ಸವದತ್ತಿ ಎಲ್ಲಮ್ಮ ದೇವಾಲಯದ ಅಭಿವೃದ್ಧಿಗೆ ನಾಂದಿ ಹಾಡಿರುವ ಸಚಿವರಿಗೆ ಅಭಿನಂದಿಸಲೇಬೇಕು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಗೆ ಸೇರಿದ ಸವದತ್ತಿ ಎಲ್ಲಮ್ಮ ದೇವಾಲಯ 1514ರಲ್ಲಿ ಬೋಪಣ್ಣ ನಾಯಕ ಎಂಬುವವರಿಂದ ಸ್ಥಾಪನೆಯಾಗಿರುತ್ತದೆ. ಇದು ಚಾಲುಕ್ಯರ ಮತ್ತು ಹೊಯ್ಸಳರ ಶೈಲಿಯಲ್ಲಿ ನಿರ್ಮಾಣವಾಗಿರುವ ದೇವಾಲಯ.
ಇಲ್ಲಿ ಮಲ್ಲಿಕಾರ್ಜುನ, ಗಣೇಶ, ಪರಶುರಾಮ ದೇವಾಲಯಗಳು ಇವೆ. ಕರ್ನಾಟಕ ರಾಜ್ಯವು ಸೇರಿದಂತೆ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ಹೀಗೆ ಅನೇಕ ಭಾಗಗಳಿಂದ ಪ್ರತಿದಿನವೂ ಸಹಸ್ರಾರು ಸಂಖ್ಯೆಯಲ್ಲಿ ದೇವಿಯ ದರ್ಶನಕ್ಕೆ ಬರುತ್ತಾರೆ.
ಈ ದೇವಸ್ಥಾನದ ಅಭಿವೃದ್ಧಿಯ ವಿಚಾರದಲ್ಲಿ ಇಲ್ಲಿಯವರೆಗೂ ಯಾರು ಸಹ ಹೆಚ್ಚಿನ ಆಸಕ್ತಿಯನ್ನು ಹೊಂದಿರದ ಕಾರಣದಿಂದ ಮೂಲಭೂತ ಸೌಕರ್ಯ ಮತ್ತು ಸೌಲಭ್ಯಗಳು ಇಲ್ಲಿ ಕನಸಿನ ಮಾತಾಗಿದೆ. ಮಣ್ಣಿನ ರಸ್ತೆಗಳು ಸಮರ್ಪಕವಾಗಿಲ್ಲ, ಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ಸಮಸ್ಯೆ. ಭಕ್ತಾದಿಗಳಿಗೆ ಉಳಿದುಕೊಳ್ಳಲು ಸರಿಯಾದಂತಹ ಕೊಠಡಿಗಳು ಇಲ್ಲ. ಜೊತೆಗೆ ಯಾವುದೇ ಅನುಕೂಲತೆಯು ಇಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಬರುವುದರಿಂದ ಸಮಸ್ಯೆಗಳಂತೂ ಸಾಕಷ್ಟು ಪ್ರಮಾಣದಲ್ಲಿದೆ.
