ಯಲಹಂಕ ಹೋಗುವ ಈ ಬಸ್ (KA 51 AJ 7883) ನಾಗವಾರದಿಂದ ಥಣಿಸಂದ್ರ ಮಾರ್ಗವಾಗಿ ಸಾಗುತ್ತದೆ. ರಾತ್ರಿ 10.20 ಆಸುಪಾಸು ಸಮಯ. ಥಣಿಸಂದ್ರ ಬಳಿ ಖಾಯಂ ಆಗಿ ಬಸ್ ನಿಲ್ಲುವ ಜಾಗದಲ್ಲೇ ಒಂದಷ್ಟು ಹೆಣ್ಣು ಮಕ್ಕಳು (ಬುರ್ಖಾಧಾರಿಗಳೇ ಜಾಸ್ತಿ ಇದ್ದರು) ಬಸ್ಸಿಗೆ ಕಾಯುತ್ತಿದ್ದರು. ಸಣ್ಣಗೆ ಮಳೆ ಸುರಿಯುತ್ತಿತ್ತು. ಅವರನ್ನು ಮಳೆಯ ನಡುವೆ ನೋಡಿಯೂ ಬಸ್ ನಿಲ್ಲಿಸದ ಡ್ರೈವರ್ ಮುಂದೆ ಸಾಗಿದ. ಕಂಡಕ್ಟರ್ ನಡಿ ನಡಿ ಎಲ್ಲಾ ಬಿಟ್ಟಿ ಟಿಕೆಟ್, ಬಂದ್ ಬಿಡ್ತಾವೆ.. ಎನ್ನುತ್ತಾ ಡ್ರೈವರ್ ಹಿಂದಿನ ಸೀಟಲ್ಲಿ ಕೂತೇ ಇದ್ದ.
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
- ದಶಕ ಮೀರಿದ ಕಾನೂನು ಹಾದಿ ಮತ್ತು ಉತ್ತರವಿಲ್ಲದ ಪ್ರಶ್ನೆಗಳು
- ಪರಿಸರವನ್ನೂ ಉಳಿಸಬೇಕು, ಮಲೆನಾಡಿನ ರೈತರ ಬದುಕನ್ನೂ ಉಳಿಸಬೇಕು: ಮಧು ಬಂಗಾರಪ್ಪ
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
ಯಾಕ್ರಿ ಬಸ್ ನಿಲ್ಲಿಸಲಿಲ್ಲ ಎಂದೆ. ಅವರು ಬಸ್ ಸ್ಟಾಪ್ ಹತ್ತಿರ ನಿಂತಿಲ್ಲ ಎಂದ. ಅಲ್ಲಾರೀ ಬಸ್ ಖಾಯಂ ಆಗಿ ನಿಲ್ಲುವ ಜಾಗ ಅದೇ ಅಲ್ವಾ ಎಂದೆ. ಪಾಪ ಅವರು ಹೆಣ್ಣು ಮಕ್ಕಳು ಬಿಟ್ಟಿ ಟಿಕೆಟ್ ಕೊಡಬೇಕು ಅಂತೀರಲ್ಲಾ ಇದು ನ್ಯಾಯವೇ ಅಂದೆ. ಕೂತ್ಕೊಳ್ಳಿ ಸುಮ್ನೆ, ನಿಮಗೆ ಟಿಕೆಟ್ ಸಿಕ್ಕಿದೆಯಲ್ಲಾ ಕೂತ್ಕೊಳ್ಳಿ ನಮಗೇನು ಮಾಡಬೇಕು ಅಂತ ಗೊತ್ತಿದೆ ಅಂದ. ನಾನು ನ್ಯಾಯವಾಗಿಯೇ ಕೇಳ್ತಿರೋದು ಅವರ ಪರವಾಗಿ ದನಿ ಎತ್ತೋದರಲ್ಲಿ ತಪ್ಪೇನಿದೆ ಎಂದೆ. ನಾನು ಕಂಡಕ್ಟರ್ ಫೊಟೊ ತಗೊಂಡೆ, ಕಂಡಕ್ಟರ್ ಕೂಡ ನನ್ನ ಫೊಟೊ ತಗೊಂಡರು.
ಹೆಣ್ಮಕ್ಕಳಿಗೆ ಆಧಾರ ಕಾರ್ಡ್ ಚೆಕ್ ಮಾಡಿ ಫ್ರೀ ಟಿಕೆಟ್ ಕೊಡೋದು ಅಷ್ಟೊಂದು ಕಿರಿ ಕಿರಿಯ ಕೆಲಸವೇ? ಈ ನೀಲಿ ಬಸ್ ಕಂಡಕ್ಟರ್ ಮತ್ತು ಡ್ರೈವರ್ ಗಳು ಪ್ರಯಾಣಿಕರ ಜೊತೆ ಇಷ್ಟು ಅನುಚಿತವಾಗಿ ವರ್ತಿಸಿದರೆ ಹೇಗೆ?
- ದಿಲಾವರ್ ರಾಮದುರ್ಗ, ಹಿರಿಯ ಪತ್ರಕರ್ತರು



