ಟೆಲಿ ಲಾ ಯೋಜನೆಯಿಂದ ಸಾಮಾನ್ಯ ಜನರಿಗೆ ಕಾನೂನಿನ ಸೌಲಭ್ಯ

2 years ago


ಬೆಂಗಳೂರು: ಟೆಲಿ ಲಾ ಯೋಜನೆಯಿಂದ ಸಾಮಾನ್ಯ ಜನ ಕಾನೂನಿನ ಸೌಲಭ್ಯ ಪಡೆಯುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಉಪಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್ ಹೇಳಿದರು.

ಯಲಹಂಕದ ಅಂಬೇಡ್ಕರ್ ಭವನದಲ್ಲಿ ನಡೆದ “ಹಮಾರಾ ಸಂವಿಧಾನ್ ಹಮಾರಾ ಸಮ್ಮಾನ್!” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾಡಿದ ಅವರು, ಈ ಯೋಜನೆ ಇನ್ನೂ ಹೆಚ್ಚು ಗ್ರಾಮೀಣ ಜನರೆಗೆ ತಲುಪಬೇಕು ಎಂದು ಅಭಿಪ್ರಾಯಪಟ್ಟರು.

ಕೇಂದ್ರ ಸರ್ಕಾರದ ಕಾನೂನು ಇಲಾಖೆ ಮತ್ತು ಸಿಎಸ್ ಸಿ ಇ ಗೌರ್ನೆಸ್ ಸಾಮಾನ್ಯ ಸೇವಾ ಕೇಂದ್ರ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು, ನ್ಯಾಯಾಧೀಶ ಮತ್ತು ಕೆಎಸ್‌ಎಲ್‌ಎಸ್‌ಎ ಸಾರ್ವಜನಿಕ ಸಂಪರ್ಕ ಅಧಿಕಾರಿ ಪಿ.ಎಂ. ಬಾಲಸುಬ್ರಮಣಿ, ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಸಾರ್ವಜನಿಕರು ಕಾನೂನು ಅರಿವು ಕೇಂದ್ರಗಳು ಆಗಿ ಕೆಲಸ ಮಾಡಬೇಕು ಮಕ್ಕಳ ಮೇಲೆ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ, ಬಾಲ ಕಾರ್ಮಿಕರ ರಕ್ಷಣೆಯ ಕಾನೂನುಗಳನ್ನು ಜನರಿಗೆ ತಿಳಿಸಬೇಕು ಎಂದು ಹೇಳಿದರು.

ಸಾಮಾನ್ಯ ಸೇವಾ ಕೇಂದ್ರದ ಕರ್ನಾಟಕ ರಾಜ್ಯ ಮುಖ್ಯಸ್ಥ ಶಕೀಬ್ ಅಹಮದ್ ಮಾತಾನಾಡಿ, ಜನರಿಗೆ ಹಳ್ಳಿಗಳಲ್ಲಿ ಕಾನೂನು ಅರಿವು ಮೂಡಿಸಲು ನಾವು ಸಿದ್ದರಿದ್ದೇವೆ. ಜನ ನಮ್ಮ ಕೇಂದ್ರಗಳಿಗೆ ಬಂದು ಕಾನೂನು ತಿಳಿದುಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದ ಪ್ರಾಯೋಜಕರು ಸ್ಥಾಪಿಸಿದ ಸ್ಟಾಲ್‌ಗಳನ್ನು ವಿದ್ಯುಕ್ತವಾಗಿ ರಿಬ್ಬನ್ ಕತ್ತರಿಸುವುದರೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.

ನ್ಯಾಯ್ ಸೇತು: ಏಕೀಕೃತ ಕಾನೂನು ಇಂಟರ್ಫೇಸ್ ಆಗಿ ಪರಿಚಯಿಸಲಾಗಿದೆ, ನ್ಯಾಯ್ ಸೇತು ಕಾನೂನು ಮಾಹಿತಿ, ಸಲಹೆ ಮತ್ತು ಸಹಾಯಕ್ಕೆ ಸಮಗ್ರ ಪ್ರವೇಶವನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಕರ್ನಾಟಕ ಬುಕ್‌ಲೆಟ್: ಟೆಲಿ-ಕಾನೂನೀನಲ್ಲಿ ರಾಜ್ಯದ ಸಾಧನೆಗಳನ್ನು ಎತ್ತಿ ತೋರಿಸುವ ಪ್ರಕಟಣೆ, ಸಾಧಕರ ವಿವರಗಳನ್ನು ಮತ್ತು ಸಾರ್ವಜನಿಕರಿಗೆ ಪ್ರವೇಶಿಸಬಹುದಾದ ಸರ್ಕಾರಿ ಯೋಜನೆಗಳನ್ನು ಒಳಗೊಂಡಿದೆ.

ಫಲಾನುಭವಿಗಳ ಧ್ವನಿ: ಫಲಾನುಭವಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಈ ಉಪಕ್ರಮವು ಟೆಲಿ-ಕಾನೂನು ಕಾನೂನು ಸಮಾಲೋಚನೆಗಳು ಅವರ ಸಮಸ್ಯೆಗಳನ್ನು ಹೇಗೆ ಪರಿಹರಿಸಿದೆ ಎಂಬುದನ್ನು ತೋರಿಸುತ್ತದೆ.

ಕಾರ್ಯಕ್ರಮದಲ್ಲಿ ವಕೀಲರಾದ ಪುರುಷೋತ್ತಮ ಎ , ರಾಜು, ನಿರ್ಮಲ, ಕೋಕಿಲಾ, ಚಾಂದಿನಿ, ರವರಿಗೆ ಉತ್ತಮ ವಕೀಲ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಜ್ಯದ ಹಲವು ಕಾನೂನು ಕಾಲೇಜಿನ ವಿದ್ಯಾರ್ಥಿಗಳು, ಸಾಮಾನ್ಯ ಸೇವಾ ಕೇಂದ್ರದ ಪ್ರತಿನಿಧಿಗಳು, ನೀಲೇಶ್, ದಿನಕರ್, ನಜೇಮ್, ಶೈಲೇಂದ್ರ, ಸುಮಾ, ಮಲ್ಟಿಮೀಡಿಯಾ ಚಂದ್ರು ಮಲ್ಲಿಕಾರ್ಜುನ್, ಯಶೋಧ ಭಾಗವಹಿಸಿದ್ದರು.

Leave a Reply