ಮಾನ್ಯ ಪ್ರಧಾನ ಮಂತ್ರಿಗಳು ಲೋಕಸಭೆಯಲ್ಲಿ ರಾಷ್ಟ್ರಪತಿಗಳ ವಂದನಾ ನಿರ್ಣಯದ ಮೇಲೆ ಉತ್ತರವನ್ನು ಕೊಡುತ್ತಾ ಆಡಿರುವ ಮಾತುಗಳೆಲ್ಲವೂ ಕಳೆದ ಹತ್ತು ವರ್ಷದ ಅವಧಿಯಲ್ಲಿ ಪ್ರತಿ ಲೋಕಸಭಾ ಅಧಿವೇಶನದಲ್ಲಿ ಪ್ರಸ್ತಾಪವಾಗಿರುವ ವಿಚಾರಗಳೇಯಾಗಿದೆ. ವಿಶೇಷವಾಗಿ ಕಾಂಗ್ರೆಸ್ ಪಕ್ಷವನ್ನ ಹೀಯಾಳಿಸುವುದು ಮತ್ತು ಕಾಂಗ್ರೆಸ್ ನಾಯಕರನ್ನು ಅಪಮಾನಿಸುವುದನ್ನೇ ತಮ್ಮ ಭಾಷಣದ ವಿಚಾರವನ್ನಾಗಿಸಿಕೊಂಡಿರುವುದು ಮತ್ತೊಮ್ಮೆ ಸ್ಪಷ್ಟಗೊಂಡಿದೆ.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ನಿಜ. ಕಳೆದ ಮೂರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಾಗಿರುವುದಿಲ್ಲ. ಆದರೆ 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮುಕ್ತ ಭಾರತವನ್ನು ಮಾಡುತ್ತೇವೆ ಎಂದು ಅಬ್ಬರಿಸುತ್ತ ಕಾಂಗ್ರೆಸ್ ಪಕ್ಷಕ್ಕೆ ಯಾವೆಲ್ಲ ರೀತಿಯಲ್ಲಿ ತೊಂದರೆಯನ್ನು ಕೊಡಬಹುದು ಎಲ್ಲವನ್ನು ಕೊಟ್ಟರು ಸಹ ನಮ್ಮ ಪಕ್ಷದ ನೂರಾರು ಪ್ರತಿನಿಧಿಗಳನ್ನ ಪಂಚಾಯತಿಯಿಂದ ಪಾರ್ಲಿಮೆಂಟಿನ ತನಕ ಆಪರೇಷನ್ ಕಮಲ ಎನ್ನುವ ಪ್ರಜಾಪ್ರಭುತ್ವ ವಿರೋಧಿ ಯೋಜನೆಯ ಮೂಲಕ ಪಕ್ಷಾಂತರ ಮಾಡಿಸಿಕೊಂಡು ಕಾಂಗ್ರೆಸ್ ಪಕ್ಷದ ಮನೆಯನ್ನ ಬರಿದು ಮಾಡುವಂತಹ ನಿಮ್ಮ ಎಲ್ಲಾ ಕುತಂತ್ರಗಳ ನಡುವೆಯೂ, ಸಹ ಕಾಂಗ್ರೆಸ್ ಪಕ್ಷ ರಾಹುಲ್ ಗಾಂಧಿ ರವರ ಜನಪರವಾದಂತಹ ಹೋರಾಟದ ಭಾರತ್ ಜೋಡೋ ಯಾತ್ರೆಯ ಮೂಲಕ ಅತಿ ಹೆಚ್ಚಿನ ಸ್ಥಾನಗಳನ್ನು ಪಡೆದುಕೊಂಡು ಅಧಿಕೃತ ವಿರೋಧಪಕ್ಷವಾಗಿರುವುದನ್ನು ಸಹ ತಾವು ಮರೆಯುವ ಹಾಗಿಲ್ಲ.
