ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳಲ್ಲಿ 20,000 ರನ್ ಗಳನ್ನು ಪೂರೈಸಿದ ನಾಲ್ಕನೇ ಭಾರತೀಯ ಕ್ರಿಕೆಟ್ ಆಟಗಾರ ಎಂಬ ದಾಖಲೆಗೆ ಚಿತೇಶ್ವರ ಪೂಜಾರ ಪಾತ್ರರಾಗಿದ್ದಾರೆ. ಈ ಮೂಲಕ ಅವರು, ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಅವರ ಪಟ್ಟಿಯಲ್ಲಿ ಸೇರಿದ್ದಾರೆ.
ಭಾರತೀಯ ಮಧ್ಯಮ ಕ್ರಮಾಂಕದ ಅನುಭವಿ ಬ್ಯಾಟ್ಸ್ ಮನ್ ಚೇತೇಶ್ವರ ಪೂಜಾರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 20,000 ರನ್‌ಗಳನ್ನು ಪೂರೈಸಿದರು. ಈ ಸಾಧನೆ ಮೆರೆದ ನಾಲ್ಕನೇ ಭಾರತೀಯ ಬ್ಯಾಟ್ಸಮನ್ ಎಂಬ ದಾಲೆಯನ್ನು ಅವರು ಬರೆದಿದ್ದಾರೆ.
ನಾಗ್ಪುರದಲ್ಲಿ ವಿದರ್ಭ ವಿರುದ್ಧ ಸೌರಾಷ್ಟ್ರದ ರಣಜಿ ಟ್ರೋಫಿ ಪಂದ್ಯದ ವೇಳೆ ಪೂಜಾರ ಈ ಮೈಲಿಗಲ್ಲು ದಾಖಲಿಸಿದರು. ಪಂದ್ಯದಲ್ಲಿ, ಪೂಜಾರ ಮೊದಲ ಇನ್ನಿಂಗ್ಸ್ ನಲ್ಲಿ ಅವರು 105 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ 43 ರನ್ ಗಳಿಸಿದರು. ನಂತರ ಎರಡನೇ ಇನ್ನಿಂಗ್ಸ್ ನಲ್ಲಿ ಅವರು 137 ಎಸೆತಗಳಲ್ಲಿ 10 ಬೌಂಡರಿಗಳೊಂದಿಗೆ 66 ರನ್ ಗಳಿಸಿದರು. ಈ ಪಂದ್ಯವನ್ನು ಸೌರಾಷ್ಟ್ರ 238 ರನ್‌ಗಳಿಂದ ಗೆದ್ದುಕೊಂಡಿತು.
260 ಪ್ರಥಮ ದರ್ಜೆ ಪಂದ್ಯಗಳಲ್ಲಿ ಪೂಜಾರ 51.98 ಸರಾಸರಿಯಲ್ಲಿ 20,013 ರನ್ ಗಳಿಸಿದ್ದಾರೆ. ಈ ಮಾದರಿಯಲ್ಲಿ ಅವರು 61 ಶತಕ ಮತ್ತು 78 ಅರ್ಧಶತಕಗಳನ್ನು ದಾಖಲಿಸಿದ್ದಾರೆ. ಅವರ ಅತ್ಯುತ್ತಮ ಸ್ಕೋರ್ 352 ಆಗಿದೆ.
ಪ್ರಥಮ ದರ್ಜೆ ಪಂದ್ಯಗಳಲ್ಲಿ 20,000 ರನ್ ಗಳಿಸಿರುವವರ ಪಟ್ಟಿ
ಸುನಿಲ್ ಗವಾಸ್ಕರ್ – 25,896
ಸಚಿನ್ ತೆಂಡೂಲ್ಕರ್ – 25,396
ರಾಹುಲ್ ದ್ರಾವಿಡ್ – 23,794
ಭಾರತದ ಪರ 103 ಟೆಸ್ಟ್ ಗಳಲ್ಲಿ, 176 ಇನ್ನಿಂಗ್ಸ್ ಪೈಕಿ 19 ಶತಕ ಮತ್ತು 35 ಅರ್ಧಶತಕಗಳೊಂದಿಗೆ 43.60 ಸರಾಸರಿಯಲ್ಲಿ 7,195 ರನ್ ಗಳಿಸಿದ್ದಾರೆ. ಅವರ ಅತ್ಯುತ್ತಮ ಸ್ಕೋರ್ 206* ಆಗಿದೆ. ಆದರೆ, ಪೂಜಾರ ಭಾರತದ ಪರ ಕೊನೆಯ ಟೆಸ್ಟ್ ಅನ್ನು ಜೂನ್ 2023 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ್ದಾರೆ. ಇದು ಯುಕೆಯಲ್ಲಿ ನಡೆದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯವಾಗಿತ್ತು. ಅನಂತರ ಜನವರಿ 25 ರಿಂದ ಇಂಗ್ಲೆಂಡ್ ವಿರುದ್ಧದ ತವರಿನಲ್ಲಿ ನಡೆಯಲಿರುವ ಐದು-ಟೆಸ್ಟ್ ಸರಣಿ ಸೇರಿದಂತೆ ಟೆಸ್ಟ್ ತಂಡದಲ್ಲಿ ಅವರನ್ನು ಆಯ್ಕೆಗೆ ಪರಿಗಣಿಸಿಲ್ಲ.




