ಮಹಾನ್ ಮಾನವತಾವಾದಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಕನಿಷ್ಟವಾಗಿ ಮಾತನಾಡಿರುವುದನ್ನು ಅತ್ಯಂತ ಬಲವಾಗಿ ಖಂಡಿಸುತ್ತೇನೆ.
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
- ಫೆಲೋಶಿಪ್ಗೆ ಅರ್ಜಿ ಆಹ್ವಾನ
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತವನ್ನು ಒಗ್ಗೂಡಿಸುವಂತಹ ಸಂವಿಧಾನವನ್ನು ನಮಗೆ ಕೊಟ್ಟಿದ್ದಾರೆ. ಇಡೀ ವಿಶ್ವವೇ ಅವರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದೆ. ಮಹಾನ್ ನಾಯಕನ ಬಗ್ಗೆ ಲಘುವಾಗಿ ಮಾತನಾಡಿರುವುದು ಅಮಿತ್ ಶಾ ಅವರ ತುಚ್ಛ ಮನಸ್ಥಿತಿಯನ್ನು ತೋರಿಸುತ್ತದೆ. ಬಿಜೆಪಿ ನಾಯಕರು ಮತ್ತೆ ತಮ್ಮ ಅಸಹ್ಯ ಮನಸ್ಥಿತಿಯನ್ನು ಹೊರಹಾಕಿದ್ದಾರೆ. ಇಂಥವರು ಗೌರವಯುತ ಸ್ಥಾನದಲ್ಲಿರಬೇಕೆ?
ದೇಶದಲ್ಲಿನ ಶೋಷಿತ ವರ್ಗ, ಬಡವರು, ಕಾರ್ಮಿಕರು, ಮಹಿಳೆಯರಿಗೆ, ಅಲ್ಪಸಂಖ್ಯಾತರು, ಹಿಂದುಳಿದವರು ಸೇರಿದಂತೆ ಎಲ್ಲ ವರ್ಗದ ಜನರಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದ ಮುಖೇನ ಸ್ವಾಭಿಮಾನದ ಬದುಕನ್ನು ಕಲ್ಪಿಸಿದ್ದಾರೆ. ನಮಗೆಲ್ಲ ಸಂವಿಧಾನವೇ ಧರ್ಮ ಗ್ರಂಥ. ಅಂಬೇಡ್ಕರ್ ಅವರು ದೇವರಂತೆ ಕಾಣಿಸುತ್ತಾರೆ. ಹೀಗಾಗಿಯೇ ನಾವೆಲ್ಲ ಅವರ ಅನನ್ಯ ಕೊಡುಗೆಯನ್ನು ಪ್ರತಿನಿತ್ಯ ಪೂಜ್ಯನೀಯವಾಗಿ ಸ್ಮರಿಸುತ್ತಿದ್ದೇವೆ. ಹೀಗಾಗಿಯೇ ಬಹುತೇಕ ರಾಷ್ಟ್ರಗಳು ಅಂಬೇಡ್ಕರ್ ಅವರ ಪ್ರತಿಮೆಗಳನ್ನು ಸ್ಥಾಪಿಸಿ, ಗೌರವ ಸಲ್ಲಿಸುತ್ತಿವೆ.
ವಿಶ್ವವೇ ನೆಚ್ಚಿಕೊಂಡಿರುವ ಭಾರತ ಭಾಗ್ಯವಿದಾತನ ಬಗ್ಗೆ ಅಮಿತ್ ಷಾ ಕೀಳಾಗಿ ಮಾತನಾಡಿರುವುದು ನನ್ನನ್ನು ಒಳಗೊಂಡಂತೆ ಅಸಂಖ್ಯಾತ ಭಾರತೀಯರಿಗೆ ನೋವು ತಂದಿದೆ.
– ಡಾ.ಜಿ.ಪರಮೇಶ್ವರ್ , ಗೃಹ ಸಚಿವ



