ಕನ್ನಡ ಸಾಹಿತ್ಯ ಕ್ಷೇತ್ರದ ಶನಿಗಳು

3 years ago

#Shanis #Kannada #literary #field #jagadishkoppa

ಕನ್ನಡ ಸಾಹಿತ್ಯ ಲೋಕದ ಮಹಾನ್ ಕಾದಂಬರಿಕಾರ ಅಥವಾ ಮಹಾನ್ ಕವಿ ಎಂದು ಹೊಗಳಿಸಿಕೊಳ್ಳುತ್ತಿರುವ ಕೆಲವು  ಮನುಷ್ಯ ಪ್ರಾಣಿಗಳು ಎಂತಹ ವಿಷ ಜಂತುಗಳು ಎಂಬುದು ಇತ್ತೀಚೆಗೆ ಸಾಮಾಜಿಕ ತಾಣಗಳು ಅಸ್ತಿತ್ವಕ್ಕೆ ಬಂದ ನಂತರ ಅರಿವಾಯಿತು.

ನೀವು ಈಗಾಗಲೇ ಫೇಸ್ಬುಕ್ ನಲ್ಲಿರುವ ಇಂತಹ ಮುಖವಾಡದ ಗಿರಾಕಿಗಳ ಗೋಡೆಯನ್ನು ಒಮ್ಮೆ ಕೂಲಂಕುಶವಾಗಿ ಅವಲೋಕಿಸಿದರೆ ಇವರುಗಳು ತಮ್ಮ ಜೀವನ ಪೂರ್ತಿ ಪ್ಯಾಂಟ್ ಮತ್ತು ಪಂಚೆಯೊಳಕ್ಕೆ ಧರಿಸಿರುವುದು ನಾಗಪುರದ ಕಾಕಿ ಚೆಡ್ಡಿ ಎಂಬುದು ಮನದಟ್ಟಾಗುತ್ತದೆ. ನಾನು ಇವರೆಲ್ಲರನ್ನೂ ಗೆಳೆಯರ ಪಟ್ಟಿಯಿಂದ ಕಿತ್ತು ಬಿಸಾಡಿದೆ.

ಸದಾ ಅಲ್ಲಮ, ಬಸವಣ್ಣ, ಕುವೆಂಪು. ಬುದ್ಧ  ಮುಂತಾದವರ ಬಗ್ಗೆ ವೇದಿಕೆಗಳಲ್ಲಿ ಭಾಷಣ ಬಿಗಿಯುತ್ತಾ, ಒಳಗೊಳಗೆ ಲಂಕೇಶ್, ಚಂಪಾ, ಗಿರೀಶ್ ಕಾರ್ನಾಡ್, ಅನಂತಮೂರ್ತಿಯವರಂತಹವರನ್ನು ತೆಗಳುವ ಹಲಾಲುಕೋರರ ಪೋಸ್ಟ್ ಗಳನ್ನು ಹಂಚಿಕೊಳ್ಳುವ ನೀಚ ಮನಸ್ಥಿತಿಯ  ಸಾಹಿತಿಗಳೆಂಬ ಈ ವಿದೂಷಕರನ್ನು ಕಳೆದ ಐವತ್ತು ವರ್ಷಗಳಿಂದ  ನಾನು ಓದದೆ ದೂರವಿರಿಸಿದ  ನಿರ್ಧಾರದ ಬಗ್ಗೆ ಈಗ ಹೆಮ್ಮೆ  ಎನಿಸಿದೆ.

ಓರ್ವ ಲೇಖಕನಾಗಿ ಅಲ್ಲದಿದ್ದರೂ ಸಹ ಒಬ್ಬ  ಪ್ರಬುದ್ಧ ಓದುಗನಾಗಿ ಇವರುಗಳು ಭಾಗವಹಿಸುವ ಸಭೆ ಅಥವಾ ಇವರ ಜೊತೆ ವೇದಿಕೆ ಹಂಚಿಕೊಳ್ಳುವುದು ನನ್ನ ಬೌದ್ಧಿಕ ಪ್ರಜ್ಞಗೆ ಅವಮಾನ ಎಂದು ನಿರ್ಧರಿಸಿದ್ದೀನಿ.

ನನ್ನ ತಲೆಮಾರಿಗಿಂತ ಹತ್ತು ವರ್ಷ ಹಿರಿಯರಾದ ಈ ಅಯೋಗ್ಯರಿಗೆ ಅಸಮಾನತೆ ಮತ್ತು ಜಾತಿಯತೆಯನ್ನು ಉಸಿರಾಡುವ ಬ್ರಾಹ್ಮಣ್ಯವೆಂದರೆ ಪಂಚ ಪ್ರಾಣವಾಗಿದೆ.

