ಸಭೆ – ಸಮಾರಂಭಗಳ ಗೌರವ ಕಾಪಾಡಬೇಕಲ್ಲವೇ?

2 years ago

ಸರ್ಕಾರಿ ಕಾರ್ಯಕ್ರಮಗಳು ಅಗಲಿ. ಸಂಘಟನೆ ಕಾರ್ಯಕ್ರಮಗಳು ಅಗಲಿ. ರಾಜಕೀಯ ಸಭೆ – ಸಮಾರಂಭಗಳು ನಡೆಸುವ ಸಂಧರ್ಭದಲ್ಲಿ ಈ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿರುವರು ಸಭೆಯ ಮುನ್ನ ವೇದಿಕೆಗಳಿಗೆ ಆಹ್ವಾನ ನೀಡುವರೆಗೂ ಪ್ರತಿಯೊಬ್ಬರು ವೇದಿಕೆ ಮುಂದಿನ ಆಸನಗಳಲ್ಲಿ ಕುಳಿತುಕೊಳ್ಳವುದು ಒಳ್ಳೆಯ ಸಂಪ್ರಾದಾಯ ಆಗುತ್ತದೆ.

ಆದರೆ ಹೆಚ್ಚಾಗಿ ಮುಖ್ಯ ಅತಿಥಿಗಳು / ಅಧ್ಯಕ್ಷತೆ ವಹಿಸುವವರು ಜೊತೆಯಲ್ಲಿಯೆ ವೇದಿಕೆಗೆ ಕರೆಯುವ ಮುನ್ನವೆ ಎಲ್ಲರೂ ಹೋಗಿ ವೇದಿಕೆಗಳ ಮೇಲೆ ಆಸೀನರಾದರೆ ಆಯೋಜಕರು ನಡೆಸುವ ಸಭೆಯ ಪ್ರಾಮುಖ್ಯತೆಯೆ ಕಳೆದುಕೊಳ್ಳವ ಸಾಧ್ಯತೆ ಇರುತ್ತದೆ.

ಯಾರೇ ಆಗಲಿ ಮೊದಲು ಆಯೋಜಕರು ವೇದಿಕೆಗೆ ಯಾರನ್ನು ಕರೆಯುತ್ತಾರೋ ಅವರು ವೇದಿಕೆಗೆ ಹತ್ತಿದರೆ ಆಯೋಜಕರಿಗೆ ಕಾರ್ಯಕ್ರಮ ನಡೆಸಲು ಸಾಧ್ಯವಾಗುತ್ತದೆ. ಆಯೋಜಕರು ಮುಖ್ಯವಾಗಿ ಯಾರನ್ನು ಕರೆಯಬೇಕು ನಂತರ ಇವರನ್ನು ಕರೆಯಲು ಸಾಧ್ಯವಾಗುತ್ತದೆ. ಕರೆಯದೆ ಇರುವರೆಲ್ಲರೂ ಎಲ್ಲರೂ ವೇದಿಕೆ ಮೇಲೆ ಹೋದರೆ ಆಯೋಜಕರಿಗೆ ಮುಜುಗರ ಆಗುವ ಸಾಧ್ಯತೆ ಇರುತ್ತದೆ.

ಕಾರಣ ಸಭೆ – ಸಮಾರಂಭ ನಡೆಸಲು ಪ್ರತ್ಯಕ್ಷವಾಗಿ -ಪರೋಕ್ಷವಾಗಿ ಸಹಕಾರ ನೀಡಿದವರಿಗೆ ವೇದಿಕೆಯಲ್ಲಿ ಸ್ಥಾನ ನೀಡಬೇಕಾಗುತ್ತದೆ. ಇಂತ ಸಂದರ್ಭದಲ್ಲಿ ಆಯೋಜಕರು ಪೇಚಿಗೆ ಸಿಲುಕಲು ಕಾರಣವಾಗುತ್ತದೆ. ಇಲ್ಲಿ ಏನಾಗಿದೆ ಎಂದರೆ ಸಭೆ – ಸಮಾರಂಭಕ್ಕೆ ಮುಖ್ಯ ಆಹ್ವಾನಿತರನ್ನು ವೇದಿಕೆಗೆ ಆಯೋಜಕರು ಆಹ್ವಾನ ನೀಡಿದ ಸಂಧರ್ಭದಲ್ಲಿ ಆಹ್ವಾನಿತರ ಬೆಂಬಲಿಗರು ಹೋಗಿ ಆಸನಗಳನ್ನು ಭರ್ತಿ ಮಾಡಿದರೆ ಸಭೆಗೆ ಗೌರವ ಬರಲು ಸಾಧ್ಯವೇ? ಸಭೆಯ ಘನತೆಗೆ ಪೆಟ್ಟಾಗುತ್ತದೆ ಎಂಬುದನ್ನು ಅರಿಯಬೇಕಾಗುತ್ತದೆ.

