ಮಂಗಳೂರು ಮೀನುಗಾರಿಕಾ ಬಂದರಿನ ಸ್ಥಿತಿ ದಯನೀಯವಾಗಿದೆ. ಜಿಲ್ಲೆಯ ಆರ್ಥಿಕತೆ, ಉದ್ಯೋಗ ರಂಗಕ್ಕೆ ದೊಡ್ಡ ಕೊಡುಗೆ ಕೊಡುವ ಮಂಗಳೂರು ಮೀನುಗಾರಿಕೆ ಬಂದರಿನ ದುಸ್ಥಿತಿ, ಮೀನುಗಾರರು ಎದುರಿಸುವ ಸಮಸ್ಯೆಗಳ ಕುರಿತು ಡಿಸೆಂಬರ್ 8 ರಂದು ಸಿಪಿಐಎಂ ಜಿಲ್ಲಾ ಸಮಿತಿಯು ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಆಗ್ರಹಿಸಿ ಹಮ್ಮಿಕೊಂಡಿರುವ ಜಿಲ್ಲಾ ಮಟ್ಟದ ರ‌್ಯಾಲಿಯ ಬೇಡಿಕೆ ಪಟ್ಟಿಯಲ್ಲಿ ಸೇರ್ಪಡೆ ಮಾಡಿದ್ದೆವು. ಡಿಸೆಂಬರ್ 8 ರ‌್ಯಾಲಿಯ 20 ಬೇಡಿಕೆಗಳಲ್ಲಿ ಮಂಗಳೂರು ಮೀನುಗಾರಿಕಾ ಧಕ್ಕೆಯ ಸಮಗ್ರ ಅಭಿವೃದ್ದಿಯ ಬೇಡಿಕೆಯೂ ಒಂದು.
- ಈ ದೇಶ ಕಟ್ಟಿದ್ದೇ ದಲಿತರು, ನೀಲಿ ಶಾಲು ಬಗ್ಗೆ ಮಾತಾಡೋಕೆ ನೀನ್ಯಾವನೋ?
- ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣವೇ ಪದಚ್ಯುತಗೊಳಿಸಿ: ಸಿದ್ದರಾಮಯ್ಯ
- ಸತತ 5 ದಿನ ಬ್ಯಾಂಕ್ಗಳಿಗೆ ಬೀಗ!: ಏನಿರುತ್ತದೆ, ಏನಿಲ್ಲ? ಕಂಪ್ಲೀಟ್ ಡೀಟೈಲ್ಸ್!
- 814 ಉಪನ್ಯಾಸಕರ ನೇಮಕಾತಿಯಲ್ಲಿ ಉರ್ದುಗೆ ಸ್ಥಾನ ಎಲ್ಲಿದೆ?
- ಸಾಲ ಮನ್ನಾ ಮಾಡಿ ರೈತರ ಹಿತ ಕಾಪಾಡಿದ್ದ ಡಾ.ಮನಮೋಹನ್ ಸಿಂಗ್
ಅಷ್ಟಕ್ಕೆ, ಪರ್ಸಿನ್, ಟ್ರಾಲ್ ಬೋಟ್ ಮಾಲಕರ ಸಂಘಗಳಿಗೆ ಸೇರಿದ ಪ್ರತಿನಿಧಿಗಳು ಪತ್ರಿಕಾಗೋಷ್ಟಿ ನಡೆಸಿ ಸಿಪಿಐಎಂ ನವರು ಮೀನುಗಾರರ ಸಮಸ್ಯೆಗಳ ಕುರಿತು ಮಾತಾಡಬಾರದು ಎಂದು ಫರ್ಮಾನು ಹೊರಡಿಸಿರುವುದು ನಿಜಕ್ಕೂ ಅಚ್ಚರಿ ತಂದಿದೆ. ನಾವು ಇವರಲ್ಲಿ ಬೆಂಬಲ ಕೇಳಿಯೂ ಇರಲಿಲ್ಲ. ಅದಲ್ಲದೆ, ಪತ್ರಿಕಾಗೋಷ್ಟಿ ನಡೆಸಿದ ವ್ಯಕ್ತಿಗಳು ತಮ್ಮನ್ನು ತಾವು ಇಡೀ ಸಮುದಾಯದ ಮುಖಂಡರು ಎಂಬಂತೆ ಬಿಂಬಿಸಿಕೊಂಡಿದ್ದಾರೆ. ಇವರಲ್ಲಿ ಬಹುತೇಕರು ರಾಜಕೀಯ ಪಕ್ಷಗಳ ಪ್ರತಿನಿಧಿಗಳೂ ಆಗಿದ್ದಾರೆ.
ಸಿಪಿಐಎಂ ವಿರುದ್ಧದ ಈ ಪತ್ರಿಕಾಗೋಷ್ಟಿಯನ್ನು ಬಹುತೇಕ ಪತ್ರಿಕೆಗಳು ಆದ್ಯತೆಯಲ್ಲಿ ಸುದ್ದಿ ಮಾಡಿವೆ. ಹಾಗೆಯೆ ಮೀನುಗಾರಿಕಾ ಬಂದರಿನ ದುಸ್ಥಿತಿಯ ಕುರಿತು, ಸಿಪಿಐಎಂ ಮುಂದಿಟ್ಟಿರುವ ಬೇಡಿಕೆಗಳ ಕುರಿತಾಗಿಯು ಸುದ್ದಿ ಮಾಡಬೇಕಾಗಿ ವಿನಂತಿಸುತ್ತಿದ್ದೇವೆ. ಮೀನುಗಾರರ ಗಂಭೀರ ಸಮಸ್ಯೆಗಳು, ಧಕ್ಕೆಯ ದುರವಸ್ಥೆಯ ಕುರಿತು ಧ್ವನಿ ಎತ್ತಬೇಕಾದ ಸಂಘ ಸಂಸ್ಥೆಗಳು ತರಾತುರಿಯಲ್ಲಿ ಎಚ್ಚೆತ್ತು ಸರಕಾರದ ಪರ ಮಾತಾಡಲು ಹೊರಟಿರುವುದು ಉಚಿತ ಅಲ್ಲ.
– ಮುನೀರ್ ಕಾಟಿಪಳ್ಳ




