನ್ ಬಕೆಟ್‍ನೊಂದಿಗೆ ಸಿದ್ಧರಾಗಿ ಎಂದು ಕರೆನೀಡಿದರು.

ಎಕ್ಸೆಲ್‍ಎಂಟರ್ಟೈನ್ಮೆಂಟ್ ಮತ್ತು ರಾಂಪ್ ಪಿಕ್ಚರ್ಸ್ ಸಹಯೋಗದೊಂದಿಗೆ ಅಮೆಜಾನ್ ಪ್ರೈಮ್ ವಿಡಿಯೋ ಪ್ರಸ್ತುತಪಡಿಸಿದ ತೂಫಾನ್, ರಿತೇಶ್ ಸಿಧ್ವಾನಿ, ರಾಕೇಶ್‍ಒಂಪ್ರಕಾಶ್ ಮೆಹ್ರಾ ಮತ್ತು ಫರ್ಹಾನ್‍ಅಖ್ತರ್ ನಿರ್ಮಿಸಿದ ಸ್ಪೂರ್ತಿದಾಯಕ ಕ್ರೀಡೆ ಆಧಾರಿತ ಚಿತ್ರವಾಗಿದೆ. ಈ ಚಿತ್ರದಲ್ಲಿ ಮೃಣಾಲ್‍ಠಾಕೂರ್, ಪರೇಶ್‍ರಾವಲ್, ಸುಪ್ರಿಯಾ ಪಾಠಕ್‍ಕಪೂರ್, ಹುಸೇನ್‍ದಲಾಲ್, ಡಾ. ಮೋಹನ್ ಅಗಾಶೆ, ದರ್ಶನ್‍ಕುಮಾರ್ ಮತ್ತು ವಿಜಯ್‍ರಾಜ್ ಮುಖ್ಯ ಪಾತ್ರದಲ್ಲಿದ್ದು, ಫರ್ಹಾನ್‍ಅಖ್ತರ್ ನೇತೃತ್ವದ ಸಂಪೂರ್ಣ ತಾರಾಗಣವಿದೆ. ರಾಕೇಶ್‍ಓಂಪ್ರಕಾಶ್ ಮೆಹ್ರಾ ನಿರ್ದೇಶಿಸಿದ ಚಿತ್ರದ ಹೈ-ಆಕ್ಟೇನ್‍ಟ್ರೈಲರ್, ಒಬ್ಬ ಸ್ಥಳೀಯ ಗೂಂಡಾ ಅಜ್ಜು ಭಾಯ್ ವೃತ್ತಿಪರ ಬಾಕ್ಸರ್‍ ಅಜೀಜ್ ಅಲಿ ಆಗುವ ಪ್ರಯಾಣದ ಮೂಲಕ ನಮ್ಮನ್ನು ಕರೆದೊಯ್ಯುತ್ತದೆ. ತೂಫಾನ್‍ಎಂಬುದು ಭಾವೋದ್ರೇಕ ಮತ್ತು ಪರಿಶ್ರಮದಿಂದ ಉತ್ತೇಜಿಸಲ್ಪಟ್ಟ ಭರವಸೆ, ನಂಬಿಕೆ ಮತ್ತುಆಂತರಿಕ ಶಕ್ತಿಯ ಕಥೆಯಾಗಿದೆ.

ಜುಲೈ16, 2021 ರಿಂದ 240 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಹಿಂದಿ ಮತ್ತು ಇಂಗ್ಲಿಷ್‍ನಲ್ಲಿ ಏಕಕಾಲದಲ್ಲಿ ಪ್ರಥಮ ಪ್ರದರ್ಶನ ಕಾಣುವ ಪ್ರಪ್ರಥಮ ಚಿತ್ರವಾಗಲಿದೆ ತೂಫಾನ್.

