ಸತ್ಯದ ಪ್ರತಿಪಾದಕರನ್ನು ಇಲ್ಲವಾಗಿಸುವ ‘ನಾಗಪುರದ ನಾಗಗಳು’ ಅಮೆರಿಕೆಯನ್ನೂ ಪ್ರವೇಶಿಸಿದ್ದು ಆಶ್ಚರ್ಯ

1 year ago

ಹಂಜಿಮಠರಿಗೆ  ಉತ್ತರ.

ಅನಿವಾಸಿ ಭಾರತೀಯ ರವಿ ಹಂಜ್ ರವರು ( ಮೂಲ ಹೆಸರು ರವಿ ಹಂಜಿಮಠ) ನಾನು ಬರೆದ ‘ಥೈಲ್ಯಾಂಡ್ ನಲ್ಲಿ ಬಸವಣ್ಣ’ ಎಂಬ ಲೇಖನವನ್ನು ಉಲ್ಲೇಖಿಸಿ ನನ್ನ ವಿಚಾರಗಳನ್ನು ಅಲ್ಲಗಳೆಯುತ್ತ, ಅದಕ್ಕೆ ತಮ್ಮದೇ ಆದ ವ್ಯಾಖ್ಯಾನ ನೀಡಿ, ನನ್ನನ್ನು ಅಪಹಾಸ್ಯ ಮಾಡಿ, ಒಂದು ತಗಡು ಪತ್ರಿಕೆಯಲ್ಲಿ ಲೇಖನ ಪ್ರಕಟಿಸಿದ್ದಾರೆ.

ವೈಚಾರಿಕ ಭಿನ್ನಾಭಿಪ್ರಾಯಗಳನ್ನೂ ಸಹ ಗೌರವಯುತವಾಗಿ ಮಂಡಿಸುವುದು ಒಬ್ಬ ವಿಚಾರವಾದಿಯ ಲಕ್ಷಣ. ಅನಿವಾಸಿ ಭಾರತೀಯರಾದ ಹಂಜಿಮಠರು ( ರವಿ ಹಂಜ್) ಪೂರ್ವಪೀಡಿತರಾಗಿ ‘blood is thicker than water’ ಹೇಳಿಕೆಯಂತೆ ಸೈದ್ಧಾಂತಿಕ ವಿರೋಧಿಗಳನ್ನು ವೈಯಕ್ತಿಕ ವಿರೋಧಿಗಳೆಂದು ಭಾವಿಸುತ್ತಾ ಅಂತಹವರನ್ನು ನಿಂದಿಸುವುದು, ಅಪಮಾನಗೊಳಿಸುವುದು ಹಂಜಿಮಠರ ವ್ಯಕ್ತಿತ್ವವನ್ನೇ ಅನಾವರಣಗೊಳಿಸುತ್ತದೆ. ಸತ್ಯದ ಪ್ರತಿಪಾದಕರನ್ನು ಇಲ್ಲವಾಗಿಸುವ ‘ನಾಗಪುರದ ನಾಗಗಳು’ ಅಮೆರಿಕೆಯನ್ನೂ ಪ್ರವೇಶಿಸಿದ್ದು ಆಶ್ಚರ್ಯ.

ಸಂಶೋಧನೆ ಮತ್ತು  ಮರುಶೋಧನೆ ಒಂದು ನಿರಂತರ ಪ್ರಕ್ರಿಯೆ. ಇಂದು ಸರಿಕಂಡಿದ್ದು ನಾಳೆ ತಪ್ಪಾಗಿ ಕಾಣಬಹುದು. ವಿಜ್ಞಾನ ಮತ್ತು ಗಣಿತದಲ್ಲಿ ಉತ್ತರ ಯಾವಾಗಲೂ ನಿಖರವಾಗಿರುತ್ತದೆ. ೨+೨ = ೪ ಇನ್ನೊಂದು ಶತಮಾನದ ನಂತರವೂ ಈ ಉತ್ತರ ಬದಲಾಗದು. ಆದರೆ ಸಮಾಜ ವಿಜ್ಞಾನದಲ್ಲಿ ಅಷ್ಟೇ ನಿಖರವಾದ ಉತ್ತರ ಸಿಗಬಹುದು ಅಥವಾ ಸಿಗದೆಯೂ ಇರಬಹುದು. ಇಲ್ಲಿ ಒಬ್ಬನಿಗೆ  ಸರಿ ಕಂಡದ್ದು ಇನ್ನೊಬ್ಬನಿಗೆ ತಪ್ಪಾಗಿ ಕಾಣಿಸಬಹುದು. ಅದರೆ ಸಂಶೋಧಕನ ಸಂಶೋಧನೆಯನ್ನು   ತರ್ಕಶಾಸ್ತ್ರದ ಆಧಾರದಲ್ಲಿ ವಿಶ್ಲೇಷಿಸಿ ಸತ್ಯವನ್ನು ಎತ್ತಿಹಿಡಿಯಬಹುದು.

