ದೇಶದಲ್ಲಿ ಧ್ವನಿ ಇಲ್ಲದೇ ಇರುವ ಅನೇಕ ಸಮುದಾಯಗಳಿವೆ: ವಿ.ಸೋಮಣ್ಣ

1 year ago

ಕೇಂದ್ರ ಸಚಿವರುಗಳಾದ ವಿ.ಸೋಮಣ್ಣ, ಶೋಭ ಕರಂದ್ಲಾಜೆ, ಸಹಕಾರ ಸಚಿವ ಕೆ.ಎನ್.ರಾಜಣ್ಣರವರಿಂದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ

ಸಾಧು ಸಂಗಮ ಪತ್ತಿನ ಸಹಕಾರ ಸಂಘ ನೂತನ ಕಟ್ಟಡ ಲೋಕರ್ಪಣೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ

ಬೆಂಗಳೂರು: ಹಿಂದೂ ಸಾದರ ಕ್ಷೇಮಾಭಿವೃದ್ದಿ ಸಂಘ, ಸಾಧು ಸಂಗಮ ಪತ್ತಿನ ಸಹಕಾರ ಸಂಘ ನಿ ವತಿಯಿಂದ ಬೆಳ್ಳಿಹಬ್ಬ ಹಾಗೂ ನೂತನ ಕಟ್ಟಡದ ಲೋಕರ್ಪಣೆ ಮತ್ತು ಸಂಗಮ ಜ್ಯೋತಿ ಸಂಚಿಕೆ ಬಿಡುಗಡೆ ಸಮಾರಂಭವನ್ನು ಆಯೋಜಿಸಲಾಗಿತ್ತು.

ಉದ್ಘಾಟನೆಯನ್ನು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಸಚಿವ ವಿ.ಸೋಮಣ್ಣರವರು, ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಇಲಾಖೆ ಸಚಿವೆ ಶೋಭಾ ಕರಂದ್ಲಾಜೆ, ಸಹಕಾರ ಸಚಿವ ಕೆ.ಎನ್.ರಾಜಣ್ಣರವರು, ಶಾಸಕ ಕೆ.ಗೋಪಾಲಯ್ಯ, ಶಾಸಕ ಡಾ.ಸಿ.ಎನ್.ಅಶ್ವಥ್ ನಾರಾಯಣ್, ಮಾಜಿ ಶಾಸಕ ಮುಖ್ಯಮಂತ್ರಿ ಚಂದ್ರು, ಸಹಕಾರ ಸಂಘಗಳ ನಿಬಂಧಕ ಟಿ.ಹೆಚ್.ಎಂ.ಕುಮಾರ್, ಸಾಧು ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಎನ್.ಲಕ್ಷ್ಮಿಪತಿ, ಹಿಂದೂ ಸಾದರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಡಿ.ಈ.ರವಿಕುಮಾರ್ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.

ವಿ.ಸೋಮಣ್ಣ ಮಾತನಾಡಿ, ಕಾಯಕ ಎಂಬುದು ಡೊಡ್ಡ ಕರ್ತವ್ಯ ಅದನ್ನ ನಿಭಾಯಿಸಬೇಕು. ದೇಶದಲ್ಲಿ ಧ್ವನಿ ಇಲ್ಲದೇ ಇರುವ ಅನೇಕ ಸಮುದಾಯಗಳಿವೆ ಎಂದರು.

ನಾಲ್ಕು ಮೆಮೋ ರೈಲುಗಳನ್ನು ಬೆಂಗಳೂರು ಮತ್ತು ಮೈಸೂರು ಜಿಲ್ಲೆಗಳಿಗೆ ಸಂಚರಿಸಲಿದೆ. ಕೇವಲ ದರ 35 ರೂಪಾಯಿ ನಿಗದಿ ಮಾಡಲಾಗಿದೆ ಎಂದರು.

ತುಮಕೂರು ಬೆಂಗಳೂರು ನಡುವೆ ಕೇವಲ 20 ರೂಪಾಯಿಯಲ್ಲಿ ಮೆಮೋ ರೈಲಿನಲ್ಲಿ ಪ್ರಯಾಣ ಮಾಡಬಹುದು. ಇದೆಲ್ಲ ಯಶ್ವಸ್ಸಿಗೆ ಪ್ರಧಾನಿ ನರೇಂದ್ರಮೋದಿರವರು ಕಾರಣ. ಪ್ರಧಾನಿ ನರೇಂದ್ರ ಮೋದಿರವರು ರೈಲ್ವೆ ನೇಮಕಾತಿ ಪರೀಕ್ಷೆಯಲ್ಲಿ ಕನ್ನಡ ಬರೆಯಲು ಅವಕಾಶ ಮಾಡಿಕೊಟ್ಟರು. ಇದರಿಂದ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ಲಭಿಸಲಿದೆ ಎಂದರು.

