ಬಲುದಿನಗಳಿಂದ ಕಾಯುತ್ತಿದ್ದ ಪುಸ್ತಕ ಇದು!

2 years ago

#longawaited #book #ಸರಿಗನ್ನಡಂಗೆಲ್ಗೆ #ಸಿರಿಗನ್ನಡಂಗೆಲ್ಗೆ #sirigannadamgelge #bookpromotion

ಫೇಸ್‌ಬುಕ್ಕಿನಲ್ಲಿ ನಾನು ಕಾದು ನೋಡುವ ಕೆಲವೇ ಕೆಲವು ಬಳಕೆದಾರರಲ್ಲಿ ಒಬ್ಬರು ಅಪಾರ. “ಚಕ್ಕುಬುಕ್ಕು” ಇವರದೆಂದು ಗೊತ್ತಾದದ್ದು ಇತ್ತೀಚೆಗೆ. ಕನ್ನಡದಲ್ಲಿ ವೆಬ್ ಮಾಧ್ಯಮದ ಸಾಧ್ಯತೆಯನ್ನು ಸರಿಯಾದ ಹಾದಿಯಲ್ಲಿ ಮೊದಲು ಗುರುತಿಸಿಕೊಂಡ ಜಾಲತಾಣ ಅದು. ಆ ಪಟ್ಟಿಗೆ ಇನ್ನೂ ಒಂದು ಕೈಬೆರಳೆಣಿಕೆಯ ಸೇರ್ಪಡೆ ಕೂಡ ಆಗಿಲ್ಲ ಎಂದರೆ ಅದು ಚಕ್ಕುಬುಕ್ಕು ಎಂಬ ಅಲ್ಪಾಯುಷಿಯ ಹೆಗ್ಗಳಿಕೆ.

ಅಪಾರ (Raghu Apara) ಅವರು ಭಾಷೆ ಮತ್ತು ಚಿತ್ರಗಳನ್ನು ಬಳಸಿ ಆಡುವ ಆಟಗಳೆಲ್ಲ ಇಲ್ಲಿ ಅವರ ಫೇಸ್ ಬುಕ್ ಗೋಡೆಯ ಮೇಲೆ ನನಗಂತೂ ಅಪ್ಯಾಯಮಾನ. ಬಣ್ಣಗಳ ಬಳಕೆ, ಚೌಕಟ್ಟಿನೊಳಗೆ ಸಂತುಲನ, ಕಟ್ಟಿಕೊಡುವ ಬರಹವೇ ಇರಲಿ ಅಥವಾ ಚಿತ್ರವೇ ಇರಲಿ ಅದು ಹೊರಹೊಮ್ಮಿಸುವ “ಫ್ರೆಷ್‌ನೆಸ್” ನನಗಿಷ್ಟ.

ಇಂತಹ ಅಪಾರ ನನ್ನ ಇತ್ತೀಚೆಗಿನ #mಡಾಕ್ಯುಮೆಂಟ್ ಪುಸ್ತಕಕ್ಕೆ ಆಕರ್ಷಕ ಮುಖಪುಟವನ್ನು ಮಾಡಿಕೊಟ್ಟಿದ್ದಾರೆ.

ಈ ಸರಿಗನ್ನಡಂ ಗೆಲ್ಗೆಯ ಹಲವು ಟೀಸರ್ ಗಳನ್ನು ಫೇಸ್‌ಬುಕ್ಕಿನಲ್ಲಿ ನೋಡಿದ ಬಳಿಕ, ಓದಬೇಕೆಂದು ನಿರ್ಧರಿಸಿದ್ದೆ. ಪುಸ್ತಕ ಇಂದು ತಲುಪಿತು. ಅದು ಬರುವಾಗ ಸಣ್ಣ ವಿಳಂಬ ಆಗಿರುವ ಬಗ್ಗೆ ಪ್ರಕಾಶಕರು ಇಲ್ಲೇ ಹೇಳಿಕೊಂಡಿದ್ದರು. ಈಗ ಪುಸ್ತಕ “ಕಾರ್ಪೋರೇಟ್” ದೊಡ್ಡಸ್ಥಿಕೆಯನ್ನು ಸಾರುವ “ದೃಷ್ಟಿಬೊಟ್ಟು” ಹಚ್ಚಿಕೊಂಡು ಬಂದಿಳಿದಿದೆ. ಆ ದೃಷ್ಟಿ ಸ್ಮಾರಕವನ್ನು ಮುಂದಿನ ಆವೃತ್ತಿಗಳಲ್ಲೂ ಹಾಗೇ (ಹಚ್ಚುಬೊಟ್ಟು ರೂಪದಲ್ಲಿ) ಉಳಿಸಿಕೊಳ್ಳಬೇಕೆಂದು ಪ್ರಕಾಶಕರಲ್ಲಿ ಈ ಓದುಗನ ವಿನಮ್ರ ಮನವಿ.

ಭಾಷೆಗೆ ಸಂಬಂಧಿಸಿದ ಕೆಲಸಗಳನ್ನೇ ಮಾಡುವ ನನಗೆ, ನನ್ನ ತಂಡಕ್ಕೆ ಬಹಳ ಉಪಯುಕ್ತ ಪುಸ್ತಕ ಇದು. ನಮ್ಮ ಕಚೇರಿ ಗ್ರಂಥಾಲಯದ ಕನ್ನಡ ಪದ ಸಂಬಂಧಿ ಪುಸ್ತಕಗಳ ಸಂಗ್ರಹಕ್ಕೆ ಕೇಳದೇ ದೊರೆತ ಈ ಕೊಡುಗೆಗಾಗಿ (ಅದೂ ರಾಜ್ಯೋತ್ಸವದ ಮುನ್ನಾದಿನ!), ಅಪಾರ ಅವರಿಗೆ ಥ್ಯಾಂಕ್ಸ್!

ಇಲ್ಲಿನ ಪದಗಳನ್ನು ಅಕಸ್ಮಾತ್ ಬಳಸಿಕೊಂಡರೆ, ಅದಕ್ಕೂ “ಕಾಪಿರೈಟ್” ಅಂದುಕೊಂಡು “ದೃಷ್ಟಿಬೊಟ್ಟಿನವರು” ಬರುವರೇ… ಗೊತ್ತಿಲ್ಲ!!

– ರಾಜಾರಾಮ್ ತಲ್ಲೂರ್

Leave a Reply