ತಾವು ಹೇಳಿದ ಹಾಗೆ 543ರಲ್ಲಿ ನಮ್ಮದು 99 ಇರಬಹುದು. ಆದರೆ ದರ್ಪ, ನಾನತ್ವ ಮತ್ತು ಸರ್ವಾಧಿಕಾರಿ ಧೋರಣೆಯ ಕಾರಣದಿಂದಾಗಿ 300ಕ್ಕೂ ಹೆಚ್ಚು ಸ್ಥಾನವನ್ನು ಪಡೆದವರು 70ಕ್ಕೂ ಹೆಚ್ಚು ಸ್ಥಾನಗಳನ್ನು ಕಳೆದುಕೊಳ್ಳುವಂತಾಯಿತಲ್ಲ ಎಂಬ ವಿಚಾರ ನೆನಪಿರಲಿ. 1984ರಲ್ಲಿ ಬಿಜೆಪಿ ಗಳಿಸಿದ್ದು ಕೇವಲ ಎರಡು ಸ್ಥಾನ. ಅದೇ ರೀತಿಯಲ್ಲಿ ಎಲ್ಲ ಪಕ್ಷಗಳಿಗೂ ಏರಿಳಿತ ಸಹಜವಾಗಿರುತ್ತದೆ. ಅಧಿಕಾರದಲ್ಲಿರುವವರು ಯಾರು ಶಾಶ್ವತವಾಗಿ ಅಧಿಕಾರದ ಕುರ್ಚಿ ತಮ್ಮದಾಗಿಸಿಕೊಂಡು ಇರಲು ಸಾಧ್ಯವಿಲ್ಲ. ಮಾನ್ಯ ಪ್ರಧಾನ ಮಂತ್ರಿಗಳು ಮೂರನೇ ಬಾರಿ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಪಕ್ಷದ ಪ್ರಧಾನಿಯಾಗದೆ ದೇಶದ ಪ್ರಧಾನಿಯಾಗುತ್ತಾರೆ ಎಂದು ಅವರಿಂದ ನಿರೀಕ್ಷಿಸಿದ್ದ ದೇಶವಾಸಿಗಳಿಗೆ ಅವರ ಮಾತುಗಳಿಂದ ಮತ್ತೆ ನಿರಾಶೆಯಾಗಿದೆ .
ಕಾಂಗ್ರೆಸ್ ಪಕ್ಷ ಪರಾವಲಂಬಿ ಎಂದು ಹೇಳುವ ಮಾನ್ಯ ಪ್ರಧಾನಮಂತ್ರಿಗಳು ತಮ್ಮ ಸರ್ಕಾರ ಈಗ ಜೆಡಿಯು ಮತ್ತು ಟಿಡಿಪಿ ಹಂಗಿನಲ್ಲಿದೆ. ಜೊತೆಗೆ ಸಣ್ಣಪುಟ್ಟ ಪಕ್ಷಗಳನ್ನು ಸೇರಿಸಿಕೊಂಡು ಅವರಿಗೆ ಮಂತ್ರಿ ಸ್ಥಾನಗಳನ್ನು ಕೊಟ್ಟು ಸಮಾಧಾನ ಪಡಿಸಿಕೊಂಡು ತಾವು ಅಧಿಕಾರದಲ್ಲಿದ್ದೀರಿ ಎಂಬುದನ್ನ ಮರೆಯಬೇಡಿ.