ಚಿತ್ರದ ಸಾರಾಂಶ:

ಒತ್ತಾಯಪೂರ್ವಕ ಸಂದರ್ಭಗಳಲ್ಲಿ, ಡೊಂಗ್ರಿಯ ಬೀದಿಗಳಿಂದ ಬಂದ ಅನಾಥ ಹುಡುಗ ಸ್ಥಳೀಯ ಗೂಂಡಾ ಆಗಿ ಬೆಳೆಯುತ್ತಾನೆ. ಸರಿಯಾದ ಹಾದಿಯಲ್ಲಿ ಸಾಗಲು ಮಾರ್ಗದರ್ಶನ ನೀಡುವ ಅನನ್ಯಾ ಎಂಬ ಚುರುಕಾದ ಮತ್ತು ಸಹಾನುಭೂತಿಯುಳ್ಳ ಯುವತಿಯನ್ನು ಭೇಟಿಯಾದಾಗ ಅವನ ಜೀವನವು ಬದಲಾಗುತ್ತದೆ. ಪ್ರೀತಿ ಮತ್ತು ಮಾರ್ಗದರ್ಶನದೊಂದಿಗೆ, ಅವನು ಕ್ರೀಡೆಯಲ್ಲಿ ತಮ್ಮ ಕಲೆಯನ್ನು ಕಂಡುಕೊಳ್ಳುತ್ತಾನೆ ಮತ್ತು ವಿಶ್ವದರ್ಜೆಯ ಬಾಕ್ಸರ್ ಆಗುವ ಪ್ರಯಾಣವನ್ನು ಕೈಗೊಳ್ಳುತ್ತಾನೆ. ಇದೊಂದು ಸ್ಪೂರ್ತಿದಾಯಕ ಕಥೆ. ಬಡವರು ಮತ್ತು ಕೆಳಅಂಚಿನಲ್ಲಿರುವವರು, ಜೀವನ ಸನ್ನಿವೇಶಗಳಿಂದ ಪೆಟ್ಟುತಿಂದವರು ಸಹ ಜೀವನದ ಇನ್ನೊಂದು ಭಾಗವನ್ನು ಮರೆತು ಸರಿಯಾದ ಮಾರ್ಗವನ್ನು ಅಳವಡಿಸಿಕೊಳ್ಳುವ ಮೂಲಕ ರಾಷ್ಟ್ರದ ನಾಯಕರಾಗಬಹುದು. ತೂಫಾನ್‍ಅನ್ನು ಬಾಂಬೆಯಲ್ಲಿ ಚಿತ್ರೀಕರಿಸಲಾಗಿದೆ. ಬಾಂಬೆ ನಗರವು ಚಿತ್ರದ ಮೂರನೇ ಪಾತ್ರದಂತೆ. ಬಾಂಬೆ ಒಂದು ಮಹಾನಗರ ಮತ್ತು ಭಾರತದ ದೊಡ್ಡ ನಗರಗಳಲ್ಲಿ ಒಂದಾಗಿದೆ. ಇದು ನಿಜವಾದ ಕಾಸ್ಮೋಪಾಲಿಟನ್ ನಗರ ಮತ್ತು ವಿವಿಧ ಸಂಸ್ಕೃತಿಗಳು ಮತ್ತು ಧರ್ಮಗಳನ್ನು ಒಟ್ಟಿಗೆ ಬೆರೆಸುವ ಪಾತ್ರೆಯಾಗಿದೆ. ಮುಂಬೈ ಮುಂಬೈಕಾರರ ಉತ್ಸಾಹದಿಂದ ಮುನ್ನಡೆಯುತ್ತದೆ. ಈ “ಚೇತನ”ವು ನಿಜಕ್ಕೂ ಮುಂಬೈನ ಹೆಮ್ಮೆಯ ಆಸ್ತಿಯಾಗಿದ್ದು, ಅದನ್ನು ನಾವು ನಮ್ಮ ಪಾತ್ರಗಳ ಮೂಲಕ ಚಿತ್ರದಲ್ಲಿ ನೋಡಬಹುದು.

ಟ್ರೈಲರ್‍ಅನ್ನುಇಲ್ಲಿ ವೀಕ್ಷಿಸಿ: https://youtu.be/4qalsBNwZds

Leave a Reply