ಬೆಂಗಳೂರು: ಪ್ರಯಾಗ್‌ರಾಜ್ ಕುಂಭಮೇಳದಲ್ಲಿ ಕಾಲ್ತುಳಿತಕ್ಕೆ ಬಲಿಯಾದ ಕರ್ನಾಟಕದ ನಾಲ್ಕು ಜನರ ಮೃತದೇಹವನ್ನು ವಿಮಾನದ ಮೂಲಕ ಇಂದು ಸಂಜೆ ಬೆಳಗಾವಿಗೆ ರವಾನಿಸಲಾಗುವುದು. ನಂತರ ಕುಟುಂಬಸ್ಥರಿಗೆ ನೀಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.
- ಪ್ರೊ. ಬರಗೂರು ಅವರ ದಿಟ್ಟ ಹೆಜ್ಜೆ – 25 ವರ್ಷಗಳ ಸಾರ್ಥಕ ಯಾನ!
- ಸಂಪುಟದಿಂದ ಹೊರಗಿಟ್ಟಿರುವುದು ನನಗೆ ಸಿಕ್ಕ ಪ್ರತಿಫಲವೇ?: ಬಿ ಆರ್ ಪಾಟೀಲ್
- ಸಂಪುಟದಲ್ಲಿ ಭ್ರಷ್ಟಾಚಾರಿಗಳು, ಪೇಮೆಂಟ್ ಕೋಟಾ ಮೂಲಕ ಅವಕಾಶ ಗಿಟ್ಟಿಸಿಕೊಂಡವರು ಇದ್ದಾರೆ: ಆರ್.ಅಶೋಕ
- ಬಿಜೆಪಿ ನಾಯಕರು ಸಂವಿಧಾನ ಓದಿದನ ನಂತರ ಕಾಂಗ್ರೆಸ್ ಲೆಟರ್ಹೆಡ್ ಓದಲಿ: ಬಿ.ಕೆ.ಹರಿಪ್ರಸಾದ್
- ನೀರು ಸತ್ಯಾಗ್ರಹ ಕೃತಕ ಬುದ್ಧಿಮತ್ತೆ ಮತ್ತು ಕೃಷಿ ಕುರಿತು ಗಂಭೀರ ಚರ್ಚೆ
ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆಯ ನಂತರ ಪತ್ರಕರ್ತರ ಜೊತೆ ಮಾತನಾಡಿದ ಅವರು, “ಕುಂಭಮೇಳ ದುರಂತದಲ್ಲಿ ಬೆಳಗಾವಿ ತಾಲೂಕು ಯಲ್ಲೂರು ರಸ್ತೆ ವಡಗಾಂವ್ ಭಾಗದ ಮೇಘಾ ದೀಪಕ್ ಹತ್ತರವರ್ (24), ಜ್ಯೋತಿ ದೀಪಕ್ ಹತ್ತರವರ್ (44) ಹಾಗೂ ಬೆಳಗಾವಿ ತಾಲೂಕಿನ ಶೆಟ್ಟಿಗಲ್ಲಿ ಭಾಗದ ಅರುಣಾ ಖೋರ್ಪಡೆ (61), ಮಹಾದೇವಿ ಹಣಮಂತ ಬಾವಣೂರ (48) ಮೃತಪಟ್ಟಿದ್ದಾರೆ. ಮೃತರು ಬೆಳಗಾವಿ ಜಿಲ್ಲೆಯವರಾಗಿದ್ದು, ದೆಹಲಿಯಿಂದ ಬೆಳಗಾವಿಗೆ ವಿಮಾನದ ಮೂಲಕ ಮೃತದೇಹಗಳನ್ನು ಇಂದು ಸಂಜೆ ರವಾನಿಸಲಾಗುವುದು ಎಂದರು.
ಮೃತರ ಶರೀರಗಳನ್ನು ನಮ್ಮ ಅಧಿಕಾರಿಗಳು ಆಂಬ್ಯುಲೆನ್ಸ್ ಮೂಲಕ ಉತ್ತರಪ್ರದೇಶದಿಂದ ದೆಹಲಿಗೆ ತಂದಿದ್ದಾರೆ. ಮೃತರ ದೇಹಗಳನ್ನು ಏರ್ ಟ್ರಾನ್ಸ್‌ಪೋರ್ಟ್ ಮಾಡುವ ಮೊದಲು ದೆಹಲಿಯಲ್ಲಿ ಎಂಬಾಲ್ಮಿಂಗ್ ಮಾಡಬೇಕು. ಪ್ರಸ್ತುತ ಆ ಕೆಲಸ ನಡೆಯುತ್ತಿದ್ದು, ಸಂಜೆ 3.20ಕ್ಕೆ ವಿಮಾನದಲ್ಲಿ ಮೃತದೇಹಗಳನ್ನ ದೆಹಲಿಯಿಂದ ಬೆಳಗಾವಿಗೆ ತರಲಾಗುವುದು. ಮೃತದೇಹದ ಜೊತೆಗೆ ಕುಟುಂಬಸ್ಥರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಪ್ರಯಾಣಿಸಲಿದ್ದಾರೆ ಎಂದರು.
ಮೃತರ ಕುಟುಂಬದವರಿಗೆ ಸರ್ಕಾರದ ವತಿಯಿಂತ ನಾನು ಸಂತಾಪ ವ್ಯಕ್ತಪಡಿಸುತ್ತೇನೆ. ಅಲ್ಲದೆ, ಮೃತರ ದೇಹವನ್ನು ದೆಹಲಿಯಿಂದ ಬೆಳಗಾವಿಗೆ ರವಾನಿಸಲು ಉಂಟಾಗುವ ಎಲ್ಲಾ ಖರ್ಚನ್ನು ಈಗಾಗಲೇ ಸರ್ಕಾರವೇ ಭರಿಸಿದೆ. ಸೂಕ್ತ ಹರಿಹಾರವನ್ನೂ ನೀಡಲಿದೆ. ಆದರೆ, ಪ್ರಾಣನಷ್ಟಕ್ಕೆ ಯಾವ ಪರಿಹಾರವೂ ಸಮಾನವಲ್ಲ. ಕುಟುಂಬಸ್ಥರ ಜೊತೆ ಸರ್ಕಾರ ಸಹಾನುಭೂತಿ ಇದೆ ಎಂದರು.
ಈಗಾಗಲೇ ನಮ್ಮ ಅಧಿಕಾರಿಗಳು ದೆಹಲಿಯಲ್ಲಿದ್ದು ದುರಂತದಲ್ಲಿ ಸಿಲುಕಿದ ಕರ್ನಾಟಕದ ಪ್ರವಾಸಿಗರಿಗೆ ಅಗತ್ಯ ಎಲ್ಲಾ ವ್ಯವಸ್ಥೆಗಳನ್ನೂ ಮಾಡಿಕೊಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಏತನ್ಮಧ್ಯೆ ಇಲಾಖೆಯ ಸಹಾಯವಾಣಿಗೂ ಕರೆಗಳು ಬಂದಿವೆ. ಆ ದೂರವಾಣಿ ಕರೆ ಆಧಾರದಲ್ಲಿ ಕುಂಭಮೇಳಕ್ಕೆ ಹೋದವರನ್ನು ನಾವು ಸಂಪರ್ಕಿಸಿದ್ದು, ಬಹುತೇಕರು ಸಂಪರ್ಕಕ್ಕೆ ಸಿಕ್ಕಿದ್ದಾರೆ. ಇಶಾ ಫೌಂಡೇಶನ್ ಕಡೆಯಿಂದ ಕುಂಭಮೇಳಕ್ಕೆ ತೆರಳಿದವರ ಪೈಕಿ ಓರ್ವ ವ್ಯಕ್ತಿ ಫೋನ್ ರಿಂಗ್ ಆಗುತ್ತಿದೆ, ಆದರೆ, ಆತ ಕರೆಯನ್ನು ಸ್ವೀಕರಿಸುತ್ತಿಲ್ಲ. ಹೀಗಾಗಿ ಆತನನ್ನು ಹುಡುಕುವ ಕೆಲಸವೂ ಮುಂದುವರೆದಿದೆ ಎಂದರು.
ಕರ್ನಾಟಕದ ಎಷ್ಟು ಮಂತಿ ಕುಂಭಮೇಳಕ್ಕೆ ತೆರಳಿದ್ದಾರೆ.? ಈ ಪೈಕಿ ದುರಂತದಲ್ಲಿ ಸಿಲುಕಿದವರೆಷ್ಟು..? ಗಾಯಾಳುಗಳೆಷ್ಟು..? ಮೃತರ ಸಂಖ್ಯೆ ಎಷ್ಟು..? ಎಂಬ ಕುರಿತು ಉತ್ತರಪ್ರದೇಶ ಸರ್ಕಾರದಿಂದ ನಮಗೆ ಯಾವುದೇ ಮಾಹಿತಿ ಈವರೆಗೆ ಲಭ್ಯವಾಗಿಲ್ಲ. ಹೀಗಾಗಿ ಕರ್ನಾಟಕದ ಐಎಎಸ್ ಅಧಿಕಾರಿ ಹರ್ಷಲ್ ಬೋಯಲ್ ಅವರೇ ಸ್ವತಃ ಕುಂಭಮೇಳದ ಸ್ಥಳಕ್ಕೆ ತೆರಳಿದ್ದು, ಅಲ್ಲಿನ ಸ್ಥಳೀಯ ಆಸ್ಪತ್ರೆಗೆ ಭೇಟಿ ನೀಡಿ ನಮ್ಮ ರಾಜ್ಯದ ಜನ ಅಲ್ಲಿ ಗಾಯಾಳುಗಳಾಗಿ ಇದ್ದಾರ ಎಂದು ಪರಿಶೀಲಿಸುತ್ತಿದ್ದಾರೆ ಎಂದರು.