ಕನ್ನಡದ ಶ್ರೇಷ್ಠ ಸಂಶೋಧಕರಾದ ಶಂಭಾ ಜೋಶಿ ಅವರ ಮಾತು ಇಲ್ಲಿ ಪ್ರಸ್ತುತ “ಕಲ್ಬರಹಗಳಲ್ಲಿ ಬರೆದುದಷ್ಟೇ ಇತಿಹಾಸವೆಂದು ನಂಬಿದ ವಿದ್ವಾಂಸರು ಪುಸ್ತಕಗಳಲ್ಲಿ ಬರೆದುದರ ಹೊರತಾಗಿ ಉಳಿದಿದ್ದೆಲ್ಲ ಸುಳ್ಳು ಎಂಬ ಗ್ರಹಿಕೆಯ ಪಂಡಿತರೂ ಇನ್ನುಳಿದ ದಿಕ್ಕಿನಿಂದ ಬರುವ ಬೆಳಕಿಗೆ ಎರವಾಗುತ್ತಾರೆ. ಬೆಳಕು ಯಾವ ಬದಿಯಿಂದ ಬಂದರೂ ಅದು ಸ್ವಾಗತಾರ್ಹವೇ. ಬರೆದ ಸಂಗತಿಗಳ ಮೇಲೆ
ಕೈಯೂರಿಕೊಂಡು ಕುಳಿತು ಜೀವನದಲ್ಲಿ ಕಾಣುವ, ಕೇಳಿಬರುವ ಪ್ರತ್ಯಕ್ಷ
ವಿಷಯಗಳನ್ನು ಕಡೆಗಣಿಸುವುದು ವಿಚಾರವಾದಿಗಳಿಗೆ ಒಪ್ಪದ ಮಾತು. ಸತ್ಯವನ್ನು ಅರಿಯಲು ಪುಸ್ತಕ ಮತ್ತು ಪ್ರತ್ಯಕ್ಷ ಎರಡರ ಸಹಾಯವನ್ನು ಪಡೆಯಬೇಕು.  ಇವುಗಳಲ್ಲಿ ಯಾವುದೊಂದನ್ನೇ
ಆಧಾರವಾಗಿಟ್ಟುಕೊಳ್ಳುವುದರಿಂದ ಸತ್ಯ ಶೋಧನದಲ್ಲಿ ಪ್ರಗತಿಯಾಗದು” ಎಂದು ಸಂಶೋಧನೆಯ ಬಗ್ಗೆ ವ್ಯಾಖ್ಯಾನಿಸುತ್ತಾರೆ. (ಶಂಭಾಕೃತಿ; ಸಂಪುಟ ಎರಡು; ಪುಟ ಸಂಖ್ಯೆ ೧೪೪; ಪ್ರಕಾಶಕರು ಕನ್ನಡ ಪುಸ್ತಕ ಪ್ರಾಧಿಕಾರ ಚಾಮರಾಜಪೇಟೆ; ಬೆಂಗಳೂರು ೧೮)
ಇನ್ನು ನಾನು ಬರೆದ ಥೈಲೆಂಡ್ ನಲ್ಲಿ ಬಸವಣ್ಣ ಎಂಬ ವಿಷಯಕ್ಕೆ ಬರೋಣ, ಅಂಗೈಯಲ್ಲಿ
ಇಷ್ಟಲಿಂಗವನ್ನು ಇಟ್ಟು ಜ್ಞಾನಸಕ್ತನಾದ ಎರಡು  ಮೂರ್ತಿಗಳನ್ನು ಅಲ್ಲಿಯ ಸಮುದ್ರ ದಂಡೆಯ ಮೇಲಿರುವ ಚಿಕ್ಕದೇವಸ್ಥಾನದಲ್ಲಿ ಕಂಡಿದ್ದೆ. ಅದನ್ನು ಆಧರಿಸಿ ಒಂದು ಲೇಖನ ಬರೆದು fb ಯಲ್ಲಿ ಪ್ರಕಟಿಸಿದೆ.

