ಮಹಾತ್ಮ ಗಾಂಧೀಜಿ ಎಂದರೆ ಬಹಳಷ್ಟು ಮಂದಿಗೆ ಪ್ರೀತಿ, ಭಕ್ತಿ, ಗೌರವ, ಪ್ರತಿ ಮಾತಿನಲ್ಲೂ ಇವರ ವಿಚಾರ ಇರಲೇಬೇಕು. ಆದರೆ ಸರಳತೆಯ ಲವಶೇಷ, ಸತ್ಯವಂತಿಕೆ ಸಾಸಿವೆ ಕಾಳಿನಷ್ಟು ಬಹಳಷ್ಟು ಜನರ ಬದುಕಿನಲ್ಲಿ ಕಾಣುವುದೇ ಇಲ್ಲ.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ಶೋಷಿತರ ಮೇಲೆ ಅದೆಷ್ಟೊಂದು ಅಭಿಮಾನ ಮಾತಿನ ಪ್ರತಿಯೊಂದು ಸಾಲಿನಲ್ಲೂ ಅವರಿಗೆ ಆಗುತ್ತಿರುವ ಶೋಷಣೆಗಳ ಬಗ್ಗೆ ಆವೇಶದ ನುಡಿಗಳು ಇರಲೇಬೇಕು. ಆದರೆ ಅವಕಾಶಗಳು ಒದಗಿ ಬಂದಾಗ ತಮಗಾಗಿ, ತಮ್ಮವರಿಗಾಗಿ, ಸಾಕು ಎನಿಸಿದಾಗಷ್ಟೇ ಬೇರೆಯವರಿಗೆ ಬಿಟ್ಟುಕೊಡುವ ಮಾತು.
ರೈತರ ಮೇಲೆ ಎಲ್ಲಿಲ್ಲದ ಕಾಳಜಿ. ಆದರೆ ತಮ್ಮ ಮನೆಯವರು ಯಾರೂ ಹೊಲಗದ್ದೆಗಳಲ್ಲಿ ಬೆವರು ಸುರಿಸಬಾರದು, ಸೈನಿಕರು ಎಂದರೆ ಅದೆಷ್ಟು ಭಕ್ತಿ, ಆದರೆ ತಮ್ಮ ಮನೆಯ ಕುಡಿಗಳು ಮಾತ್ರ ತಮ್ಮಂತೆ ಚುನಾಯಿತ ಪ್ರತಿಭೆಗಳಾಗಬೇಕು, ಇಲ್ಲವೇ ಪ್ರಭಾವಿ ಅಧಿಕಾರಿಗಳಾಗಬೇಕು, ಉದ್ಯಮಿಗಳಾಗಬೇಕು, ಉನ್ನತ ಶಿಕ್ಷಣ ಪಡೆದು ವಿದೇಶಗಳಲ್ಲಿ ನೆಲೆಸಬೇಕು.
ಸಮಾಜದಲ್ಲಿ ಸಮಾನತೆ ಇರಬೇಕು, ಜಾತೀಯತೆ ತೊಲಗಬೇಕು ಎಂಬೆಲ್ಲ ಮಾತುಗಳು ಎತ್ತರದ ಸ್ವರದಲ್ಲಿ ವೇದಿಕೆಗಳ ಮೇಲೆ ಕೇಳಿ ಬರದಿದ್ದರೆ ಇವರ ಭಾಷಣಗಳಲ್ಲಿ ಸಾರವೇ ಇರುವುದಿಲ್ಲ. ಆದರೆ ಪ್ರಜಾಪ್ರಭುತ್ವದ ಪ್ರಭುವಿನ ವಾಸದ ಮನೆ ಒಂದೆರಡು ಚದರ, ಅದು ಪ್ರಾಣಿ ವಾಸಿಸಲು ಯೋಗ್ಯವಲ್ಲದ ಮಟ್ಟದ ಮನೆಗಳು, ಸಂಬಂಧಗಳು ಬೆಳೆಸಬೇಕಾದಾಗ ಮತ್ತೆ ಇವರ ಮಟ್ಟದ ಕುಟುಂಬಗಳ ಹುಡುಕಾಟ ನಡೆಯುತ್ತಲೇ ಇರುತ್ತದೆ. ಒಂದೊಮ್ಮೆ ಜಾತಿ ಬಿಟ್ಟರು ಆರ್ಥಿಕವಾಗಿ, ಸಾಮಾಜಿಕವಾಗಿ ಇವರ ಮಟ್ಟ ಇರುವವರಷ್ಟೇ ಇವರಿಗೆ ಬೇಕು.
ವಾಕರಿಕೆ ಬರುವಷ್ಟು ತಿಂದದ್ದಾಗಿದೆ, ಕುರ್ಚಿಗಳು ಸವೆಯುವಷ್ಟು ಅಧಿಕಾರದಲ್ಲಿ ಕುಳಿತಿದ್ದಾಗಿದೆ, ರಾಜಕೀಯ, ಅಧಿಕಾರಿ ವಲಯ ಹಲವಾರು ದಶಕಗಳಿಂದ ಇವರ ಪಾಲು ಆಗಿದ್ದರು ಸಾಕು ಎನ್ನುವ ಮಾತು ಇವರಲ್ಲಿ ಬರುವುದೇ ಇಲ್ಲ. ಯಾವ ಬದಲಾವಣೆಯನ್ನು ಬಯಸಲು ಇವರು ಸಿದ್ಧರಿಲ್ಲ.
– ಕೆ.ಎಸ್.ನಾಗರಾಜ್, ಬೆಂಗಳೂರು