ಯಾರೇ ಆಗಲಿ ವೇದಿಕೆ ಮೇಲೆ ತಮಗೆ ಆಹ್ವಾನವಿಲ್ಲದಿದರೂ ಹೋಗಿ ಕುಳಿತುಕೊಂಡ ತಕ್ಷಣ ನಮಗೆ ಗೌರವ ಬರುತ್ತದೆ ಎಂದು ಅರ್ಥ ಮಾಡಿಕೊಳ್ಳಬಾರದು. ಆಯೋಜಕರು ಯಾರಿಗೆ ಆಹ್ವಾನ ನೀಡಿರುತ್ತಾರೋ ಹಾಗೂ ಆಹ್ವಾನಿಸುತ್ತಾರೊ ಅವರು ವೇದಿಕೆಗೆ ಹೋಗುವುದು ಗೌರವ ತರುವಂತಹದು. ಇಲ್ಲದಿದ್ದರೆ ಸಾಂಧರ್ಬಿಕವಾಗಿ ಸಭೆ – ಸಮಾರಂಭಗಳಿಗೆ ಹೆಚ್ಚಿನ ತೊಂದರೆ ಆಗುವ ಸಾಧ್ಯತೆ ಇರುತ್ತದೆ. ಈ ಸಭೆಗೆ ಹೆಚ್ಚಿನ ಶ್ರಮ ವಹಿಸಿದವರಿಗೂ ವೇದಿಕೆಯಲ್ಲಿ ಸ್ಥಾನ ಇಲ್ಲದೆ ಹೋದಾಗ ಸಭೆ – ಸಮಾರಂಭ ಆಯೋಜನೆ ಮಾಡಿರುವರ ಮಧ್ಯ ಗೊಂದಲ ಮನಸ್ತಾಪ ಆಗಲು ಕಾರಣವಾಗುತ್ತದೆ ಎಂಬುದನ್ನು ಅರಿಯಬೇಕು. ಕೆಲವು ಕಾರ್ಯಕ್ರಮದಲ್ಲಿ ಆಯೋಜಕರು ಧ್ವನಿವರ್ಧಕದಲ್ಲಿ ವೇದಿಕೆ ಮೇಲೆ ಇರುವ ಕೆಲವರನ್ನು (ಆಹ್ವಾನ ಇಲ್ಲದವರನ್ನು) ಕೆಳಗೆ ಇಳಿಯಲು ಮನವಿ ಮಾಡಿಕೊಳ್ಳವುದು ಅಭಾಸ ಅಲ್ಲವೆ? ಇದು ಸಭೆ – ಸಮಾರಂಭಗಳಿಗೆ ಶೋಭೆ ತರುವುದಿಲ್ಲ. ವೇದಿಕೆಗೆ ಹೋದರೆ ಮಾತ್ರ ನಮಗೆ ಗೌರವ – ಮರ್ಯಾದೆ ಬರುತ್ತದೆ ಎಂಬುದು ಭ್ರಮೆ . ಈ ರೀತಿಯ ಅಭ್ಯಾಸ ಚಟ ಆಗಬಾರದು ಅಲ್ಲವೇ? ಏನಂತೀರಿ?

  • ಎನ್.ಎಸ್.ಈಶ್ವರಪ್ರಸಾದ್, ನೇರಳೇಕೆರೆ. ಮಧುಗಿರಿ ತಾಲ್ಲೂಕ್

Leave a Reply