ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಆಕ್ಸಿಡೆಂಟ್ ಸಿಟಿಯಾಗಿ ಬದಲಾಗಿದೆ. ನಗರದಲ್ಲಿ ಪ್ರಸಕ್ತ ವರ್ಷ ದಾಖಲೆ ಪ್ರಮಾಣದ ರಸ್ತೆ ಅಪಘಾತಗಳು ಸಂಭವಿಸಿರುವುದು ಸಂಚಾರ ಪೊಲೀಸ್ ಅಂಕಿ-ಅಂಶಗಳಿಂದ ಪತ್ತೆಯಾಗಿದೆ. ಅದರಲ್ಲಿಯೂ ದ್ವಿಚಕ್ರ ವಾಹನ ಸವಾರರೇ ಸಂಚಾರ ನಿಯಮಗಳನ್ನು ಅತಿಹೆಚ್ಚು ಉಲ್ಲಂಘಿಸುತ್ತಿದ್ದು, ಈ ವರ್ಷ ಮೇ ತಿಂಗಳ ವೇಳೆಗೆ 2000ಕ್ಕೂ ಹೆಚ್ಚಿನ ರಸ್ತೆ ಅಪಘಾತಗಳು ನಗರದಲ್ಲಿ ಸಂಭವಿಸಿವೆ. ಈ ಘಟನೆಗಳಲ್ಲಿ 368 ಮಾರಣಾಂತಿಕ ಮತ್ತು 1,672 ಮಾರಣಾಂತಿಕ ಅಲ್ಲದವುಗಳಾಗಿದ್ದು, 376 ಸಾವುಗಳು ಸಂಭವಿಸಿವೆ. 1,736 ಮಂದಿ ಗಾಯಗೊಂಡಿದ್ದಾರೆ.
- ಪ್ರೊ. ಬರಗೂರು ಅವರ ದಿಟ್ಟ ಹೆಜ್ಜೆ – 25 ವರ್ಷಗಳ ಸಾರ್ಥಕ ಯಾನ!
- ಸಂಪುಟದಿಂದ ಹೊರಗಿಟ್ಟಿರುವುದು ನನಗೆ ಸಿಕ್ಕ ಪ್ರತಿಫಲವೇ?: ಬಿ ಆರ್ ಪಾಟೀಲ್
- ಸಂಪುಟದಲ್ಲಿ ಭ್ರಷ್ಟಾಚಾರಿಗಳು, ಪೇಮೆಂಟ್ ಕೋಟಾ ಮೂಲಕ ಅವಕಾಶ ಗಿಟ್ಟಿಸಿಕೊಂಡವರು ಇದ್ದಾರೆ: ಆರ್.ಅಶೋಕ
- ಬಿಜೆಪಿ ನಾಯಕರು ಸಂವಿಧಾನ ಓದಿದನ ನಂತರ ಕಾಂಗ್ರೆಸ್ ಲೆಟರ್ಹೆಡ್ ಓದಲಿ: ಬಿ.ಕೆ.ಹರಿಪ್ರಸಾದ್
- ನೀರು ಸತ್ಯಾಗ್ರಹ ಕೃತಕ ಬುದ್ಧಿಮತ್ತೆ ಮತ್ತು ಕೃಷಿ ಕುರಿತು ಗಂಭೀರ ಚರ್ಚೆ
ಲಭ್ಯವಾಗಿರುವ ಅಂಕಿಅಂಶಗಳ ಪ್ರಕಾರ, 2024ರಲ್ಲಿ 39,10,980 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಅಜಾಗರೂಕ ಚಾಲನೆ ಮತ್ತು ಅತಿ ವೇಗವು ಪ್ರಮುಖವಾಗಿವೆ. ಡ್ರಿಂಕ್ ಅಂಡ್ ಡ್ರೈವ್ ಪ್ರಕರಣಗಳೇ 5,433 ದಾಖಲಾಗಿವೆ. ಜೊತೆಗೆ ಪರವಾನಗಿ ಇಲ್ಲದೆ ಚಾಲನೆ (2,710 ಪ್ರಕರಣಗಳು), ದೋಷಯುಕ್ತ ನಂಬರ್ ಪ್ಲೇಟ್ (87,277 ಪ್ರಕರಣಗಳು) ಮತ್ತು ಟ್ರಾಫಿಕ್ ಸಿಗ್ನಲ್ ಜಂಪ್ (2,46,284 ಪ್ರಕರಣಗಳು) ಕೂಡ ಇದರಲ್ಲಿ ಸೇರಿವೆ.
ಹೆಲ್ಮೆಟ್ ರಹಿತ ಚಾಲನೆ ಬಹುದೊಡ್ಡ ಸಮಸ್ಯೆಯಾಗಿದೆ. 16 ಲಕ್ಷಕ್ಕೂ ಹೆಚ್ಚು ಸವಾರರು ಮತ್ತು 10 ಲಕ್ಷ ಹಿಂಬದಿ ಸವಾರರು ಹೆಲೈಟ್ ಇಲ್ಲದೆ ಸಿಕ್ಕಿಬಿದ್ದಿದ್ದಾರೆ. ಸೀಟ್ ಬೆಲ್ಟ್ ಧರಿಸದೇ ಸಂಚಾರ ಮಾಡಿದ 1,83, 321 ಪ್ರಕರಣಗಳು ಮತ್ತು ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸಿದ 48,947 ಪ್ರಕರಣಗಳು ದಾಖಲಾಗಿವೆ.
ದ್ವಿಚಕ್ರ ವಾಹನಗಳು ನಿಯಮ ಉಲ್ಲಂಘನೆಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, 33 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಟೆಂಪೋಗಳು, ಲಘು ಮೋಟಾರು ವಾಹನಗಳು, ಆಟೋರಿಕ್ಷಾಗಳು, ಸರಕು ವಾಹನಗಳು ಮತ್ತು ಬಸ್ಗಳು ನಿಯಮ ಉಲ್ಲಂಘನೆಯಲ್ಲಿ ನಂತರದ ಸ್ಥಾನಗಳಿಸಿವೆ.