ಸಾರ್ವಜನಿಕ ಚರ್ಚೆಗೆ ತೆರೆದುಕೊಳ್ಳದೆ, ತರಾತುರಿಯಲ್ಲಿ ದೇಶಾದ್ಯಂತ ಜಾರಿಗೆ ತರಲು ಹೊರಟಿರುವ ಸಮಾನ ನಾಗರೀಕ ಮಸೂದೆ ಕುರಿತಾದ ಹೇಳಿಕೆಯನ್ನು ತಮ್ಮ ಗೋಡೆಗಲ್ಲಿ ಹಂಚಿಕೊಳ್ಳುತ್ತಿರುವ ಈ ತಲೆಮಾಸಿದ ಗಿರಾಕಿಗಳಿಗೆ ಕ್ಯಾಕರಿಸಿ ಉಗಿದರೂ ಸಹ ನಮ್ಮ ಎಂಜಲು ವೇಸ್ಟ್ ಆಗಿಬಿಡುತ್ತದೆ.

ಲಂಕೇಶ್, ಅನಂತಮೂರ್ತಿಯಂತಹ ಲೇಖಕರು ಮನುಷ್ಯರಾಗಿ ಹಲವು ದೌರ್ಬಲ್ಯಗಳನ್ನು ಹೊಂದಿದ್ದರು. ಆದರೆ, ಒಂದು ಆರೋಗ್ಯಕರ ಸಮಾಜಕ್ಕಾಗಿ ಸದಾ ತುಡಿಯುತ್ತಿದ್ದರು. ಅವರ ನಡೆ ಮತ್ತು ನುಡಿಯಲ್ಲಿ  ಇವರಂತೆ ಕಾಣಲಾರದ ವಿಷ ಇರಲಿಲ್ಲ. ಸ್ಪಷ್ಟತೆ ಮತ್ತು ನಿಖರತೆ ಇತ್ತು.

ಈಗ ಕೆಲವು ಅರಬೆಂದ ಮಡಕೆಗಳು ಹೂವಿನ ಜೊತೆ ನಾರು ಸಹ ಸ್ವರ್ಗ ಸೇರಿತು ಎಂಬ ಗಾದೆಯಂತೆ ನಾನು ಓದಿದ ಅಥವಾ ಕನ್ನಡದ ಮಹಾನ್ ಕಾದಂಬರಿ ಅಥವಾ ಕಾವ್ಯ ಎಂದು ಈ ವಿಷಜಂತುಗಳ ಹೆಸರು ಬರೆದುಕೊಂಡು ಅದನ್ನು ಅವರ ಗೋಡೆಗೆ ಲಗತ್ತಿಸಿ, ಅವರ ಕೃಪಾಕಟಾಕ್ಷಕ್ಕಾಗಿ ಹಾತೊರೆಯುತ್ತಿವೆ. ಇದು ಅವರ ಹೇಸಿಗೆಯನ್ನು ಮುಖಕ್ಕೆ ಬಳಿದುಕೊಂಡು ಸಂಭ್ರಮಿಸುವ ಪರಿ ಅಲ್ಲದೆ ಬೇರೇನೂ ಅಲ್ಲ.

ಆಲನಹಳ್ಳಿ, ಡಾ.ರಾಮಣ್ಣ, ತೇಜಸ್ವಿ, ಲಂಕೇಶ್, ಇಂತಹವರಿಗೆ ಬಲು ಬೇಗ ಸಾವು ಅಪ್ಪಳಿಸಿತು. ಎಪ್ಪತ್ತೈದು ದಾಟಿರುವ ಈ ಕನ್ನಡ ಸಾಹಿತ್ಯದ ಶನಿಗಳಿಗೆ ಇನ್ನೂ ಸಾವು ಬರಲಿಲ್ಲ ಏಕೆ? ಇದು ನನ್ನಂತಹವರ ದಿನ ನಿತ್ಯದ ಪ್ರಶ್ನೆಯಾಗಿದೆ.

ಕೆಲವು ಶನಿಗಳು ಐದಾರು ವರ್ಷ ಕಳೆದರೂ ಸಹ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಗಳ ಅಧ್ಯಕ್ಷ ಸ್ಥಾನಕ್ಕೆ ಅಂಟಿಕೊಂಡು ಕೂತಿವೆ. ಅಲ್ಲಿ ಸಿಗುವ ಟಿ.ಎ. ಡಿ.ಎ. ಕಾಸಿಗೆ  ಬದುಕಿರುವ ಇವುಗಳು ಸಾವಿನೊಂದಿಗೆ ತಮ್ಮ ಸ್ಥಾನ ತ್ಯಜಿಸಲು ನಿರ್ಧರಿಸಿದಂತೆ ಕಾಣುತ್ತದೆ.

– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು

Leave a Reply