ಕಳೆದ ಕೆಲವು ವರ್ಷಗಳಿಂದ ಜನ್ಮದಿನವನ್ನು ಆಚರಿಸದಿರುವ ನನ್ನ ನಿರ್ಧಾರಕ್ಕೆ ಸಹಕರಿಸುತ್ತಾ ಬಂದಿರುವ ನನ್ನೆಲ್ಲಾ ಅಭಿಮಾನಿಗಳಿಗೆ, ಹಿತೈಷಿಗಳಿಗೆ ಧನ್ಯವಾದಗಳು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಹಲವು ಉತ್ಸಾಹಿಗಳು ನನ್ನ ಹುಟ್ಟುಹಬ್ಬವನ್ನು ಆಡಂಬರದ ಆಚರಣೆಯನ್ನಾಗಿಸದೆ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅರ್ಥಪೂರ್ಣ ಆಚರಣೆಯನ್ನಾಗಿಸುತ್ತಿರುವ ನನ್ನ ಹಿತೈಷಿಗಳಿಗೆ, ಅಭಿಮಾನಿಗಳಿಗೆ ಆಭಾರಿಯಾಗಿದ್ದೇನೆ.
ನನ್ನ ಹಾಗೂ ನಮ್ಮ ಕುಟುಂಬದ ಮೇಲೆ ನೀವಿಟ್ಟಿರುವ ಈ ಪ್ರೀತಿ, ವಾತ್ಸಲ್ಯ ಹಾಗೂ ಕಾಳಜಿಗಳೇ ನನ್ನಲ್ಲಿ ಚೈತನ್ಯ ತುಂಬುತ್ತಿದೆ, ಜವಾಬ್ದಾರಿಯನ್ನು ಹೆಚ್ಚಿಸುತ್ತದೆ.
ನನ್ನಲ್ಲಿ ಸಾಧನೆ ಮಾಡುವ ಚೈತನ್ಯವಿದೆ ಎಂದಾದರೆ, ನನ್ನಿಂದ ಯಾರಿಗಾದರೂ ಸಹಾಯವಾದರೆ, ಅದು ನೀವು ನನ್ನ ಮೇಲಿಟ್ಟಿರುವ ಪ್ರೀತಿ, ನಂಬಿಕೆಯಿಂದ ಮಾತ್ರ ಸಾಧ್ಯವಾದದ್ದು.
ಇಂದು ರಾಜ್ಯಾದ್ಯಂತ ಹಲವಾರು ಜನ ಕಾರ್ಯಕರ್ತರು, ಅಭಿಮಾನಿಗಳು ಅಸಂಖ್ಯಾತ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು ಸಂತಸದಾಯಕ ಸಂಗತಿ.
– ಕಲಬುರಗಿಯ ಶ್ರಾವಸ್ತಿ ಟ್ರಸ್ಟ್ ನವರು ನನ್ನ ಜನ್ಮದಿನದ ಆಚರಣೆಯ ಅಂಗವಾಗಿ ಕಲಬುರಗಿ ಜಿಲ್ಲೆಯ ಶಾಲಾ ಮಕ್ಕಳಿಗೆ ಉಚಿತ ಕಣ್ಣಿನ ತಪಾಸಣೆ ನಡೆಸಿ, ಚಿಕಿತ್ಸೆ ಕೊಡಿಸುವ ಮತ್ತು ಅಗತ್ಯವಿರುವವರಿಗೆ ಕನ್ನಡಕವನ್ನು ವಿತರಿಸುವ “ಕಣ್ಮಣಿ“ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡು ಸುಮಾರು 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಕಣ್ಣಿನ ತಪಾಸಣೆ ನಡೆಸಿ 572 ಮಕ್ಕಳಿಗೆ ಮತ್ತು 22 ಶಿಕ್ಷಕರಿಗೆ ಕನ್ನಡಕ ವಿತರಿಸಿದ್ದಾರೆ, 15 ಮಕ್ಕಳಿಗೆ ಹೆಚ್ಚಿನ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ, ಇಂತಹ ಮಹತ್ಕಾರ್ಯಗಳು ಇನ್ನಷ್ಟು ವಿಸ್ತರಿಸಬೇಕು ಎನ್ನುವುದು ನನ್ನ ಆಶಯ.