ಹಂಜಿಮಠರು ಅದನ್ನು ಅಲ್ಲಗಳೆಯುತ್ತ ಅಲ್ಲಿ ಪದ್ಮಾಸನ ಹಾಕಿ ಕುಳಿತ ಬುದ್ಧನ ಧ್ಯಾನಸ್ತ ರೂಪದಂತೆ ಬಲಹಸ್ತದ ಮೇಲೆ ಯಡ ಹಸ್ತವನ್ನು ಇಟ್ಟುಕೊಂಡು ಮೂರ್ತಿಯೊಂದರ ಸೊಂಟದ ಪಟ್ಟಿಯ ಕಟ್ಟು (buckle)  ಕೈ ಮೇಲಿನ ಲಿಂಗದಂತೆ ಗೋಚರಿಸುವುದನ್ನು ಕಂಡ ಪಾಟೀಲರು ‘ಥೈಲ್ಯಾಂಡಿನಲ್ಲಿ ಬಸವ’ ಎಂದು ಆನಂದದ ಭಾವೋದ್ವೇಗದ ಕಡಲಲ್ಲಿ ತೇಲಾಡಿ ಸಂಶೋಧನಾ ಲೇಖನ ಬರೆದಿದ್ದಾರೆ” ಎನ್ನುತ್ತ “ಅಲ್ಲಿಯ ಬಸಯಾ (Basaya)  ಎನ್ನುವ ರೆಸಾರ್ಟಿನ ಬೋರ್ಡ್ ನೋಡಿ ಇದು ಜಗತ್ತಿನ ಎಂಟನೇ ಅದ್ಭುತದ ಥಾಯ್ ಬಸವಭಕ್ತ ಮಾಲಿಕತ್ವದ ರೆಸಾರ್ಟ  ಇರಲೇಬೇಕು ಎಂದುಕೊಂಡು ತಮ್ಮ ಅಫಧಮನಿಗಳಲ್ಲಿ ಉಕ್ಕಿದ ‘ಬಸಯಾ’ ಭಕ್ತಿಯ ರಸವನ್ನು ನಿಯಂತ್ರಿಸಿಕೊಂಡು ತ್ವರಿತವಾಗಿ ಲೇಖನವೊಂದನ್ನು  ಬರೆದುಕೊಂಡು ಸಮಯಾಭಾವದಿಂದ ಸ್ವದೇಶಕ್ಕೆ ವಾಪಸ್ಸಾಗಿದ್ದಾರೆ. ಅಂದ ಹಾಗೆ ‘ಬಸಯಾ’ ಎಂದರೆ ವಾಸ್ತವ್ಯ. ಬಸಯಾ ಎಂಬುದು ಸಂಸ್ಕೃತ ಪದ.  ಥೈಲ್ಯಾಂಡ್ ಹಿಂದೂ ದೇಶ. ಬಸಯಾ ಎಂದರೆ ವಿಜಯ, ಗಿಡಮೂಲಿಕೆಯ ಔಷಧಿ ಕೊಡುವ ಬೌದ್ಧ ಸನ್ಯಾಸಿ ಎಂಬೆಲ್ಲ ಅರ್ಥವಿದ್ದರೂ ಖಾಸಗಿ ವೈದ್ಯ ಎನ್ನುವುದಲ್ಲದೆ ಥಾಯ್  ಮಸಾಜ್ ಕಂಡುಹಿಡಿದ ಪಿತಾಮಹ ಎನ್ನುತ್ತಾರೆ. ಈ ರೆಸಾರ್ಟ ಜಗತ್ತಿನ ಎಂಟನೇ ಅದ್ಭುತ ಹೌದೋ ಅಲ್ಲವೋ ಗೊತ್ತಿಲ್ಲ. ಆದರೆ ಖಂಡಿತವಾಗಿಯೂ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗಿಗರ  ಎಂಟನೇ ಅದ್ಭುತ. ಹೀಗೆ ಅದ್ಭುತ ಸಂಕಲಗಳನ್ನು ಕಟ್ಟಿ ಜನರನ್ನು ಹುಚ್ಚೆಬ್ಬಿಸಿ ಭಕ್ತಿಪಥಕ್ಕೆ ಹಚ್ಚುವುದು ಇಂದಿನ ಅನೇಕ ಚರ್ಚುಗಳು ತಂತ್ರ” ಎಂದು ತಮ್ಮ ಸಂಶೋಧನಾ ಲೇಖನ  ಬರೆಯುತ್ತಾರೆ.