ಕರ್ನಾಟಕದಲ್ಲಿ ನೀವು ಜೆಡಿಎಸ್ ಜೊತೆಗಾರರು ಅಲ್ಲವೇ? ತಮಿಳುನಾಡಿನಲ್ಲಿ ನೀವು ಪರಾವಲಂಬಿಯಾದರೂ ನೀವು ಒಂದು ಸ್ಥಾನ ಗಳಿಸಲಿಲ್ಲ. ನಿಮ್ಮ ಜೊತೆಯಲ್ಲಿ ಸೇರಿದವರು ಒಂದು ಸ್ಥಾನವನ್ನು ಗಳಿಸಿರುವುದಿಲ್ಲ. ಆಂಧ್ರದಲ್ಲಿ ನೀವು ಪರಾವಲಂಬಿ ಅಲ್ಲವೇ? ಅದೇ ರೀತಿಯಲ್ಲಿ ಬಿಹಾರದಲ್ಲಿ ನೀವು ಪರಾವಲಂಬಿ ಅಲ್ಲವೇ? ಮಹಾರಾಷ್ಟ್ರದಲ್ಲಿ ಪರಾವಲಂಬಿ ಅಲ್ಲವೇ? ಈಶಾನ್ಯ ರಾಜ್ಯದ ಅನೇಕ ರಾಜ್ಯಗಳಲ್ಲಿ ಅಸ್ಸಾಂ ಸೇರಿಸಿದಂತೆ ನೀವು ಪರಾವಲಂಬಿಗಳಲ್ಲವೇ? ನೀವು ಕೇವಲ ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ಇಲ್ಲಿ ಮಾತ್ರ ಸ್ವಂತ ಶಕ್ತಿಯಲ್ಲಿದ್ದೀರಿ. ಉಳಿದಂತೆ ಅನೇಕ ರಾಜ್ಯದಲ್ಲಿ ನೀವು ಪರಾವಲಂಬಿ. ಕಾಂಗ್ರೆಸ್ ಮಾತ್ರ ಅನೇಕ ಪಕ್ಷಗಳ ಜೊತೆ ಸೇರಿ ಒಕ್ಕೂಟವನ್ನ ರಚಿಸಿಕೊಂಡಿಲ್ಲ. ನೀವು ಸಹ ಅನೇಕ ರಾಜ್ಯಗಳಲ್ಲಿ ಬೇರೆ ಬೇರೆ ಪಕ್ಷದ ಜೊತೆ ಸೇರಿ ಮೈತ್ರಿಯನ್ನು ಮಾಡಿಕೊಂಡ ಕಾರಣದಿಂದಲೇ 200ರ ಗಡಿಯನ್ನು ದಾಟಿರುತ್ತೀರಿ. ಹೊಂದಾಣಿಕೆ ಇಲ್ಲದಿದ್ದರೆ ಅನೇಕ ರಾಜ್ಯದಲ್ಲಿ ನಿಮ್ಮ ಪಕ್ಷದ ಸ್ಥಿತಿ ಏನಾಗಿರುತ್ತಿತ್ತು ಆಲೋಚನೆ ತಮಗಿದೆಯೇ?
ರಾಹುಲ್ ಗಾಂಧಿಯವರು ಪ್ರಬುದ್ಧರೋ ಅಥವಾ ಇಲ್ಲವೋ ಎನ್ನುವುದನ್ನು ಅಸೂಯೆ ಮತ್ತು ಅಸಹನೀಯ ಮನಸ್ಸಿನ ವ್ಯಕ್ತಿಗಳಿಂದ ಧೃಡೀಕರಣವಾಗಬೇಕಾಗಿಲ್ಲ. ದೇಶದ ಜನತೆ 24ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿರವರ ನಾಯಕತ್ವವನ್ನು ಒಪ್ಪಿಕೊಂಡ ಕಾರಣದಿಂದಲೇ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಸ್ಥಾನವನ್ನು ನೀಡಿದ್ದಾರೆ. ರಾಜಕೀಯ ವಿಶ್ಲೇಷಕರು ಸಹ ಲೋಕಸಭೆಯಲ್ಲಿ ರಾಹುಲ್ ಗಾಂಧಿರವರ ಭಾಷಣವನ್ನು ಸರಿಯಾದ ದಾರಿಯಲ್ಲಿ ಸಾಗಿದ್ದಾರೆ ಎಂಬ ವ್ಯಾಖ್ಯಾನವನ್ನು ಮಾಡಿರುತ್ತಾರೆ.
