ಮಾರ್ಕ್ಸವಾದದಲ್ಲಿ “ಮಿಗುತಾಯ/ಹೆಚ್ಚುವರಿ ಮೌಲ್ಯ (surplus value), ಪುನರ್ ಉತ್ಪಾದನೆ(re production), ಸಂಪತ್ತಿನ ಶೇಖರಣೆ (acumalation of wealth)” ಬಹು ಮುಖ್ಯ ಚಿಂತನೆಗಳಾಗಿವೆ.
- ಭಾರತ ಕಲ್ಯಾಣ ರಾಷ್ಟ್ರವಾಗಲು ಅಂಬೇಡ್ಕರರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು: ಕೆ.ವೈ.ನಾರಾಯಣಸ್ವಾಮಿ
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
ಮಿಗುತಾಯ ಮೌಲ್ಯ : ಶ್ರಮಿಕರು ದುಡಿದು ಉತ್ಪಾದಿಸುವ ಉತ್ಪನ್ನಗಳ (products) ಮೌಲ್ಯ ಮತ್ತು ಇದರ ಉತ್ಪಾದನೆಗೆ ಕಾರ್ಮಿಕರಿಗೆ, ಕೂಲಿ ಕಾರ್ಮಿಕರಿಗೆ ನೀಡುವ ವೇತನದ ವ್ಯತ್ಯಾಸ.
ಅಂದರೆ ರೂ.500 ಮೌಲ್ಯದ ಒಂದು ಉತ್ಪನ್ನಕ್ಕೆ ಕಾರ್ಮಿಕರ ಒಟ್ಟು ವೇತನ+ಉತ್ಪಾದನಾ ವೆಚ್ಚ ಒಟ್ಟು ಸೇರಿ ಅದು ರೂ.150 ತಗಲುವ ಖರ್ಚು ಆಗಿದ್ದರೆ ಬಂಡವಾಳಶಾಹಿಗೆ ಪ್ರತಿ ಉತ್ಪನ್ನಕ್ಕೆ ರೂ.350 ಹೆಚ್ಚುವರಿಯಾಗಿ ಮಿಗುತ್ತದೆ. ಉತ್ಪನ್ನಗಳ ಸಂಖ್ಯೆ ಹೆಚ್ಚಿದಷ್ಟೂ ಈ ಮಿಗುತಾಯ ಮೌಲ್ಯವೂ ಹೆಚ್ಚುತ್ತಾ ಹೋಗುತ್ತದೆ. ಇದೇ ಬಂಡವಾಳವಾದ.
ಪುನರ್ ಉತ್ಪಾದನೆ: ಒಂದು ಉತ್ಪನ್ನದ ಬೇಡಿಕೆ ಹೆಚ್ಚಿದಂತೆ ಅದರ ಪುನರ್ ಉತ್ಪಾದನೆಯೂ ಹೆಚ್ಚುತ್ತಾ ಹೋಗುತ್ತದೆ. ಅಂದರೆ ಮಾಲೀಕರ ಮಿಗುತಾಯ ಮೌಲ್ಯವೂ ಹೆಚ್ಚುತ್ತಾ ಹೋಗುತ್ತದೆ. ಶ್ರಮಿಕರ ವೇತನದಲ್ಲಿ ವ್ಯತ್ಯಾಸವಾಗುವುದಿಲ್ಲ.
ಸಂಪತ್ತಿನ ಶೇಖರಣೆ: ಮೇಲಿನ ಎರಡು ಪ್ರಕ್ರಿಯೆಗಳಿಂದಾಗಿ ಬಂಡವಾಳಶಾಹಿ ಬಳಿ ಸಂಪತ್ತು ಕ್ರೋಢೀಕರಣಗೊಳ್ಳುತ್ತಾ ಹೋಗುತ್ತದೆ. ಲಕ್ಷಾಧಿಪತಿಯಾವರು ಕೆಲವು ವರ್ಷಗಳ ನಂತರ ಕೋಟ್ಯಾಧಿಪತಿಗಳು, ಬಿಲಿಯನಾಧಿಪತಿಗಳಾಗುತ್ತಾರೆ. ದುಡಿಯುವ ವರ್ಗದ ಬದುಕು ಕೊಂಚವೂ ಬದಲಾಗುವುದಿಲ್ಲ.
