ಅಮಿತ್ ಷಾ ಅವರು ಮಾನಸಿಕ ಅಸ್ವಸ್ಥರಾದಂತೆ ಕಾಣುತ್ತಿದೆ. ಅವರ ಮಾತು ಮತ್ತು ವರ್ತನೆ ಸಂಪೂರ್ಣ ದುರಹಂಕಾರದಿಂದ ಕೂಡಿದ್ದು ಅವರಿಗೆ ಅಧಿಕಾರದ ನಶೆ ಏರಿದೆ.
- ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣವೇ ಪದಚ್ಯುತಗೊಳಿಸಿ: ಸಿದ್ದರಾಮಯ್ಯ
- ಸತತ 5 ದಿನ ಬ್ಯಾಂಕ್ಗಳಿಗೆ ಬೀಗ!: ಏನಿರುತ್ತದೆ, ಏನಿಲ್ಲ? ಕಂಪ್ಲೀಟ್ ಡೀಟೈಲ್ಸ್!
- 814 ಉಪನ್ಯಾಸಕರ ನೇಮಕಾತಿಯಲ್ಲಿ ಉರ್ದುಗೆ ಸ್ಥಾನ ಎಲ್ಲಿದೆ?
- ಸಾಲ ಮನ್ನಾ ಮಾಡಿ ರೈತರ ಹಿತ ಕಾಪಾಡಿದ್ದ ಡಾ.ಮನಮೋಹನ್ ಸಿಂಗ್
- ರಾಜ್ಯದ ಅಭಿವೃದ್ಧಿಗೆ ಆರ್.ಅಶೋಕ್ ಅಡ್ಡಗಾಲು: ಕೆಪಿಸಿಸಿ
ಮಿಸ್ಟರ್ ಅಮಿತ್ ಷಾ ಅವರೇ, ದೇವರ ನಾಮವನ್ನು ಜಪಿಸುವುದರಿಂದ ಯಾರಿಗೂ “7 ಜನ್ಮ”ದಲ್ಲಿ “ಸ್ವರ್ಗ” ಪ್ರಾಪ್ತಿಯಾಗುವುದಿಲ್ಲ ಎಂದು ನಮಗೆ ತಿಳಿದಿದೆ. ಆದರೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಹೆಸರು ತಳಸಮುದಾಯಗಳಿಗೆ ಚೈತನ್ಯ ನೀಡುತ್ತದೆ. ಅವರಿಗೆ ಸಾಮಾಜಿಕ, ಆರ್ಥಿಕ ಸಮಾನತೆಯ ಮೂಲಕ ‘ಘನತೆ’ಯ ಬದುಕನ್ನು ನೀಡುತ್ತದೆ. ಅದು ಈ ‘ಜನ್ಮ’ದಲ್ಲಿಯೇ’.
ಬಹು ಮುಖ್ಯವಾಗಿ ಬಾಬಾಸಾಹೇಬರ ನಾಮವನ್ನು ಜಪಿಸುವುದರಿಂದ ನಮಗೆ ಮನುಸ್ಮೃತಿಯಿಂದ ‘ಮುಕ್ತಿ’ ದೊರಕುತ್ತದೆ.
ಬಾಬಾಸಾಹೇಬರ ಕಾರ್ಯಗಳು ಮತ್ತು ಆದರ್ಶಗಳು ಇಂದು ಹೆಚ್ಚು ಪ್ರಸ್ತುತವಾಗುತ್ತಿರುವುದು ಆರೆಸ್ಸೆಸ್ ಸಿದ್ದಾಂತಕ್ಕೆ ಮುಳುವಾಗಿದೆ. ಇದು ಮೋದಿ ಮತ್ತವರ ಸಹೋದ್ಯೋಗಿಗಳಿಗೆ ನುಂಗಲಾರದ ತುತ್ತಾಗಿದೆ.
ಸಂಸತ್ತಿನಲ್ಲಿ ಅಥವಾ ಯಾವುದೇ ವೇದಿಕೆಯಲ್ಲಿ ಮಾತನಾಡುವಾಗ ಪ್ರತಿ ಬಾರಿಯೂ ಬಾಬಾಸಾಹೇಬರ ಹೆಸರನ್ನು ಉಲ್ಲೇಖಿಸಬೇಕು ಎಂಬುದು ಅಮಿತ್ ಷಾ ಅವರನ್ನು ಇನ್ನಿಲ್ಲದಂತೆ ಕಾಡುತ್ತಿರುವಂತಿದೆ.
ಬಿಜೆಪಿಯು ಸಂವಿಧಾನ ವಿರೋಧಿಯಾಗಿದೆ. ಏಕೆಂದರೆ ಸಂವಿಧಾನವು ಆರೆಸ್ಸೆಸ್ ಸಿದ್ದಾಂತಕ್ಕೆ ವಿರುದ್ಧವಾಗಿ ಎಲ್ಲರಿಗೂ ಸಮಾನತೆಯನ್ನು ಪ್ರತಿಪಾದಿಸುತ್ತದೆ ಮತ್ತು ಶೋಷಿತ ವರ್ಗಗಳಿಗೆ ಬದುಕಿನ ಘನತೆಯನ್ನು ನೀಡಿದೆ.
– ಪ್ರಿಯಾಂಖ್ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ




