ಬೆಂಗಳೂರಿನಲ್ಲಿ ಎಲ್‌ಪಿಜಿ ಹಾಹಾಕಾರ
ಬರಿದಾದ ಆಟೋ ಸ್ಟ್ಯಾಂಡ್‌ಗಳು
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅನಿಲ ಬಿಕ್ಕಟ್ಟು (LPG Crisis) ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದ್ದು, ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಪಶ್ಚಿಮ ಏಷ್ಯಾದ ಯುದ್ಧದ ಕಾರ್ಮೋಡ ಹಾರ್ಮುಜ್ ಜಲಸಂಧಿಯ ಮೇಲೆ ಕವಿದ ಬೆನ್ನಲ್ಲೇ, ಬೆಂಗಳೂರಿನ ಬೀದಿಬದಿಯ ಹೋಟೆಲ್‌ಗಳು ಮತ್ತು ಆಟೋ ಚಾಲಕರು ಬೀದಿಗೆ ಬೀಳುವಂತಾಗಿದೆ.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ಹೋಟೆಲ್‌ಗಳಲ್ಲಿ ಬೋರ್ಡ್ ಪ್ರತ್ಯಕ್ಷ: “ನೋ ಸಾಂಬಾರ್, ಓನ್ಲಿ ಚಟ್ನಿ”
ನಗರದ ಅನೇಕ ಜನಪ್ರಿಯ ಹೋಟೆಲ್‌ಗಳಲ್ಲಿ ಈಗ ವಿಚಿತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆಯಲ್ಲಿ ಶೇ. 80ರಷ್ಟು ಕಡಿತವಾಗಿರುವುದರಿಂದ, ಅಡುಗೆಗೆ ಗ್ಯಾಸ್ ಉಳಿಸಲು ಹೋಟೆಲ್ ಮಾಲೀಕರು ಮೆನುವನ್ನೇ ಕಡಿತಗೊಳಿಸಿದ್ದಾರೆ.
”ಗ್ಯಾಸ್ ಇಲ್ಲದೆ ಸಾಂಬಾರ್ ಕುದಿಸುವುದು ಕಷ್ಟವಾಗಿದೆ. ಆದ್ದರಿಂದ ಕೇವಲ ಚಟ್ನಿ ಮತ್ತು ಇಡ್ಲಿ ಮಾತ್ರ ನೀಡುತ್ತಿದ್ದೇವೆ” ಎಂದು ದಕ್ಷಿಣ ಬೆಂಗಳೂರಿನ ಹೋಟೆಲ್ ಮಾಲೀಕರೊಬ್ಬರು ಅಳಲು ತೋಡಿಕೊಂಡಿದ್ದಾರೆ.
ಅಂಕಿಅಂಶಗಳ ಪ್ರಕಾರ, ಅನಿಲದ ಕೊರತೆಯಿಂದಾಗಿ ಬೆಂಗಳೂರಿನ ಸುಮಾರು ಶೇ. 23ರಷ್ಟು ಸಣ್ಣ ಮತ್ತು ಬೀದಿಬದಿಯ ಹೋಟೆಲ್‌ಗಳು ಈಗಾಗಲೇ ಮುಚ್ಚಲ್ಪಟ್ಟಿವೆ.
ಬರಿದಾದ ಆಟೋ ಎಲ್‌ಪಿಜಿ ಕೇಂದ್ರಗಳು: ಇನ್ನೊಂದೆಡೆ, ಪರಿಸರಸ್ನೇಹಿ ಇಂಧನ ನಂಬಿದ್ದ ಆಟೋ ಚಾಲಕರು ಕಣ್ಣೀರು ಹಾಕುತ್ತಿದ್ದಾರೆ. ನಗರದ ಬಹುತೇಕ ಆಟೋ ಎಲ್‌ಪಿಜಿ (Auto LPG) ಕೇಂದ್ರಗಳಲ್ಲಿ ‘ನೋ ಸ್ಟಾಕ್’ ಬೋರ್ಡ್‌ಗಳು ರಾರಾಜಿಸುತ್ತಿವೆ. ಗ್ಯಾಸ್ ಸಿಗದೆ ಸಾವಿರಾರು ಆಟೋಗಳು ರಸ್ತೆಗೆ ಇಳಿಯದೆ ಶೆಡ್ ಸೇರಿವೆ. ಇದರಿಂದಾಗಿ ಆಟೋ ನಂಬಿ ಜೀವನ ನಡೆಸುವ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.
ಇನ್ನು ನಗರದ ಬಹುತೇಕ ಹೋಟೆಲ್ ಗಳಲ್ಲಿ ಮಧ್ಯಾಹ್ನ ಅನ್ನ ಸಾಂಬಾರ್, ಮುದ್ದೆ ಊಟ ಸಿಗುತ್ತಿಲ್ಲ. ಬದಲಿಗೆ ರೈಸ್ ಬಾತ್ ಮೊರೆ ಹೋಗಿದ್ದಾರೆ. ಇದರಿಂದಾಗಿ ಹೋಟೆಲ್ ಗಳು ಬಿಕೋ ಎನ್ನುತ್ತಿವೆ.




