ಬೆಂಗಳೂರು: ವಿದ್ಯಾರ್ಥಿಗಳ ಭವಿಷ್ಯದ ಮಹತ್ವದ ಘಟ್ಟ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆಯಾಗಿದೆ. ಈ ಕುರಿತು ಹೊರಡಿಸಲಾಗಿರುವ ಪ್ರಕಟಣೆಯಲ್ಲಿ, ಪಿ.ಯು.ಸಿ ಪರೀಕ್ಷೆ ಮಾರ್ಚ್1ರಿಂದ 19ರವರೆಗೆ ಮತ್ತು ಎಸ್.ಎಸ್.ಎಲ್.ಸಿ ಪರೀಕ್ಷೆ ಮಾರ್ಚ್ 20ರಿಂದ ಏಪ್ರಿಲ್ 2ರ ವರೆಗೆ ನಡೆಲಿದೆ ಎಂದು ತಿಳಿಸಲಾಗಿದೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಎಲ್ಲ ಶಾಲಾ-ಕಾಲೇಜುಗಳು ವೇಳಾಪಟ್ಟಿಯ ಮಾಹಿತಿಯನ್ನು ಮಕ್ಕಳಿಗೆ ನೀಡಬೇಕು ಎಂದು ಸೂಚಿಸಿರುವ ಮಂಡಳಿ, ವೇಳಾಪಟ್ಟಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು, ಪೋಷಕರು ಮತ್ತು ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು 15 ದಿನಗಳ (ಡಿಸೆಂಬರ್ 2ರಿಂದ 16ರ ವರೆಗೆ) ಕಾಲಾವಕಾಶ ಒದಿಗಿಸಿದೆ.
ಎಸ್‌ಎಸ್‌ಎಲ್‌ಸಿ ಅಂತಿಮ ಪರೀಕ್ಷೆ- ವೇಳಾಪಟ್ಟಿ
ಮೊದಲ ಭಾಷೆ: ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಇಂಗ್ಲಿಷ್ (ಎನ್‌ಸಿಇಆರ್‌ಟಿ), ಸಂಸ್ಕೃತ
ದ್ವಿತೀಯ ಭಾಷೆ: ಇಂಗ್ಲಿಷ್, ಕನ್ನಡ
ತೃತೀಯ ಭಾಷೆ: ಹಿಂದಿ, ಕನ್ನಡ, ಇಂಗ್ಲಿಷ್, ಪರ್ಷಿಯನ್, ಅರೇಬಿಕ್, ತುಳು, ಉರ್ದು, ಸಂಸ್ಕೃತ, ಕೊಂಕಣಿ, ಎನ್‌ಎಸ್‌ಕ್ಯೂಎಫ್ ವಿಷಯಗಳು.
ಮಾರ್ಚ್ 20 ಗುರುವಾರ – ಪ್ರಥಮ ಭಾಷೆ
ಮಾರ್ಚ್ 22 ಶನಿವಾರ – ಸಮಾಜ ವಿಜ್ಞಾನ
ಮಾರ್ಚ್ 24 ಸೋಮವಾರ – ದ್ವಿತೀಯ ಭಾಷೆ
ಮಾರ್ಚ್ 27 ಗುರುವಾರ – ಗಣಿತ
ಮಾರ್ಚ್ 29 ಶನಿವಾರ – ತೃತೀಯ ಭಾಷೆ
ಏಪ್ರಿಲ್ 2 ಬುಧವಾರ – ವಿಜ್ಞಾನ
ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ (ತಾತ್ಕಾಲಿಕ)
ಎಲ್ಲಾ ಪರೀಕ್ಷೆಗಳು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ತನಕ ನಡೆಯಲಿದೆ.
ಮಾರ್ಚ್ 1, 2025, ಶನಿವಾರ: ಕನ್ನಡ/ಅರೇಬಿಕ್
ಮಾರ್ಚ್ 3, 2025, ಸೋಮವಾರ: ಗಣಿತ/ ಶಿಕ್ಷಣ ಶಾಸ್ತ್ರ/ ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
ಮಾರ್ಚ್ 4, 2025, ಮಂಗಳವಾರ: ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
ಮಾರ್ಚ್ 5, 2025, ಬುಧವಾರ: ರಾಜ್ಯಶಾಸ್ತ್ರ/ ಸಂಖ್ಯಾಶಾಸ್ತ್ರ
ಮಾರ್ಚ್ 6, 2025, ಗುರುವಾರ: ಬಿಡುವು
ಮಾರ್ಚ್ 7, 2025: ಶುಕ್ರವಾರ: ಇತಿಹಾಸ, ಭೌತಶಾಸ್ತ್ರ
ಮಾರ್ಚ್ 8, 2025 ಶನಿವಾರ: ಹಿಂದಿ
ಮಾರ್ಚ್ 9 ಭಾನುವಾರ ರಜಾದಿನ
ಮಾರ್ಚ್ 10: ಐಚ್ಛಿಕ ಕನ್ನಡ/ ಲೆಕ್ಕಶಾಸ್ತ್ರ/ ಭೂರ್ಗಭಶಾಸ್ತ್ರ/ ಗೃಹ ವಿಜ್ಞಾನ




