ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಇವರ ಸೇವೆಯನ್ನು ಮತ್ತು ತ್ಯಾಗವನ್ನು ನೆನೆಯಬೇಕು
ಪ್ರಕೃತಿ ಮಾತೆಯೇ ಹೆಣ್ಣೆಂದು ಭಾವಿಸಿರುವ ನಾವು ಪ್ರಕೃತಿಯನ್ನ ಪ್ರೀತಿಸುವುದರ ಮೂಲಕ ತಾಯಿತನಕ್ಕೆ ನಮನವನ್ನು ಅರ್ಪಿಸಬೇಕು
ನಮ್ಮ ಹೆತ್ತು ಹೊತ್ತು ಬದುಕು ನೀಡುವ ತಾಯಿಗೆ ನಮನವನ್ನು ಸಲ್ಲಿಸಬೇಕು
ಆಸ್ಪತ್ರೆಗಳಲ್ಲಿ ಯಾರದೋ ಮನೆಯ ರೋಗಿಗಳಿಗೆ ಮಲಮೂತ್ರಗಳನ್ನು ಎತ್ತಿ ಶುಚಿಗೊಳಿಸುವ ಆ ಪವಿತ್ರ ತಾಯಂದಿರಿಗೆ ನಮ್ಮ ನಮನವನ್ನು ಸಲ್ಲಿಸಬೇಕು
ನರ್ಸ್ಗಳಾಗಿ ಸೇವೆಯನ್ನ ಮಾಡುತ್ತಾ ಹಗಲು ರಾತ್ರಿ ಎನ್ನದೆ ದುಡಿಯುವ ಆ ಮಾತೆಯರಿಗೆ ನಮ್ಮ ನಮಸ್ಕಾರವನ್ನು ಹೇಳಬೇಕು
ರಸ್ತೆ ರಸ್ತೆಯ ಮೇಲೆ ಬಿದ್ದ ಕಸಗಳನ್ನ ತಿಳಿಯುತ್ತ ಶುಚಿಗೊಳಿಸುತ್ತಾ ದುಡಿಯುವ ಆ ಮಹಿಳೆಯರಿಗೆ ನಮ್ಮ ನಮನವನ್ನ ಹೇಳಬೇಕು
ಹೊಲಗದ್ದೆಗಳಲ್ಲಿ ಹಗಲು ರಾತ್ರಿ ಎನ್ನದೆ ಪುರುಷರಿಗೆ ಸಮಾನಾಗಿ ದುಡಿಯುವ ಆ ಮಹಿಳೆಯರಿಗೆ ನಮ್ಮ ನಮನವನ್ನು ಹೇಳಬೇಕು
ಮಹಿಳೆಗೆ ಪ್ರಥಮ ಬಾರಿಗೆ ವಿದ್ಯೆಯನ್ನ ಹೇಳಿಕೊಟ್ಟ ಸಾವಿತ್ರಿ ಪುಲೆ ರವರಿಗೆ ನಮ್ಮ ನಮನವನ್ನು ಹೇಳಬೇಕು
ಅನುಭವ ಮಂಟಪದಲ್ಲಿ ಪುರುಷರಿಗೆ ಸರಿ ಸರಿ ಸಮಾನವಾಗಿ ವಾದವನ್ನು ಮಾಡಿ ವಚನಗಳನ್ನ ಬರೆದ ಅಕ್ಕ ಮಹಾದೇವಿಗೆ ನಮ್ಮ ನಮನಗಳನ್ನು ಸಲ್ಲಿಸಬೇಕು
ಪತಿಯ ಶವದೊಂದಿಗೆ ಪತ್ನಿಯನ್ನ ಜೀವಂತವಾಗಿ ಸುಡುವ ಹೀನ ಪದ್ದತಿಯ ವಿರುದ್ಧ ಹೋರಾಟವನ್ನು ಮಾಡಿದ ಸತಿ ಸಹಗಮನ ಪದ್ಧತಿಯ ವಿರುದ್ಧ ಸೆಟೆದು ನಿಂತ ರಾಜಾರಾಮ ಮೋಹನರಾಯರಿಗೆ ನಮ್ಮ ನಮನವನ್ನ ಸಲ್ಲಿಸಬೇಕು
ಸಂವಿಧಾನದ ಮೂಲಕ ಪ್ರಥಮ ಬಾರಿಗೆ ಪ್ರಥಮ ಚುನಾವಣೆಯಲ್ಲಿಯೇ ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಿ ಮಹಿಳೆಯರ ರಕ್ಷಣೆಗಾಗಿ ಬಲವಾದ ಕಾನೂನನ್ನು ರೂಪಿಸಿಕೊಟ್ಟ ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರಿಗೆ ನಮ್ಮ ನಮನವನ್ನು ಸಲ್ಲಿಸಬೇಕು
ಚುನಾವಣೆಗಳಲ್ಲಿ ಮಹಿಳೆಯರಿಗೂ ಎಲ್ಲಾ ಹಂತದಲ್ಲಿ ಮೀಸಲಾತಿಯನ್ನ ಕೊಡುವ ಸಲುವಾಗಿ ವಿಧಾನಸಭೆ ಮತ್ತು ಲೋಕಸಭೆಗಳಲ್ಲಿ ಮಹಿಳೆಯರ ಪರವಾಗಿ ಧ್ವನಿ ತೆಗೆದ ಎಲ್ಲ ಹೋರಾಟಗಾರ್ತಿಯರಿಗೆ ನಮ್ಮ ನಮನವನ್ನು ಸಲ್ಲಿಸಬೇಕು
ಮಹಿಳೆಯರ ಮೇಲಿನ ದಬ್ಬಾಳಿಕೆ, ದೌರ್ಜನ್ಯ, ಅನ್ಯಾಯದ ವಿರುದ್ಧ ದೇಶದಾದ್ಯಂತ ಸಂಘಟನೆಗಳನ್ನ ಕಟ್ಟಿಕೊಂಡು ಪರೋಕ್ಷವಾಗಿ ಮತ್ತು ಪ್ರತ್ಯಕ್ಷವಾಗಿ ಹೋರಾಟ ನಡೆಸುತ್ತಿರುವ ಎಲ್ಲ ಮಹಿಳೆಯರ ದನಿಗಳಿಗೆ ನಮ್ಮ ನಮನವನ್ನು ಸಲ್ಲಿಸಬೇಕು
ಸಾಹಿತ್ಯ ಸಂಸ್ಕೃತಿ ಮತ್ತು ಕಲೆ ಸಂಗೀತ ಎಲ್ಲ ಕ್ಷೇತ್ರದಲ್ಲಿ ಸಾಧನೆಯನ್ನ ಮಾಡಿ ಮಹಿಳೆಯರ ಅಸ್ತಿತ್ವವನ್ನು ಎತ್ತಿ ಹಿಡಿಯುತ್ತಿರುವ ತಮ್ಮ ಸಾಧನೆಗಳ ಮೂಲಕ ಜಗದ ಗಮನವನ್ನು ಸೆಳೆಗಿರುವ ಎಲ್ಲ ಸಾಧಕೀಯರಿಗೆ ನಮ್ಮ ನಮನವನ್ನು ಸಲ್ಲಿಸಬೇಕು
– ಕೆಎಸ್ ನಾಗರಾಜ್, ಬೆಂಗಳೂರು