ಇವರ ವಿಲಕ್ಷಣ ವಾದಕ್ಕೆ ಅಂದೇ ಉತ್ತರ ಬರೆದಿದ್ದೆ. ‘ಇವರು ತಗಡು ಬುದ್ಧಿಯವರು ಅದಕ್ಕೆ ನೀಮ್ಮಂಥವರ ಉತ್ತರ ಬೇಡ’ ಎಂದು ನನ್ನ ಅನೇಕ ಮಿತ್ರರು ಒತ್ತಾಯಿಸಿದ್ದರು. ಅವರ ಒತ್ತಾಯಕ್ಕೆ ಮಣಿದು ನಾನು  ಉತ್ತರ ಪ್ರಕಟಿಸಿರಲಿಲ್ಲ.  ಆದರೆ ನಾಗಪುರದ ನಾಗಗಳ ಜೊತೆ ನಮ್ಮ ಮನೆಯಂಗಳದ ಮಿಡಿ ನಾಗಗಳು ಮತ್ತೆ ಮತ್ತೆ ಹೆಡೆಯತ್ತಲಾರಂಭಿಸಿವೆ. ಭಾರತ ಮಾತೆಯ ಕುತ್ತಿಗೆಯನ್ನು ಬಳಸಿ, ಜೋತಾಡುವ ಈ ನಾಗಗಳು ಭಾರತದ ಸಂವಿಧಾನವೆಂಬ ಭಾರತಾಂಬೆಯ ಕುತ್ತಿಗೆಯನ್ನೇ ಕಚ್ಚಲು ಹೆಡೆಯೆತ್ತಿ ವಿಷಹಾರಿ ಹಲ್ಲುಗಳನ್ನು ಪ್ರದರ್ಶಿಸುತ್ತಲಿವೆ. ಈ ವಿಷಕಾರಿ ಕ್ರಿಮಿಗಳ ಇರುವಿಕೆಯನ್ನು ಕಡೆಗಣಿಸಿ ಸುಮ್ಮನಿದ್ದು, ಅದರ ಇರುವಿಕೆ ಮರೆತರೆ ಮುಂದೊಂದು ದಿನ ವಿಷಕಕ್ಕಿ ಪ್ರಾಣಹಾನಿ ಮಾಡಬಹುದು. ನಾಗಗಳನ್ನು  ಮತ್ತು ಮಿಡಿನಾಗಗಳನ್ನು ಹೆಡೆಯ ಮೇಲೊಂದು ಏಟು ಹಾಕಿ,ಅವುಗಳ ಹೆಡೆಮುರಿಗಿ ಕಟ್ಟಿ ಅರಣ್ಯದಲ್ಲಿ ಬಿಡುವುದೇ ಕ್ಷೇಮ.

‘ಲಿಂಗಾಯತ ಚಳುವಳಿ ೧೭-೧೮’ ಎಂಬ ಪುಸ್ತಕ ರಚಿಸಿರುವೆ ಸುಮಾರು ನಾಲ್ಕ ನೂರು ಪುಟಗಳ ಈ ಗ್ರಂಥದ ಕರಡು ತಿದ್ದುವಿಕೆ  ಪ್ರಾರಂಭವಾಗಿದೆ. ಇದರಲ್ಲಿ ವೀರಶೈವ ಮತ್ತು ಹಿಂದೂ ವಿದ್ವಾಂಸರ ಕೆಲ ಪ್ರಶ್ನೆಗಳಿಗೆ ಉತ್ತರವನ್ನೂ ನೀಡಿದ್ದೇನೆ. ಅದು ಅಚ್ಚಿನ ಹಂತದಲ್ಲಿದೆ. ಹಂಜಿಮಠರಂತಹ ಹಲವಾರು ವೀರಶೈವ ಸಂಶೋಧಕರ ಪ್ರಶ್ನೆಗಳಿಗೆ ಉತ್ತರ ಈ ಪುಸ್ತಕ ಒದಗಿಸಬಹುದು.

ಸಂಶೋಧನೆಯಲ್ಲಿ ಎರಡು ಪ್ರಕಾರಗಳಿವೆ ಒಂದು ‘ಅನುಗಮನ’ ಎರಡನೆಯದು ‘ನಿಗಮನ’ ಇವುಗಳಲ್ಲಿ ಹಂಜಿಮಠರು ಆರಿಸಿಕೊಂಡದ್ದು  ‘ಅನುಗಮನ’ ಪದ್ದತಿಯನ್ನು. ಅನುಗಮನ ಸಂಶೋಧನಾ ಕ್ರಮದಲ್ಲಿ ತಮ್ಮ ಊಹೆಗಳನ್ನು ಅನುಸರಿಸಿಕೊಂಡು ಆಧಾರಗಳನ್ನು ಹುಡುಕಿಕೊಳ್ಳತ್ತ ಹೋಗಿ ಅನಕೂಲಕರ ಆಧಾರಗಳ ಸಿಕ್ಕದ್ಜನ್ನು ‘ಸಂಶೋಧನೆ’ ಎಂದು ಪ್ರಕಟಿಸುವುದು. ಅನುಗಮನ ಪದ್ಧತಿಯಲ್ಲಿ ಸತ್ಯ ಪ್ರಮುಖ ವಾಗುವುದಿಲ್ಲ. ಕಾರಣ ತಮ್ಮ  ಊಹೆಗೆ ಸಿಗುವ ದಾಖಲೆಗಳನ್ನು ಮಾತ್ರ ಅವರು ಹುಡುಕಿಕೊಂಡು ಹೋಗಿ ಅವುಗಳನ್ನೇ ಧಾಖಲಿಸಿಕೊಂಡು ನಿಜ ಸತ್ಯವನ್ನೇ ಕಡೆಗಣಿಸಿ ತಮ್ಮ ಮೂಗಿನ ನೇರಕ್ಕೆ ವಿಷಯ ಸಂಗ್ರಹಿಸಿ ಇದೇ ಸಂಶೋಧನೆ ಎಂದು ಬಿಂಬಿಸಿಬಿಡುವುದು. ಈ ಸಿದ್ಧಾತದಂತವನ್ನು ಪಾಲಿಸುವಂತಿದೆ ಹಂಜಿಮಠರು. ಈ ಸಂಶೋಧಕರು ನನ್ನ ವಿಷಯದಲ್ಲಿ ಕೂಡ ಇದನ್ನೆ ಬಳಸಿದ್ದಾರೆ. ನಾನು ತೆಗೆದ ಚಿತ್ರವನ್ನು ಸರಿಯಾಗಿ ಗಮನಿಸದೆ ತ್ವರಿತಗತಿಯಲ್ಲಿ ತಮ್ಮ ವಿಷದ ಹೆಡೆ ಬಿಚ್ಚಿದ್ದಾರೆ. ಇದಕ್ಕೆ ಕಾರಣ ಬೆರೆಯದೇ ಇದೆ. ಮೂಲವಾಗಿ ಇವರಿಗಿಂದು ಲಿಂಗಾಯತದ ಜಾತ್ಯತೀತದ ಹಿನ್ನಲೆ ನಮ್ಮ ಯುವ ಪೀಳಿಗೆಗೆ ಹಿಡಿಸುತ್ತಿರುವುದು ಮತ್ತು ಬಸವಣ್ಣನವರು ಜಗತ್ತಿನಾದ್ಯಂತ ಹರಡುತ್ತಿರುವ ರೀತಿ ಇವರಿಗೆ ಭಯ ಹುಟ್ಟಿಸಿದೆ. ಮೇಲಾಗಿ ತಮ್ಮ ಕುಲಬಾಂಧವರ ಹೊಟ್ಟಿಯ ಹಿಟ್ಟಿನ ಚಿಂತೆಯೂ ಪ್ರಾರಂಭವಾಗಿದೆ. ಹೀಗಾಗಿ ತಮ್ಮ ಮೌಢ್ಯವನ್ನು   ಸಂಶೋಧನೆಯೆಂಬ ಹೆಸರಿನಲ್ಲಿ ಆರ್. ಎಸ್. ಎಸ್. ಸಿದ್ದಾಂತಗಳನ್ನು ಲಿಂಗಾಯತ ಯುವಕರ ತಲೆಯಲ್ಲಿ  ಪ್ರತಿಷ್ಠಾಪಿಸುವ ಏಕೈಕ ಉದ್ದೇಶವನ್ನು ಹೊಂದಿರುವ ಇವರು ವಿಷಭಟ್ಟನ ತಗಡು  ಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದಾರೆ.

ನಾನು ಮತ್ತೊಮ್ಮೆ ಈ ಘನ ಸಂಶೋಧಕರಿಗೆ ವಿನಂತಿಸಿಕೊಳ್ಳುವುದೆನಂದರೆ ನಾನು ಪ್ರಕಟಿಸಿರುವ ಚಿತ್ರವನ್ನು ಪೂರ್ವಾಗ್ರಹ ಪೀಡಿತರಾಗದೆ  ಮತ್ತೊಮ್ಮೆ ಸರಿಯಾಗಿ ನೋಡರಿ. ಈ ಚಿತ್ರದಲ್ಲಿ ಎರಡು ಮೂರ್ತಿಗಳಿವೆ. ಒಂದು ದೊಡ್ಡ ಮೂರ್ತಿ ಅದರ ಬದಿಯಲ್ಲಿ ಇನ್ನೊಂದು ಚಿಕ್ಕ ಮೂರ್ತಿ. ಇವರು ದೊಡ್ಡ ಮೂರ್ತಿಯನ್ನು ಮಾತ್ರ ನೋಡಿ, ತಮ್ಮ ಸಂಶೋಧನೆ ಹೊರಬಿಟ್ಟಿದ್ದಾರೆ. ಆದರೆ ಇವರ ಕಣ್ಣಿಗೆ ಚಿಕ್ಕ ಮೂರ್ತಿಯು ಕೈಯಲ್ಲಿ ಇಷ್ಟುಲಿಂಗ ವೀರುವುದು ಹೇಗೆ? ಏಕೆ ಕಾಣಿಲಿಲ್ಲ?

ಇನ್ನು ತಮ್ಮ ಭಾಷಾ ಪಾಂಡಿತ್ಯವನ್ನು ಹರಿಬಿಟ್ಟಿದ್ದಾರೆ. ಮೊದಲಿಗೆ ಇವರು ಹೇಳುತ್ತಿರುವುದು ಸಂಸ್ಕ್ರತ ಭಾಷೆಯಲ್ಲಿ ‘ಬಸಯಾ’ ಎಂದರೆ ‘ವಿಜಯ’ ಎಂದು ಬರೆಯುತ್ತಾರೆ. ಮತ್ತೊಮ್ಮೆ ಗೀಡಮೂಲಿಕೆಗಳಿಂದ ತಯಾರಿಸಿದ ಔಷದ ಕೊಡುವ ಬೌದ್ಧ ಸನ್ಯಾಸಿ ಎಂದೂ ಬರೆಯುತ್ತಾರೆ. ಇವರ ಅರ್ಧ ಸಂಶೋಧನೆಗೆ ಪೂರ್ಣವಿರಾಮ ನೀಡಿ Phd ಬೇಡಿಕೆ ಸಲ್ಲಿಸುತ್ತಾರೆ.

ಇವರ ವಾದವನ್ನು ನಾನು ಒಪ್ಪುವುದಿಲ್ಲ ಕಾರಣ ಥಾಯಿ ಭಾಷೆಯಲ್ಲಿ ಅಕ್ಷರಗಳನ್ನು ಅವರು ರಾಗವಾಗಿ ಎಳೆದು ಮಾತಾಡುತ್ತಾರೆ.ಅದು ಅವರ ಭಾಷಾ ಶೈಲಿ. ಬಸವ ಅವರ ಬಾಯಲ್ಲಿ ‘ಬಸಯಾ’ ಆಗಿದೆ ಎಂದು ನನ್ನ ಅಭಿಪ್ರಾಯ. ಅವರು ಸಂಸ್ಕ್ರತ ಭಾಷೆಯನ್ನು ತಿಳಿದವರಾಗಿದ್ದರೆ ವಿಜಯ ಎಂದೆ ಕರೆಯಬಹುದಾಗಿತ್ತಲ್ಲ?

ಥೈಲ್ಯಾಂಡ್ ಹಿಂದೂ ದೇಶವೆಂದೂ ಬರೆಯುತ್ತಾರೆ. ಥೈಲ್ಯಾಂಡನಲ್ಲಿ ಬೌದ್ಧ ಧರ್ಮವು ರಾಷ್ಟ್ರೀಯ ಧರ್ಮ, ಬೌದ್ಧ ಧರ್ಮ ಕ್ರಿ. ಪೂರ್ವದ ಧರ್ಮ. ವೈದಿಕ ಸಾಹಿತ್ಯದ ಮೊದಲೇ ಬುದ್ದ ಸಾಹಿತ್ಯವಿತ್ತು. ಥೈಲ್ಯಾಂಡಿನಲ್ಲಿ ಬುದ್ಧನ ಪ್ರತಿಮೆಗಳು ಮನೆಮನೆ, ರಸ್ತೆರಸ್ತೆಯಲ್ಲಿ ಕಾಣುತ್ತವೆ. ಇವರಿಗೆ  ಅದ್ಹೇಗೆ ಥೈಲ್ಯಾಂಡ್  ಹಿಂದೂ ದೇಶವಾಗಿ ಕಂಡಿತೋ ನನಗೆ ತಿಳಿಯದು. ವಾಸ್ತವವಾಗಿ ಇಲ್ಲಿ ಗಣಪತಿ ಮೂರ್ತಿಗಳು ಮತ್ತಿತರ ವೈದಿಕ ಮೂರ್ತಿಗಳನ್ನು ಕಾಣಬಹುದು. ಅದರರ್ಥ ಥಾಯಿಗಳು ಹಿಂದೂಗಳೆಂದು ಕರೆಯಲಾದೀತೆ? ಅರಬ್ ರಾಷ್ಟ್ರಗಳಲ್ಲಿ ಇತ್ತೀಚೆಗೆ ದೇವಸ್ಥಾನ ನಿರ್ಮಿಸಲಾಗಿದೆ. ಇವರ ಸಂಶೋಧನೆಯನ್ನು ಒಪ್ಪಿದಲ್ಲಿ ಹಿಂದೂ ದೇವಾಲಯವಿರುವ ಅಮೇರಿಕಾ, ಕ್ಯಾನಡಾ, ಯುರೋಪಿನ ಅನೇಕ ದೇಶಗಳು, ಮುಸ್ಲಿಂ ರಾಷ್ಟ್ರಗಳಾದ ಅರಬ್ ರಾಷ್ಟ್ರಗಳು ಮತ್ತು ಮಲೆಯಾ ಇವೆಲ್ಲವೂ  ಕೂಡ  ಹಿಂದೂ ದೇಶಗಳೆ ಆಗಬೇಕಲ್ಲವೆ?

ಕಾಮುಕನ ಕಣ್ಣು ಯಾವಾಗಲೂ ಹಳದಿಯಲ್ಲವೆ? ಅಂತೆಯೇ ವೀರಶೈವ ಪ್ರತಿಪಾದಕರಿಗೆ ಜಗತ್ತೆಲ್ಲವೂ ಹಿಂದೂಮಯವೆ! ಇನ್ನು ಹಂಜಿಮಠರ ವಾದದಂತೆ ‘ಬಸಯಾ’ ಎಂದರೆ ಸಂಸ್ಕೃತದಲ್ಲಿ ‘ವಿಜಯ’. ಆ ಪಟದಲ್ಲಿರುವ ವ್ಯಕ್ತಿಯನ್ನು ಗಿಡಮೂಲಿಕೆಗಳಿಂದ ಔಷದ ಮಾಡಿ ಮಸಾಜ್ ಮಾಡುವ ಸ್ಥಳೀಯ ಬೌದ್ಧ ಸನ್ಯಾಸಿ ಎಂದು ಅವರು ಬರೆಯುತ್ತಾರೆ. ಇವರ ವಾದವನ್ನು ಒಂದು ಕ್ಷಣ ಒಪ್ಪಿಕೊಂಡು ದಾಖಲೆಗಳಿಗೆ ತಡಕಾಡಿದೆ. ಸಂಸ್ಕೃತ ಪದ ಕೋಶದಲ್ಲಿ ‘ಬಸಯಾ’ ಎಂಬ ಪದದ ಅರ್ಥ ಸಿಗಲಿಲ್ಲ. ಸಂಸ್ಕೃತ ತಜ್ಞರಾದ ಸ್ನೇಹಿತರಲ್ಲಿ ವಿಚಾರಿಸಿದಾಗ ಅವರಿಗೂ ಸಹ ಆ ಶಬ್ದ ಅರ್ಥ ಸಿಗಲಿಲ್ಲ. ಆಗ ನಾನು ಗೂಗಲ್ ನಲ್ಲಿ ದೇವನಾಗರ ಲಿಪಿಯಲ್ಲಿ ಟೈಪ್ ಮಾಡಿ ಹುಡುಕಿದಾಗ ಅವರು ಹೇಳಿದ ಅರ್ಥ ಸಿಕ್ಕಿತು.
ಅಮೆರಿಕ ನಿವಾಸಿಗಳು ತಮ್ಮ ಮನೆಯ ಟಾಯ್ಲೆಟ್ ದಾರಿಗಾಗಿ ಗೂಗಲ್ ಬಳಸುತ್ತಾರೆ. ಇವರಿಂದು ಅಮೇರಿಕೆಯ ನಿವಾಸಿಯಾಗಿ ಅಲ್ಲಿಯೂ ತಮ್ಮ ಹೆಡೆಬಿಚ್ಚುತ್ತಿರುವ ರವಿ ಹಂಜ್  ಉರ್ಪ್ ರವಿ ಹಂಜಿಮಠರು ಗೂಗಲ್ ಉತ್ತರವನ್ನು ತಮ್ಮ ಮಹಾ ಸಂಶೋಧನೆ ಎಂದು ಬಿಂಬಿಸಿಕೊಂಡಿದ್ದರಲ್ಲಿ ನನಗೇನೂ ಅಚ್ಚರಿ ಕಾಣಲಿಲ್ಲ.

ಇನ್ನೊಂದು ವಿಷಯ ಸ್ಪಷ್ಟಪಡಿಸಲು ಬಯಸುವೆ. ನಾನು ಕಂಡ ಚಿಕ್ಕ ದೇವಸ್ಥಾನದಲ್ಲಿರುವ ಮೂರ್ತಿಗಳ ಅಡಿಯಲ್ಲಿ ಥಾಯಿ ಭಾಷೆಯಲ್ಲಿ ಕೆಲವು ಸಾಲಗಳನ್ನು ಬರೆಯಲಾಗಿದೆ. ಅದರ ಅರ್ಥ ನನಗೆ ತಿಳಿಯದು. ಆ ಶಬ್ದಗಳಲ್ಲಿ ‘ಬಸಯಾ’ ಶಬ್ದದ ವಿವರಣೆ  ಏನಾದರೂ ಇದ್ದಲ್ಲಿ ಅಥವಾ ಆ ಮೂರ್ತಿಗಳ ಹೆಸರು ಮತ್ತು ಕಾಯಕಗಳ ವಿವರಗಳು ಸಿಕ್ಕು ಅವು ಹಂಜಿಮಠರ ವಾದವನ್ನು ಸಮರ್ಥಿಸುತ್ತಿದ್ದಲ್ಲಿ ನಾನು ನನ್ನ ತಪ್ಪನ್ನು ಒಪ್ಪಿಕೊಂಡು ಅವರಲ್ಲಿ ಬಹಿರಂಗ ಕ್ಷಮೆ ಕೇಳುತ್ತೇನೆ.

ಅನಿವಾಸಿ ಭಾರತೀಯರಾದ ಹಂಜಿಮಠರು ಸೈದ್ಧಾಂತಿಕ ಭಿನ್ನಾಭಿಪ್ರಾಯ ಹೊಂದಿರುವವರನ್ನು ವೈಯಕ್ತಿಕ ವೈರಿಗಳೆಂದು ಪರಿಗಣಿಸಿ ಟೀಕೆ ಮಾಡುವುದು ತೀರಾ ದೂರದೃಷ್ಟಕರ. ಖ್ಯಾತ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿಯವರ ಪಾದದ ದೂಳಿಗೂ ಸಮವಿರದ ಕೆಲವು ಸ್ವಬಿಂಬಿತ ಸಂಶೋಧಕರು ಅವರನ್ನು ಹಳಿದರೆ ಬಸವಣ್ಣನವರ ವಚನ ಜ್ಞಾಪಿಸಿಕೊಳ್ಳಲೇಬೇಕಾಗುತ್ತದೆ.

ಪಾಟೀಲರು ಥೈಲ್ಯಾಂಡ್ಗೆಕೆ ಹೋದರು? ಎಂದು ಕುಚೋದ್ಯದ ಪ್ರಶ್ನೆ ಕೇಳಿದ್ದಾರೆ. ಅವರಿರುವ ಅಮೆರಿಕಯಲ್ಲೂ ಥೈಲ್ಯಾಂಡಿನ ‘ಪಟಾಯಾ’ ಗಿಂತಲೂ ಪ್ರಸಿದ್ಧಿ ಪಡೆದ ‘ಲಾಸ್ ವೇಗಸ್’ (las vegas) ಇದೆ ಎಂಬುದನ್ನು ಅವರು ಹೇಗೆ ಮರೆತರು?  ಇವರ  ವಾದ ವಿಚಿತ್ರವೆನಿಸುತ್ತವೆ. ಮುಂಬೈಗೆ ತೆರಳುವವರೆಲ್ಲರೂ ಕಮಾಟಿಪುರ ಪ್ರದೇಶದಲ್ಲಿರುವ ವೇಶ್ಯಾವಾಟಿಕೆ ಅನುಭವಿಸಲು  ಹೋಗುತ್ತಾರೆ ಎಂಬಂತಿದೆ. ಅದೇ ರೀತಿಯಾಗಿ ನೈದರ್ ಲ್ಯಾಂಡಿನಲ್ಲಿ amsterdam  ಇದೆ, ದೆಹಲಿಯಲ್ಲಿ ಜಿ.ಬಿ. ರೋಡಿದೆ, ಅಷ್ಟೇಕೆ ಊರೂರುಗಳಲ್ಲಿ ಸುಳೇಕೇರಿಗಳು ಇವೆ. ಅಂದರೆ  ಇವರಿರುವ ಅಮೇರಿಕೆಯಲ್ಲಿ ಕೇವಲ ಗರತಿಯರು ಮಾತ್ರ  ಇದ್ದಾರೆಯೇ? ರೋಗಗ್ರಸ್ತ ಮನಸ್ಸುಗಳು ಮತ್ತೇನನ್ನು ಯೋಚಿಸಲು ಸಾಧ್ಯ? ಹನ್ನೆರಡನೆಯ ಶತಮಾನದ ಬಸವಣ್ಣನವರ ಕಾಲದಲ್ಲಿಯೂ ಸೂಳೆ ಸಂಕವ್ವೆ ತನ್ನ ಕಾಯಕವನ್ನು ತ್ಯಜಿಸಿ ಶರಣೆಯಾಗಿದ್ದು ಈ ಮೌಡ್ಯ ಬಿತ್ತುವ ವೈದಿಕ ಆಚರಣೆಯಲ್ಲಿ  ತೊಡಗಿರುವ ಹಂಜಿಮಠರಿಗೆ ಹೇಗೆ ಗೊತ್ತಾಗಬೇಕು? ಹಗಲಿನಲ್ಲಿ ಜಂಗಮರಾಗಿ ರಾತ್ರಿಯಲ್ಲಿ ಮಕ್ಕಳನ್ನು ಮಂಚಕ್ಕೆ ಕರೆಯುವ ಡೋಂಗಿ ಸ್ವಾಮಿಗಳು ಇವರ ಸಹೋದರರು ಅಲ್ಲವೆ ?

– ಜಿ ಬಿ ಪಾಟೀಲ್, ಪ್ರಧಾನ ಕಾರ್ಯದರ್ಶಿ ಜಾಗತಿಕ ಲಿಂಗಾಯತ ಮಹಾಸಭಾ

Leave a Reply