ಬೆಂಗಳೂರು: ಬಸ್ ಕಂಡಕ್ಟರ್ ಮಹದೇವ ಅವರ ಮೇಲೆ ಎಂ ಘಟನೆಯ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಹಲ್ಲೆಗೊಳಗಾದ ಕಂಡಕ್ಟರ್ ಗೆ ಧೈರ್ಯ ಹೇಳಿದರು.
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
- ಫೆಲೋಶಿಪ್ಗೆ ಅರ್ಜಿ ಆಹ್ವಾನ
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದೆ ಮಹಾರಾಷ್ಟ್ರ ಏಕೀಕರಣ ಸಮಿತಿ ಬಹಳ ಗಲಾಟೆ ಮಾಡೋರು, ಕನ್ನಡ ಬಾವುಟ ಹಾಕೋಕು ಬಿಡ್ತಿರಲಿಲ್ಲ. ಈಗ ಎಲ್ಲಾ ನಿಯಂತ್ರಣಕ್ಕೆ ಬಂದಿದೆ ಎಂದರು.
ನಿನ್ನೆ ಬೆಳಗಾವಿಯಿಂದ ಸುಳೆಕೇರಿಗೆ ಬಸ್ ಹೋಗುತ್ತಿತ್ತು. ಈ ವೇಳೆ ಇಬ್ಬರು ಮಹಿಳೆಯರು ಟಿಕೆಟ್ ಪಡೆದಿದ್ದಾರೆ. ಯುವಕ ಝೀರೊ ಟಿಕೆಟ್ ಪಡೆದಿದ್ದನು. ಅದನ್ನ ಕಂಡಕ್ಟರ್ ಪ್ರಶ್ನಿಸಿದ್ದಾನೆ. ಭಾಷಾ ಸಮಸ್ಯೆ ಬೇರೆ, ಗೊತ್ತಿಲ್ಲ, ಯುವಕನ ಜೊತೆ ನಾಲ್ಕೈದು ಮಂದಿ ಸೇರಿಕೊಂಡು ಹಲ್ಲೆ ಮಾಡಿದ್ದಾರೆ. ಕೂಡಲೇ ಸ್ಥಳೀಯರ ನೆರವಿನಿಂದ ಪೊಲೀಸರಿಗೆ ದೂರು ಕೊಡಲಾಗಿದೆ. ಪೊಲೀಸರು ಆರೋಪಿಗಳನ್ನ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ ಎಂದರು.
ಕರ್ನಾಟಕದಲ್ಲಿ ಇದ್ದವರು ಕನ್ನಡ ಮಾತಾಡಲೇಬೇಕು. ಈ ರೀತಿ ಮಾತಾಡಿದ್ದು ಸರಿಯಲ್ಲ. ಮಾತೃಭಾಷೆ ಮರಾಠಿ ಮಾತಾಡಲಿ. ಆದರೆ ನಮ್ಮ ಭಾಷೆ ಕಲಿಯಲೇಬೇಕು. ಇದನ್ನು ಖಂಡನೆ ಮಾಡಲೇಬೇಕು. ಇಂತಹ ಘಟನೆ ನಡೆದಾಗ ಪಕ್ಷಾತೀತವಾಗಿ ಖಂಡನೆ ಮಾಡಬೇಕು ಎಂದರು.
ಇನ್ನು ಕಂಡಕ್ಟರ್ ಮಹದೇವ್ ವಿರುದ್ಧ ಪೋಕ್ಸೋ ಕೇಸ್ ದಾಖಲು ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪೋಕ್ಸೋ ಕೇಸ್ ಬೋಗಸ್ ಬಿಡಿ, ಬೇಕು ಅಂತಲೇ ದೂರು ಕೊಟ್ಟಿದ್ದಾರೆ. ಆ ಘಟನೆ ಆದ ಮೇಲೆ ದೂರು ಕೊಟ್ಟಿದ್ದಾರೆ. ಹಾಗಾಗಿ ಅದಕ್ಕೆ ಮಹತ್ವ ಇಲ್ಲ. ಈ ಸಂಬಂಧ ಗೃಹ ಮಂತ್ರಿಗಳ ಜೊತೆ ಮಾತನಾಡ್ತೇನೆ. ಅಲ್ಲಿನ ಎಸ್‌ಪಿ ಜೊತೆಗೂ ಮಾತನಾಡುತ್ತೇನೆ. ನಮ್ಮ ಎಂಡಿಯವರಿಗೂ ಸೂಚನೆ ಕೊಡ್ತೇನೆ. ಸ್ಥಳೀಯರು, ಕನ್ನಡಪರ ಸಂಘಟನೆಗಳು ಕಂಡಕ್ಟರ್ ಜೊತೆಗೆ ನಿಂತಿದ್ದಾರೆ. ಇದರಿಂದ ಕಂಡಕ್ಟರ್‌ಗಳ ಆತ್ಮಸ್ಥೈರ್ಯ ಹೆಚ್ಚಾಗಿದೆ ಎಂದರು.
ಗೃಹ ಮಂತ್ರಿಗಳು ಇಂತಹ ಪುಂಡಾಡಿಕೆ ಮಾಡೋರನ್ನ ಗಡಿಪಾರು ಮಾಡಬೇಕು. ಚಿತ್ರದುರ್ಗದಲ್ಲಿ ಮಹಾರಾಷ್ಟ್ರ ಬಸ್‌ಗೆ ಕನ್ನಡ ಬಾವುಟ ಕಟ್ಟಿದ್ದಾರೆ. ಮಹಾರಾಷ್ಟ್ರಕ್ಕೆ ನಮ್ಮ ಬಸ್‌ಗಳು ಹೋಗ್ತವೆ. ಅವರು ಕಪ್ಪು ಮಸಿ ಬಳಿಯುತ್ತಾರೆ. ಅವರು ಈ ರೀತಿ ಮಾಡಬಾರದು. ನಮ್ಮವರು ಈ ರೀತಿ ಮಾಡಬಾರದು ಎರಡೂ ಕಡೆಯಲ್ಲೂ ಸಂಯಮ ಕಾಪಾಡಬೇಕು ಎಂದು ಮನವಿ ಮಾಡಿದರು.