ಇಂತಹ ಒಂದು ಹಿಂದುಳಿದ ವರ್ಗದವರು ಮತ್ತು ದಲಿತರು ಹಾಗೂ ಶೋಷಿತ ಸಮಾಜದ ಜನರು ಆರಾಧಿಸುವ ದೇವಿಯ ದೇವಾಲಯದಲ್ಲಿ ಅಭಿವೃದ್ಧಿ ವಿಚಾರದಲ್ಲಿ ಮೊದಲ ಬಾರಿ ರಾಮಲಿಂಗ ರೆಡ್ಡಿರವರು ಆಸಕ್ತಿಯನ್ನು ವಹಿಸಿ ಇದಕ್ಕೆ ಪ್ರಾಧಿಕಾರವನ್ನು ರಚಿಸುತ್ತಿರುವುದು ಅತ್ಯಂತ ಸಮಯೋಚಿತವಾಗಿದೆ. ಪ್ರಾಧಿಕಾರದ ಮೂಲಕ ಅಭಿವೃದ್ಧಿಗೆ ಚಾಲನೆಯನ್ನು ನೀಡಲು ಈಗಾಗಲೇ ಯೋಜನೆ ರೂಪಿಸಿರುವುದು ಏಪ್ರಿಲ್ ತಿಂಗಳಿನಿಂದ ಅಭಿವೃದ್ಧಿಯ ಕಾರ್ಯ ಆರಂಭವಾಗುತ್ತದೆ. ಹಲವಾರು ಕೋಟಿ ರೂಪಾಯಿಗಳ ಕಾಮಗಾರಿಗಳಿಗೆ ಚಾಲನೆಯನ್ನು ನೀಡಲು ಸಿದ್ಧತೆಯನ್ನ ನಡೆಸಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮತ್ತು ವಿಶೇಷವಾಗಿ ಮುಜರಾಯಿ ಇಲಾಖೆ ಸಚಿವರಾಗಿರುವ ರಾಮಲಿಂಗಾರೆಡ್ಡಿರವರು ಆಸಕ್ತಿಯನ್ನ ತೋರಿಸಿರುವ ಕಾರಣದಿಂದಾಗಿ ಈಗ ಪ್ರಾಧಿಕಾರವೂ ರಚನೆಯಾಗಿ ಅಭಿವೃದ್ಧಿಯ ಕನಸು ನನಸಾಗುತ್ತಿದೆ.
ಈ ದೇವಾಲಯಕ್ಕೆ ಭೇಟಿ ಕೊಟ್ಟಂತಹ ಸಂದರ್ಭದಲ್ಲಿ ಮಾತ್ರವೇ ಇಲ್ಲಿನ ಅಭಿವೃದ್ಧಿಯ ಅನಿವಾರ್ಯತೆ ಎಷ್ಟಿದೆ ಎಂಬ ಅರಿವಾಗುತ್ತದೆ ಮತ್ತು ಇಲ್ಲಿಯ ತನಕ ಯಾರು ಗಮನವನ್ನು ಹರಿಸದೆ ಇರುವುದಕ್ಕೆ ಬೇಸರವೂ ಆಗುತ್ತದೆ.
ಈ ರೀತಿಯಲ್ಲಿ ಬಹು ಸಂಖ್ಯೆಯ ಜನರು ಆರಾಧಿಸುವ ದೇವಾಲಯಗಳ ಅಭಿವೃದ್ಧಿಗಾಗಿ ಶ್ರದ್ಧೆಯಿಂದ ಮತ್ತು ದೂರದೃಷ್ಟಿತ್ವದ ಯೋಜನೆಗಳೊಂದಿಗೆ ದುಡಿಯುತ್ತಿರುವ ರಾಮಲಿಂಗಾರೆಡ್ಡಿರವರಿಗೆ ಅಭಿನಂದಿಸುವುದರ ಜೊತೆಗೆ ಕೃತಜ್ಞತೆಯನ್ನ ಅರ್ಪಿಸಬೇಕು.
ಐತಿಹಾಸಿಕವಾದ ಮತ್ತು ಜನಪದ ಸಂಸ್ಕೃತಿಯ, ಗ್ರಾಮೀಣ ಸೊಗಡಿನ ಸವದತ್ತಿ ಎಲ್ಲಮ್ಮ ದೇವಾಲಯ ಅಭಿವೃದ್ಧಿಯಾಗುವುದರ ಜೊತೆಗೆ ನಮ್ಮ ಪರಂಪರೆ ಮತ್ತು ಜನಪದ ಸಂಸ್ಕೃತಿಯು ಉಳಿಯುತ್ತದೆ ಎನ್ನುವುದು ಮತ್ತೊಂದು ಸಂತೋಷದ ಸಂಗತಿ.
– ಕೆ ಎಸ್ ನಾಗರಾಜ್, ಬೆಂಗಳೂರು