(ಉದಾಹರಣೆಗೆ ಹತ್ತು ವರ್ಷಗಳ ಹಿಂದೆ ಅದಾನಿಯ ಸಂಪತ್ತು ಅಂದಾಜು 50,000 ಕೋಟಿಯಿದ್ದರೆ ಮೋದಿಯವರ ಆರ್ಥಿಕ ನೀತಿಯಿಂದಾಗಿ ಇಂದು ಅಂದಾಜು 15 ಲಕ್ಷ ಕೋಟಿಯಷ್ಟಾಗಿದೆ.)
ಇದೆಲ್ಲವನ್ನೂ ಒಳಗೊಂಡಂತೆ ಸಂವಿಧಾನದ ಪರಿಚ್ಚೇದ 39(ಬಿ) ‘ಸಾರ್ವಜನಿಕ ಒಳಿತಿಗಾಗಿ ಸಮುದಾಯಗಳ, ಖಾಸಗಿ ಅಸ್ತಿ, ಸಂಪನ್ಮೂಲಗಳನ್ನು ಸಾರ್ವಜನಿಕರಿಗೆ ಹಂಚಬೇಕು’ ಎಂದು ಹೇಳುತ್ತದೆ. ಇದು ಸಮಾಜವಾದಿ ಸಿದ್ಧಾಂತ. ಡಾಗ್ಮ ಅಲ್ಲ. 1978ರಲ್ಲಿ ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಅವರು ಇದನ್ನು ಬೆಂಬಲಿಸಿದ್ದರು.
ಆದರೆ ದೊಣ್ಣೆಗೆ ಒಂದು ನಿಮಿಷ ಎನ್ನುವಂತೆ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ಒಂದೇ ಏಟಿಗೆ ಮೇಲೆ ವಿವರಿಸಿದ ಮಿಗುತಾಯ ಮೌಲ್ಯ, ಪುನರ್ ಉತ್ಪಾದನೆ, ಸಂಪತ್ತಿನ ಶೇಖರಣೆಗಳ ಬಂಡವಾಳವಾದವನ್ನು ಪುರಸ್ಕರಿಸಿ ‘ಕೆರೆಯ ನೀರನ್ನು ಕೆರೆಗೆ ಚೆಲ್ಲುವ ಸಾರ್ವಜನಿಕ ಹಂಚಿಕೆಯನ್ನು’ ವಿರೋಧಿಸಿದ್ದಾರೆ. ಕೃಷ್ಣ ಅಯ್ಯರ್ ತೀರ್ಪನ್ನು ‘ನಿರ್ದಿಷ್ಟ ಆರ್ಥಿಕ ಸಿದ್ಧಾಂತ, ಎಕನಾಮಿಕ್ ಡಾಗ್ಮ’ ಎಂದು ಕಟುವಾಗಿ ಹೇಳಿದ್ದಾರೆ. ಮತ್ತು ಸರ್ವರಿಗೂ ಸಮಪಾಲು ಬಯಸುವ ಸಮಾಜವಾದವನ್ನು ಟೀಕಿಸಿ ಮೋದಾನಿ ರೀತಿಯ ಆರ್ಥಿಕತೆಯನ್ನು ಬೆಳೆಸುವ ತೊಂಬತ್ತರ ದಶಕದ ನಂತರದ ನವ ಉದಾರೀಕರಣವನ್ನು ಕೊಂಡಾಡಿದ್ದಾರೆ.
ಬಹುಶಃ ಇವರ ಅವಧಿಯನ್ನು ಇತಿಹಾಸ ಹೇಗೆ ನೆನಪಿಟ್ಟುಕೊಳ್ಳುತ್ತದೆ? ಇದಕ್ಕೆ ಯಾವುದೇ ವಿವರಣೆ ಅಗತ್ಯವಿಲ್ಲ.
– ಬಿ ಶ್ರೀಪಾದ್ ಭಟ್, ಸಾಮಾಜಿಕ ಹೋರಾಟಗಾರರು