ಚುನಾವಣೆ ಬರುವುದು 5 ವರ್ಷಕ್ಕೆ ಒಂದು, ಆಯ್ಕೆ ಮಾಡಿದ ಜನರಿಗೆ ನ್ಯಾಯ ಒದಗಿಸಿದಾಗ ಅವನು ಜನಪ್ರತಿನಿಧಿ ಎನ್ನಿಸಿಕೊಳ್ಳುತ್ತಾರೆ ಎಂದರು.

ಶೋಭ ಕರಂದ್ಲಾಜೆ ಮಾತನಾಡಿ, ಸಹಕಾರ ತತ್ವದ ಮೂಲಕ ಸಮುದಾಯದ ಅಭಿವೃದ್ಧಿಯಾಗುತ್ತದೆ. ಸಾದರ ಹಿಂದೂ ಸಮಾಜ ಅತಿ ಚಿಕ್ಕ ಸಮುದಾಯವಾಗಿದೆ. ತುಮಕೂರಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ವಾಸ ಮಾಡುತ್ತಿದ್ದಾರೆ. ಹಿಂದೂ ಸಾದರ ಸಮಾಜ ಇದೆ ಎಂದು ಮುಖ್ಯಮಂತ್ರಿ ಚಂದ್ರುರವರಿಂದ ಸಮಾಜಕ್ಕೆ ತಿಳಿಯಿತು. ಡೊಡ್ಡ ಸಮುದಾಯವಿರುವವರು ರಾಜಕೀಯವಾಗಿ ಪ್ರಬಲರಾಗಿರುತ್ತಾರೆ. ಸಣ್ಣ ಸಮುದಾಯದ ಧ್ವನಿಯನ್ನು ಒಟ್ಟು ಮಾಡಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಬೇಕು ಎಂದರು.

ಬಡವರು ಹಣವನ್ನು ಸಹಕಾರ ಬ್ಯಾಂಕಿನಲ್ಲಿ ಇಟ್ಟಿರುತ್ತಾರೆ. ಇಂತಹ ಸಹಕಾರ ಬ್ಯಾಂಕ್ ನಡೆಸಲು  ಬಹಳ ಡೊಡ್ಡ ಜವಾಬ್ದಾರಿ ಹೊಣೆ ಇರುತ್ತದೆ ಎಂದರು.

ಕೆ.ಎನ್.ರಾಜಣ್ಣ ಮಾತನಾಡಿ, ಸಾದರ ಹಿಂದೂ ಸಮಾಜ ಚಿಕ್ಕ ಸಮಾಜವಿರಬಹುದು. ಅದರ ಸಾಧನೆಯಲ್ಲಿ ಸಾದರ ಹಿಂದೂ ಸಮಾಜ ಹಿಂದೆ ಬಿದ್ದಿಲ್ಲ. ಮಕ್ಕಳನ್ನು ವಿದ್ಯಾವಂತರಾಗಿ ಮಾಡಬೇಕು. ಉತ್ತಮ ಸಮಾಜ ನಿರ್ಮಾಣಕ್ಕೆ ಸಾದರ ಹಿಂದೂ ಸಮಾಜ ಕೊಡುಗೆ ನೀಡುತ್ತಿದೆ ಎಂದರು.

ಸಹಕಾರಿ ಕ್ಷೇತ್ರ ಜನರ ಅಂದೋಲವಾಗಬೇಕು, ಜನರ ಹಿತಕ್ಕಾಗಿ ತಿದ್ದುಪಡಿ ಮಾಡಲಾಗಿದೆ. ಪಟ್ಟಭದ್ರ ಹಿತಾಸಕ್ತಿಗಳ ಕೈಯಲ್ಲಿ ಸಹಕಾರ ಸಂಸ್ಥೆ ಸಿಲುಕಬಾರದು. ನಿಮ್ಮ ಹಣ ಮತ್ತು ನಿಮ್ಮ ಮಾರ್ಗದರ್ಶನದಲ್ಲಿ ಸಹಕಾರ ಬ್ಯಾಂಕ್ ನಡೆಯುತ್ತದೆ ಎಂದರು.

