ಶಿವಮೊಗ್ಗ: ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಕ್ರೀಡಾ ಶಾಲೆ/ನಿಲಯದ 2024-25ನೇ ಶೈಕ್ಷಣಿಕ ಸಾಲಿಗಾಗಿ ಕುಸ್ತಿ ಮತ್ತು ಹಾಕಿ ಕ್ರೀಡಾಪಟುಗಳ ಆಯ್ಕೆಯನ್ನು ಜೂ.12 ರಂದು ಬೆಳಗ್ಗೆ 10.00 ರಿಂದ ನಗರದ ನೆಹರು ಕ್ರೀಡಾಂಗಣದಲ್ಲಿ ಏರ್ಪಡಿಸಿದೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಈ ಆಯ್ಕೆಯಲ್ಲಿ ಹಾಕಿ (ಬಾಲಕ/ಬಾಲಕಿಯರಿಗೆ- ಬಾಲಕರ ಎತ್ತರ 142 ಸೆಂ.ಮೀ. ಮತ್ತು ಬಾಲಕಿಯರ ಎತ್ತರ 140 ಸೆಂ.ಮೀ.) ಹಾಗೂ ಕುಸ್ತಿ (ಬಾಲಕರಿಗೆ -30 ಕೆ.ಜಿ.ತೂಕ) ವಿಭಾಗದಲ್ಲಿ ಆಯ್ಕೆಗಾಗಿ ಪಾಲ್ಗೊಳ್ಳಬಹುದಾಗಿದ್ದು, ಭಾಗವಹಿಸುವ ಬಾಲಕ/ಬಾಲಿಕಿಯರು ಜೂನ್ 01ಕ್ಕೆ 11 ವರ್ಷ ಮೀರಿರಬಾರದು ಮತ್ತು 5ನೇ ತರಗತಿಗೆ ಸೇರಲು ಅರ್ಹತೆಪಡೆದಿರಬೇಕು.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,ಮೊ.ಸಂ.: 9008949847 ಹಾಗೂ ಬಾಳಪ್ಪ ಮಾನೆ ಅಥ್ಲೇಟಿಕ್ ತರಬೇತುದಾರರು ಮೊ. 9880653266 ಇವರುಗಳನ್ನು ಸಂಪರ್ಕಿಸುವಂತೆ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.




