ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿ ಹೆಚ್.ಎಸ್.ಮಂಜುನಾಥಗೌಡ ನೇಮಕ
ದೆಹಲಿ: ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಅವರು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿ ಹೆಚ್.ಎಸ್.ಮಂಜುನಾಥಗೌಡರವರನ್ನು ನೇಮಕ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಹೆಚ್.ಎಸ್.ಮಂಜುನಾಥಗೌಡ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನಖರ್ಗೆರವರು, ಸೋನಿಯಗಾಂಧಿರವರು, ಯುವ ನಾಯಕ ರಾಹುಲ್ ಗಾಂಧಿರವರು, ಕೆಪಿಸಿಸಿ ಅಧ್ಯಕ್ಷರು, ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರು, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು, ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಬಿ.ವಿ.ಶ್ರೀನಿವಾಸ್ ರವರು ಮತ್ತು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರುಗಳ ಮಾರ್ಗದರ್ಶನ ಸಹಕಾರದಿಂದ ಯುವ ಕಾಂಗ್ರೆಸ್ ಪಕ್ಷದಲ್ಲಿ ರಾಜ್ಯದ್ಯಂತ ಸಂಘಟನೆ ಮಾಡುತ್ತಿದ್ದೇನೆ ಎಂದರು.

ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಸಿದ್ದಾಂತವನ್ನು ಕಾಂಗ್ರೆಸ್ ಪಕ್ಷ ಪಾಲಿಸುತ್ತಿದೆ. ಎಲ್ಲ ವರ್ಗ, ಧರ್ಮ ಮತ್ತು ಜಾತಿ ಜನಾಂಗದವರನ್ನು ಸರಿಸಮಾನವಾಗಿ ಕಂಡು ಅವರ ಶ್ರೇಯೋಭಿವೃದ್ದಿಗೆ ಪಕ್ಷ ನಿಲುವಾಗಿದೆ ಎಂದರು.
ರಾಜ್ಯ 5ಗ್ಯಾರಂಟಿ ಯೋಜನೆಗಳು ಯಶ್ವಸಿಯಾಗಿ ಜಾರಿಗೆ ಬಂದಿದೆ. ಆರ್ಥಿಕವಾಗಿ ಹಿಂದುಳಿದ ಕೋಟ್ಯಂತರ ಜನರಿಗೆ ಜೀವನಧಾರೆಯಾಗಿದೆ. ಹಸಿವಿನಿಂದ ಯಾರೂ ಬಳಲಬಾರದು ಎಂಬ ಕಾರಣದಿಂದ ಅನ್ನ ಭಾಗ್ಯ ಯೋಜನೆ, ಮಹಿಳೆಯರ ಸ್ವಾಭಿಮಾನಿ ಬದುಕು ಸಾಗಿಸಲು ಮನೆಯ ಯಾಜಮಾನಿಗೆ ಪ್ರತಿ ತಿಂಗಳು 2000 ಸಹಾಯಧನ ಮತ್ತು ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ ಹಾಗೂ 200 ಯೂನಿಟ್ ವಿದ್ಯುತ್ ಉಚಿತ, ನಿರುದ್ಯೋಗ ಸಮಸ್ಯೆ ನಿವಾರಣೆಗೆ ಯುವ ನಿಧಿ ಯೋಜನೆಯಿಂದ ಯುವ ಸಮೂಹ ಸಹಾಯಹಸ್ತ ನೀಡಲಾಗಿದೆ ಎಂದರು.
ಕಳೆದ 9 ತಿಂಗಳಿಂದ ಕಾಂಗ್ರೆಸ್ ಪಕ್ಷದ ಸರ್ಕಾರ ಜನಪರ ಆಡಳಿತ ನೀಡಿ ಜನಮನ್ನಣೆ ಗಳಿಸಿದೆ. ಲೋಕಸಭಾ ಚುನಾವಣೆಯಲ್ಲಿ 28 ಲೋಕಸಭಾ ಕ್ಷೇತ್ರದಲ್ಲಿ ಯುವ ಕಾಂಗ್ರೆಸ್ ಪಕ್ಷದ ವತಿಯಿಂದ ಮನೆ, ಮನೆಗಳಿಗೆ ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ತುಲುಪಿಸಿ, ಸಂಘಟನೆ ಮಾಡಲಾಗುತ್ತಿದೆ. 28 ಲೋಕಸಭಾ ಕ್ಷೇತ್ರಗಳಲ್ಲಿ ಅತಿಹೆಚ್ಚು ಲೋಕಸಭಾ ಕ್ಷೇತ್ರ ಗೆಲ್ಲಲು ಶ್ರಮಿಸುವುದಾಗಿ ತಿಳಿಸಿದರು.




