ಬೆಂಗಳೂರು: ಮಾಜಿ ಶಾಸಕರಾದ ಆರ್ ನಾರಾಯಣ ಹಾಗೂ ಜಯಣ್ಣ ಎಸ್. ಅವರ ನಿಧನಕ್ಕೆ ವಿಧಾನಸಭೆಯಲ್ಲಿ ಸಂತಾಪ ಸೂಚಿಸಲಾಯಿತು.
- ಸರ್ವಜನಾಂಗದ ಶಾಂತಿಯ ತೋಟವೇ ನಮ್ಮ ಗುರಿ: ಸಿದ್ದರಾಮಯ್ಯ
- ಭಾರತ ಕಲ್ಯಾಣ ರಾಷ್ಟ್ರವಾಗಲು ಅಂಬೇಡ್ಕರರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು: ಕೆ.ವೈ.ನಾರಾಯಣಸ್ವಾಮಿ
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
ಸದನದ ಕಲಾಪ ಆರಂಭವಾದ ಕೂಡಲೇ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಸಂತಾಪ ಸೂಚಕ ಮಂಡಿಸಿ ಮಾಜಿ ಶಾಸಕ ಆರ್. ನಾರಾಯಣ ಅವರು1943ರಂದು ತುಮಕೂರಿನಲ್ಲಿ ಜನಿಸಿದ್ದು. ಬಿ.ಎಸ್ಸಿ. ಹಾಗೂ ಕಾನೂನು ಪದವೀಧರರಾಗಿದ್ದ ವೃತ್ತಿಯಲ್ಲಿ ವಕೀಲರಾಗಿದ್ದರು. ಕ್ರೀಡೆ ಹಾಗೂ ವಿದ್ಯಾ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದ ಅವರು ಬೆಳ್ಳಾವಿ ವಿಧಾನಸಭಾ ಕ್ಷೇತ್ರದಿಂದ ಪ್ರಥಮ ಬಾರಿಗೆ 9ನೇ ವಿಧಾನಸಭೆಯನ್ನು ಪ್ರವೇಶಿಸಿದ್ದರು ನಂತರ 10ನೇ ಹಾಗೂ 11ನೇ ವಿಧಾನಸಭೆಗೆ ಪುನಾರಾಯ್ಕೆಗೊಂಡಿದ್ದರು ಎಂದರು.
ಜಯಣ್ಣ ಎಸ್ ಅವರು 1951 ರಂದು ಕೊಳ್ಳೇಗಾಲದಲ್ಲಿ ಜನಿಸಿದ್ದು,ಎಂ.ಎ. ಪದವೀಧರರಾಗಿದ್ದ ಅವರು ವೃತ್ತಿಯಲ್ಲಿ ಕೃಷಿಕರಾಗಿದ್ದು, ರೇಷ್ಮೆ ಉದ್ಯಮಿಯೂ ಆಗಿದ್ದರು. ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಕೊಳ್ಳೇಗಾಲ ಕ್ಷೇತ್ರದಿಂದ 1994 ರಲ್ಲಿ 9ನೇ ವಿಧಾನಸಭೆಗೆ ಪ್ರಥಮ ಬಾರಿಗೆ ಆಯ್ಕೆಗೊಂಡು ನಂತರ 2013ರಲ್ಲಿ 14ನೇ ವಿಧಾನಸಭೆಗೆ ಪುನರಾಯ್ಕೆಗೊಂಡಿದ್ದರು ಎಂದರು.
ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿ, ಜಯಣ್ಣ ಹಾಗೂ ನಾರಾಯಣ ಅವರು ಸಾಮಾಜಿಕ ಕಳಕಳಿಯುಳ್ಳವರಾಗಿ, ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ್ದರು. ಸಜ್ಜನ ರಾಜಕಾರಣಿಗಳಾಗಿ ಅವರು ಸಲ್ಲಿಸದ ಸೇವೆ ಅನನ್ಯವಾಗಿದೆ ಎಂದರು.
ವಿಪಕ್ಷ ನಾಯಕ ಆರ್ ಅಶೋಕ್ ಸಂತಾಪ ಸೂಚಿಸಿ ಇವರಿಬ್ಬರ ಸೇವೆಯನ್ನು ನೆನೆದರು.