– ಚಿತ್ತಾಪುರ ತಾಲೂಕಿನ ಎಲ್ಲಾ ಮೆಟ್ರಿಕ್ ನಂತರದ ವಸತಿ ಶಾಲೆಗಳು, ಪದವಿ ಪೂರ್ವ ಕಾಲೇಜುಗಳಿಗೆ ಭೇಟಿ ನೀಡಿ ಸ್ಪರ್ಧಾತ್ಮಕ ಪುಸ್ತಕಗಳನ್ನು ವಿತರಣೆ ಮಾಡುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ತಮಗೆ ಪುಸ್ತಕದ ಬಗ್ಗೆ ಇರುವ ಆಸಕ್ತಿಯ ಕುರಿತು ಹರ್ಷ ವ್ಯಕ್ತಪಡಿಸಿದ್ದಾರೆ.
ಇದರೊಂದಿಗೆ
– ಮಹಿಳೆಯರಿಗೆ ಸೀರೆ ವಿತರಣೆ, ಪತ್ರಕರ್ತರಿಗೆ ಸನ್ಮಾನ, ದಲಿತ ಸಂಘಟನೆಗಳ ಹಿರಿಯ ಮುಖಂಡರಿಗೆ ಸನ್ಮಾನ
– ಮಂಡ್ಯದಲ್ಲಿವಿದ್ಯಾರ್ಥಿಗಳಿಗೆ ಸಂವಿಧಾನ ಪುಸ್ತಕ ವಿತರಣಾ ಮತ್ತು ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮ
– ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ನೋಟ್ ಬುಕ್, ಪೆನ್ ವಿತರಣೆ
– ಸರ್ಕಾರಿ ಶಾಲೆ ಮಕ್ಕಳಿಗೆ ಎಕ್ಸಮ್ ಪ್ಯಾಡ್, ಕಂಪಾಸ್ ಬಾಕ್ಸ್ ವಿತರಣೆ
– ಮಕ್ಕಳಿಗೆ ಸಸಿ ಮತ್ತು ಹಣ್ಣು ಹಂಪಲು ವಿತರಣೆ
– ರಕ್ತದಾನ ಶಿಬಿರಗಳು
ಹೀಗೆಯೇ ನಾಡಿನಾದ್ಯಂತ ಹಲವು ಜಿಲ್ಲೆಗಳಲ್ಲಿ ವಿವಿಧ ರೀತಿ ಸಮಾಜಮುಖಿ ಕಾರ್ಯಗಳನ್ನು ಕೈಗೊಂಡು, ಪ್ರೀತಿ ತೋರಿಸಿ ನನ್ನ ಮೇಲಿನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದ್ದೀರಿ. ನಿಮ್ಮೆಲ್ಲರ ಈ ಸ್ವಯಂ ಪ್ರೇರಣೆಯ ಕಾರ್ಯಕ್ಕೆ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ಇಂದು ಅಸಂಖ್ಯಾತ ಜನ ಕರೆ ಮಾಡಿ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಲು ಯತ್ನಿಸಿದ್ದೀರಿ ಹಾಗೂ ಮೆಸೇಜ್ ಕಳಿಸಿ ಶುಭಾಶಯ ಕೋರಿದ್ದೀರಿ, ಆದರೆ ಎಲ್ಲರಿಗೂ ವೈಯಕ್ತಿಕವಾಗಿ ಧನ್ಯವಾದ ಸಲ್ಲಿಸಲು ಸಾಧ್ಯವಾಗದಿರುವುದಕ್ಕೆ ಈ ಮೂಲಕ ಕ್ಷಮೆ ಕೋರುತ್ತೇನೆ.
ನಿಮ್ಮೆಲ್ಲರ ಈ ಅಚಲ ನಂಬಿಕೆಗೆ ಚ್ಯುತಿ ಬಾರದಂತೆ ಪ್ರತಿ ದಿನ, ಪ್ರತಿ ಕ್ಷಣವೂ ಆ ನಂಬಿಕೆಯನ್ನು ಉಳಿಸಿಕೊಂಡು ಹೋಗಲು ನನ್ನ ಪ್ರಾಮಾಣಿಕ ಪ್ರಯತ್ನ ನಿರಂತರವಾಗಿರಲಿದೆ.
ನಿಮ್ಮೆಲ್ಲರ ಶುಭ ಹಾರೈಕೆಗಳಿಗೆ ನನ್ನ ತುಂಬುಹೃದಯದ ಕೃತಜ್ಞತೆಗಳು. ನಿಮ್ಮ ಈ ಪ್ರೀತಿಗೆ ನಮ್ಮ ಇಡೀ ಕುಟುಂಬ ಸದಾ ಆಭಾರಿ ಹಾಗೂ ಚಿರಋಣಿಯಾಗಿರಲಿದ್ದೇವೆ.
– ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ




