ಬಳ್ಳಾರಿ: ಮಾನವನು ಸದಾ ಚಟುವಟಿಕೆಯಿಂದ ಇರಬೇಕೆಂದರೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮತೋಲನದಲ್ಲಿಸಿಕೊಳ್ಳಬೇಕು. ಅದಕ್ಕೆ ಕ್ರೀಡಾ ಚಟುವಟಿಕೆಗಳು ಅತ್ಯಂತ ಸಹಕಾರಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಹೇಳಿದರು.
ನಗರದ ಜಿಮ್ಕಾನದಲ್ಲಿ ಜೆ.ಎಸ್.ಡಬ್ಲ್ಯೂ ಮತ್ತು ಜಿಮ್ಕಾನ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಜೆ.ಎಸ್.ಡಬ್ಲ್ಯೂ ಕಪ್ ಟೆನ್ನಿಸ್ ಪಂದಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.
ಇದೇ ವೇಳೆ ಜಿಮ್ಕಾನದ ಎಕ್ಸಿಕ್ಯೂಟಿವ್ ಕಮಿಟಿ ಸದಸ್ಯ ಕಾಂಡ್ರ ಸತೀಶ್ ಕುಮಾರ್ ಮಾತನಾಡಿ, ಈ ಪಂದ್ಯಾವಳಿಗೆ ಉತ್ತರ ಕರ್ನಾಟಕದ ಟೆನ್ನಿಸ್ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ, ಈ ಕ್ರೀಡೆಯಲ್ಲಿ 120 ಸಿಂಗಲ್ಸ್ ಆಟಗಾರರು ಮತ್ತು 140 ಡಬಲ್ಸ್ ಆಟಗಾರರು ಭಾಗವಹಿಸಿದ್ದಾರೆ ಎಂದರು.
ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಸೂರ್ಯವಂಶಿ, ಪೊಲೀಸ್ ಜಿಮ್ಖಾನ ಅಧ್ಯಕ್ಷ ಕೆ.ಜಿತೇಂದ್ರ, ಕಾರ್ಯದರ್ಶಿ ಜಿಎಂ ರವಿರಾಜಶೇಖರ ರೆಡ್ಡಿ, ಜೆಎಸ್ಡ ಬ್ಲ್ಯೂ ಅಧ್ಯಕ್ಷ ಮುರುಗನ್, ಮುಖಂಡರಾದ ಉದಯ್ ಭಾಸ್ಕರ್, ಸುಬ್ರಮಣ್ಯ, ಸೂರ್ಯ ಪ್ರಕಾಶ್, ಗವಿ ಬಸವರಾಜ್, ರಾಘವೇಂದ್ರ.ಹೆಚ್.ಎಸ್., ಸೇರಿದಂತೆ ಇತರರು ಹಾಜರಿದ್ದರು.