ಪ್ರಧಾನ ಮಂತ್ರಿಗಳ ಮುಖದಲ್ಲಿ ಸಿಟ್ಟು ತಾಂಡವ ಆಡುತ್ತಿತ್ತು. ಅವರ ಮಾತುಗಳಲ್ಲಿ ಆಕ್ರೋಶವಿತ್ತು. ಕಾರಣ ತಾವು ಖರೀದಿಸಿಕೊಂಡ ಮಾಧ್ಯಮದವರು ತಮ್ಮ ಹೊಗಳು ಭಟ್ಟರ ಮೂಲಕ ನಾನು 400 ಸ್ಥಾನವನ್ನು ಗೆಲ್ಲುತ್ತೇವೆಂದು ರಸ್ತೆ ರಸ್ತೆಯಲ್ಲಿ ಹೇಳಿದ್ದರೂ 240 ಸ್ಥಾನವನ್ನು ಮಾತ್ರ ಗಳಿಸಲು ಸಾಧ್ಯವಾದದ್ದು ಮತ್ತು ಪ್ರತಿಪಕ್ಷವಾದ ಐ ಎನ್ ಡಿ ಎ ಅತ್ಯಂತ ಪ್ರಬಲವಾಗಿ ಬೆಳೆದು ಅಧಿಕಾರದ ಸಮೀಪಕ್ಕೆ ಬಂದದ್ದು ಸಹಿಸಿಕೊಳ್ಳಲಾಗುತ್ತಿಲ್ಲ. ಆ ಕಾರಣಕ್ಕಾಗಿ ಎಂದಿಗಿಂತ ಅವರ ಲೋಕಸಭೆಯ ಭಾಷಣದಲ್ಲಿ ಹೆಚ್ಚು ಆವೇಶವಿತ್ತು. ಆದರೂ ಸಹ ಅವರ ಭಾಷಣದಲ್ಲಿ ಯಾವುದೇ ಹೊಸ ಆಲೋಚನೆಗಳು ಇರಲಿಲ್ಲ. ಹೊಸ ವಿಚಾರಗಳು ಇರಲಿಲ್ಲ. ಕಾಂಗ್ರೆಸ್ ಪಕ್ಷವನ್ನು ಟೀಕಿಸುವುದಕ್ಕೆ ಮಾತ್ರ ಅವರ ಭಾಷಣ ಸೀಮಿತವಾಗಿತ್ತು. ರಾಹುಲ್ ಗಾಂಧಿ ರವರನ್ನ ಹೀಯಾಳಿಸುವುದಕ್ಕೆ ಎರಡು ಗಂಟೆಗಳ ಕಾಲ, ಲೋಕಸಭೆಯನ್ನು ವೇದಿಕೆಯನ್ನಾಗಿಸಿಕೊಂಡಿದ್ದೀರಿ. ಮಣಿಪುರದ ವಿಚಾರ ಪ್ರಸ್ತಾಪವೇ ಆಗಲಿಲ್ಲ, ರೈತರ ವಿಚಾರ ಪ್ರಸ್ತಾಪವೇ ಆಗಲಿಲ್ಲ, ಆರ್ಥಿಕ ಪರಿಸ್ಥಿತಿಯ ವಿಚಾರ ಪ್ರಸ್ತಾಪವೇ ಆಗಲಿಲ್ಲ, ನಿರುದ್ಯೋಗ ನಿವಾರಣೆಯ ಆಲೋಚನೆಗಳು ಇರಲೇ ಇಲ್ಲ. ಎಲ್ಲವೂ ಹಳೆಯ ಮಾತು. ದಿನಗಳು ಮಾತ್ರ ಬದಲಾಗಿವೆ.
- ಕೆ ಎಸ್ ನಾಗರಾಜ್, ಬೆಂಗಳೂರು




