ಬೆಂಗಳೂರು: ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ನಾಗಭೂಷಣ ಮತ್ತು ಭೂಮಿ ಶೆಟ್ಟಿ ನಟಿಸಿರುವ ಕನ್ನಡ ಕಾಮಿಡಿ ಪ್ರೀಮಿಯರ್ ಚಲನಚಿತ್ರ “ಇಕ್ಕಟ್”ಜುಲೈ 21ರಂದು ಬಿಡುಗಡೆಯಾಗಲಿದೆ.
ಭಾರತದಲ್ಲಿ ಬಹುನಿರೀಕ್ಷಿತ ಪ್ರೈಮ್ ದಿನಾಚರಣೆಯ ಅಂಗವಾಗಿ, ಅಮೆಜಾನ್ ಪ್ರೈಮ್ ವಿಡಿಯೋ ತನ್ನ ಇತ್ತೀಚಿನ ನೇರ-ಸೇವೆಯ ಕೊಡುಗೆಯನ್ನು ಪ್ರಕಟಿಸಿದೆ – ಅದು ಹಾಸ್ಯಭರಿತ ಚಲನಚಿತ್ರ ಇಕ್ಕಟ್. ಚಿತ್ರದಲ್ಲಿ ನಟ ನಾಗಭೂಷಣ ಮತ್ತು ಭೂಮಿ ಶೆಟ್ಟಿ ನಟಿಸಿದ್ದಾರೆ ಮತ್ತು ಇಶಮ್ ಮತ್ತು ಹಸೀನ್ ಖಾನ್ ನಿರ್ದೇಶಿಸಿದ್ದಾರೆ.
ಪವನ್ ಕುಮಾರ್ ಸ್ಟುಡಿಯೋಸ್ ಚಲನಚಿತ್ರ ಮತ್ತು ರಾಕೆಟ್ ಸೈನ್ಸ್ ಎಂಟರ್‌ಟೈನ್‌ಮೆಂಟ್ ಪ್ರೊಡಕ್ಷನ್ ರವರ, ಇಕ್ಕಟ್ ಚಲನಚಿತ್ರ ಲಾಕ್‌ಡೌನ್‌ನ ಮಧ್ಯದಲ್ಲಿ ಶುರುವಾದ ಒಂದು ಕಥೆಯಾಗಿದೆ. ಇಕ್ಕಟ್ ಪದದ ಅರ್ಥವು ಲಾಕ್‌ಡೌನ್‌ನಂತೆಯೇ ‘ದಟ್ಟಣೆ’ಅಥವಾ ‘ಬಿಗಿಯಾದ ಪರಿಸ್ಥಿತಿಯಲ್ಲಿರುವುದು’.
ವಿಚ್ಛೇದನ ಬಯಸುತ್ತಿರುವ ದಂಪತಿಗಳ ಸುತ್ತ ಈ ಕಥೆ ಸುತ್ತುತ್ತದೆ, ಅಂದರೆ ಸಾಂಕ್ರಮಿಕ ರೋಗದಿಂದಾಗಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಿದಾಗ ಅವರು ಪರಸ್ಪರ ಒಟ್ಟಿಗೆ ಸಮಯ ಕಳೆಯಲು ಒತ್ತಡ ನಿರ್ಮಾಣವಾಗುತ್ತದೆ. ಆಗ ನಡೆಯುವ ಘಟನೆಗಳೇ ಈ ಸಿನಿಮಾದ ಕಥೆ. ಕೆಲವು ಸಾಂದರ್ಭಿಕ ಲಾಕ್‌ಡೌನ್ ಅನುಭವಗಳೊಂದಿಗೆ, ಈ ಚಿತ್ರವು ವೀಕ್ಷಕರನ್ನು ಹಾಸ್ಯ ಕೋಲಾಹಲಕ್ಕೆ ಕರೆದೊಯ್ಯಲು ಸಜ್ಜಾಗಿದೆ.
ಚಿತ್ರದಲ್ಲಿ ನಾಗಭೂಷಣ ಮತ್ತು ಭೂಮಿ ಶೆಟ್ಟಿಯವರೊಂದಿಗೆ, RJ ವಿಕಿ, ಸುಂದರ್ ವೀಣಾ, ಆನಂದ್ ನೀನಾಸಮ್ ಮತ್ತು ನವೀನ್ ಚೆಥಾನ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇಕ್ಕಟ್ 21ನೇ ಜುಲೈ 2021 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಗ್ಲೋಬಲ್ ರಿಲೀಸ್ ಆಗುತ್ತಿದೆ.




