ಬೆಂಗಳೂರು: ₹64 ಕೋಟಿ ಬೆಲೆ ಬಾಳುವ ಭೂಮಿಯನ್ನು ಅನಧಿಕೃತ ದಾಖಲೆಯೊಂದಿಗೆ ಶ್ರೀಮತಿ ಹೆಸರಿನಲ್ಲಿ ಹೊಂದಿರುವ ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಇದಕ್ಕಿಂತಲೂ ಪುರಾವೆ ಬೇಕೇ ನಿಮ್ಮ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ? ಎಂದು ಬಿಜೆಪಿ ಪ್ರಶ್ನಿಸಿದೆ.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿರುವ ಬಿಜೆಪಿ, ನಿಮ್ಮ ಪತ್ನಿಯ ಅನಧಿಕೃತ ಜಮೀನಿಗೆ ಅಷ್ಟೊಂದು ಬೆಲೆ ಇದ್ದರೇ ಇಂದು ಪಾಪ ಮೂಲ ಜಮೀನಿನ ಮಾಲೀಕ ಸೋರುವ ಮನೆಯಲ್ಲಿ ಏಕೆ ವಾಸ ಮಾಡುತ್ತಿದ್ದರು ಉತ್ತರ ನೀಡಬಲ್ಲಿರಾ ಮುಖ್ಯಮಂತ್ರಿಗಳೇ? ಎಂದು ಕೇಳಿದೆ.
ಮುಖ್ಯಮಂತ್ರಿಯಾಗಿ ವಾಲ್ಮೀಕಿ ನಿಗಮದ ಹಗರಣ ನಮಗೆ ಸಂಬಂಧವೇ ಇಲ್ಲ ಎಂದು ಭಂಡತನದ ವಾದ ಮಾಡುವ ನಿಮಗೆ, ನಿಮ್ಮದೆ ಭ್ರಷ್ಟಾಚಾರದ ಬಗ್ಗೆ ತಪ್ಪಿಸಿಕೊಳ್ಳಲು ದಾಖಲೆ ಬಿಡುಗಡೆ ಮಾಡಿದ RTI ಕಾರ್ಯಕರ್ತನ ಮೇಲೆ ವಾಮಮಾರ್ಗವನ್ನು ಹಿಡಿದಿರುವುದಾದರೂ ಏಕೆ? ಎಂದಿದೆ.
ಉತ್ತರ ಕೊಡಿ ಅದಕ್ಕೂ ಮೊದಲು ರಾಜೀನಾಮೆ ಕೊಡಿ!!! ಎಂದು ಒತ್ತಾಯಿಸಿದೆ.