ಸಮಾಜದಲ್ಲಿರುವ ವಿದ್ಯಾವಂತ, ಬುದ್ಧಿವಂತರು ಬರಿ ಕುಟುಂಬದ ಕಡೆ ಗಮನಹರಿಸದೇ ಹಿಂದೂ ಸಾದರ ಸಮಾಜ ಒಗ್ಗಟ್ಟಿಗೆ ಶ್ರಮಿಸಬೇಕು. ಇದರಿಂದ ಶಿಕ್ಷಣ ಮತ್ತು ರಾಜಕೀಯ ಕ್ಷೇತ್ರದಲ್ಲಿ ಹೆಚ್ಚಿನ ರಾಜಕೀಯ ಶಕ್ತಿ ಸಿಗಲಿದೆ ಎಂದರು.

ಸಿ.ಎನ್.ಅಶ್ವಥ್ ನಾರಾಯಣ್ ಮಾತನಾಡಿ, ಸಾಧು ಸಂಗಮ ಸಮುದಾಯದ ಅಭಿವೃದ್ಧಿಗೆ ಸ್ಥಾಪನೆಯಾದ ಸಹಕಾರ ಬ್ಯಾಂಕ್ ಜನಾಂಗದ ಸಂಘಟನೆ ಮತ್ತು ಆರ್ಥಿಕ ಅಭಿವೃದ್ದಿಯತ್ತ ಸಾಗುತ್ತಿದೆ. ಸಹಕಾರದಿಂದ ಸಹಕಾರ ನೀಡಬೇಕು ಎಂಬ ತತ್ವದ ಮೇಲೆ ಸಾಧು ಸಂಗಮ ಜನಾಂಗ ಸಹಕಾರ ಸಂಘ ಮೂಲಕ ಸಮುದಾಯದ ಸಂಘಟನೆಗೆ ಒತ್ತು ನೀಡಿದ್ದಾರೆ ಎಂದರು.

ಬಿ.ಎನ್.ಲಕ್ಷ್ಮಿಪತಿ ಮಾತನಾಡಿ, ಧ್ವನಿ ಇಲ್ಲದ ಸಮಾಜಕ್ಕೆ, ಧ್ವನಿಯಾಗಬೇಕು ಎಂದು ಸಾಧು ಸಂಗಮ ಪತ್ತಿನ ಸಹಕಾರ ಸಂಘ ದಿಟ್ಟ ಹೆಜ್ಜೆ ಇಟ್ಟದೆ. ಸಹಕಾರ ಸಂಘದ ಮೂಲಕ ಜನರಿಗೆ ಆರ್ಥಿಕ ಸಹಕಾರ ನೀಡಿದಾಗ ಸಮುದಾಯ ಅಭಿವೃದ್ದಿಯಾಗುತ್ತೆ. ಹಿಂದೂ ಸಾದರ ಸಮಾಜದ ಮೂಲಕ ಶಿಕ್ಷಣಕ್ಕೆ ಒತ್ತು ನೀಡಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಕಾರ, ಪ್ರೋತ್ಸಾಹ ನೀಡಲಾಗುತ್ತಿದೆ. 600ಕ್ಕೂ ಹೆಚ್ಚು ಸದಸ್ಯರನ್ನು ಹೊಂದುವ ಮೂಲಕ ಸಾಧು ಸಂಗಮ ಪತ್ತಿನ ಸಹಕಾರ ಸಂಘ ಸ್ಥಾಪನೆ ಮಾಡಲಾಯಿತು ಎಂದರು.

ಸಂಘದ ಸದಸ್ಯರ ಮಕ್ಕಳಿಗೆ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದವರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು ಮತ್ತು ಸಂಘದ ಮಾಜಿ  ನಿರ್ದೇಶಕರು, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಪಿ.ಮೂರ್ತಿರವರಿಗೆ ಸನ್ಮಾನಿಸಲಾಯಿತು.

ಸಂಘದ ನಿರ್ದೇಶಕ ಮಂಡಳಿಯ ಪದಾಧಿಕಾರಿಗಳಾದ ಕೆ.ಜಿ.ದೇವರಾಜು, ಕೆ.ಜಯಣ್ಣ, ಟಿ.ಆರ್.ಚನ್ನಕೇಶವ, ಸುಕನ್ಯ ಅಮರನಾಥ್, ಟಿ.ಆರ್.ಗೋವಿಂದಯ್ಯ, ಟಿ.ಗೋವಿಂದರಾಜು, ಬಿ.ಎನ್.ಶ್ರೀನಿವಾಸ್, ಪಿ.ಕುಮಾರ್, ಪದ್ಮ ಮುಖ್ಯಮಂತ್ರಿ ಚಂದ್ರು, ಪೂರ್ಣಸಾಗರ್, ಕೃಷ್ಣಮೂರ್ತಿ ಮೊದಲಾದವರು ಉಪಸ್ಥಿತರಿದ್ದರು.

Leave a Reply