ಕರ್ನಾಟಕದ ಕಾಲೇಜು ಶಿಕ್ಷಣ ಇಲಾಖೆಯು 10-20 ವರ್ಷಗಳ ಅನುಭವ ಇರುವ ಸರ್ಕಾರಿ ಪದವಿ, ಸ್ನಾತಕೋತ್ತರ ಕಾಲೇಜುಗಳ ಸಹಾಯಕ, ಸಹ ಪ್ರಾಧ್ಯಾಪಕರಿಗೆ ಅಜೀಂ ಪ್ರೇಮ್ ಜಿ ವಿವಿಯಿಂದ ‘ಬೋಧಕ ವರ್ಗಗಳಿಗೆ ವೃತ್ತಿಪರ ಅಭಿವೃದ್ಧಿ ತರಬೇತಿ’ ( faculty professional development program) ಕುರಿತು ಎರಡು ದಿನಗಳ ಕಾರ್ಯಾಗಾರ ಆಯೋಜಿಸಿದ್ದಾರೆ.
- ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣವೇ ಪದಚ್ಯುತಗೊಳಿಸಿ: ಸಿದ್ದರಾಮಯ್ಯ
- ಸತತ 5 ದಿನ ಬ್ಯಾಂಕ್ಗಳಿಗೆ ಬೀಗ!: ಏನಿರುತ್ತದೆ, ಏನಿಲ್ಲ? ಕಂಪ್ಲೀಟ್ ಡೀಟೈಲ್ಸ್!
- 814 ಉಪನ್ಯಾಸಕರ ನೇಮಕಾತಿಯಲ್ಲಿ ಉರ್ದುಗೆ ಸ್ಥಾನ ಎಲ್ಲಿದೆ?
- ಸಾಲ ಮನ್ನಾ ಮಾಡಿ ರೈತರ ಹಿತ ಕಾಪಾಡಿದ್ದ ಡಾ.ಮನಮೋಹನ್ ಸಿಂಗ್
- ರಾಜ್ಯದ ಅಭಿವೃದ್ಧಿಗೆ ಆರ್.ಅಶೋಕ್ ಅಡ್ಡಗಾಲು: ಕೆಪಿಸಿಸಿ
ಇಂದು ಖಾಸಗಿ ಶಿಕ್ಷಣ ಸಂಸ್ಥೆಯಾದ ಅಜೀಂ ಪ್ರೇಮ್ ಜಿ ವಿವಿ ಉನ್ನತ ಶಿಕ್ಷಣ ವ್ಯವಸ್ಥೆಯ ನೀತಿ ನಿರೂಪಣೆ ರೂಪಿಸುವಷ್ಟು ಪ್ರಭಾವಶಾಲಿಯಾಗಿದೆ.
ಎನ್‌ಇಪಿ 2020ಯ ಕರಡು ದಸ್ತಾವೇಜಿನ ಹಿಂದೆ ಅಜೀಂ ಪ್ರೇಮ್ ಜಿ ವಿವಿಯ ಸಕ್ರಿಯ ಪಾತ್ರವಿರುವುದು ಅನಧಿಕೃತ ಮಾಹಿತಿಯಾದರೂ ಸಹ ಯಾರೂ ಅಧಿಕೃತವಾಗಿ ಅಲ್ಲಗಳೆದಿಲ್ಲ.
ಈಗಾಗಲೇ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾರ್ವಜನಿಕ ಸಂಸ್ಥೆಯಾದ ‘ಡಯಟ್’ ಮೂಲಕ ಶಾಲಾ ಶಿಕ್ಷಕರಿಗೆ ತರಬೇತಿ ನೀಡುತ್ತಿರುವ ಈ ಖಾಸಗಿ ಸಂಸ್ಥೆ ಈಗ ಬೋಧನೆ ಮಾಡಿ ಅನುಭವ ಇರುವ ಉನ್ನತ ಶಿಕ್ಷಣದ ಸರ್ಕಾರಿ ಪ್ರಾಧ್ಯಾಪಕರಿಗೆ ತರಬೇತಿ ನೀಡುತ್ತಿದ್ದಾರೆ.
ಹಾಗಿದ್ದರೆ ಈಗ ಅಸ್ತಿತ್ವದಲ್ಲಿರುವ ಉನ್ನತ ಶಿಕ್ಷಣ ಪರಿಷತ್ ನ ನೀತಿ ಏನು? ಅದರ ಅಧ್ಯಕ್ಷರಾಗಿರುವ ಉನ್ನತ ಶಿಕ್ಷಣ ಸಚಿವರು ಮತ್ತು ಸದಸ್ಯರಾಗಿರುವ ಸೆಲೆಬ್ರಿಟಿ ವಿದ್ವಾಂಸರ ಅಭಿಪ್ರಾಯವೇನು? ಖಾಸಗಿ ಶಿಕ್ಷಣ ಸಂಸ್ಥೆಗೆ ಇಂತಹ ಹೊರಗುತ್ತಿಗೆ ನೀಡಲು ಒಪ್ಪಿದ್ದಾರೆಯೇ?
ಅನೇಕರು ಹೇಳಬಹುದು ‘ಇದೇನು ಮಹಾ ಸುದ್ದಿ ‘ ಅಂತ… ಆದರೆ ಇಂದು ತರಬೇತಿಯನ್ನು ಹೊರಗುತ್ತಿಗೆ ಕೊಡುವ ಇಲಾಖೆ ನಾಳೆ ಪದವಿ ತರಗತಿಗಳನ್ನು ಸಹ ಇವರಿಗೆ ಹೊರ ಗುತ್ತಿಗೆ ಕೊಡುವುದಿಲ್ಲ ಎನ್ನುವುದಕ್ಕೆ ಖಾತರಿ ಏನು? ಉನ್ನತ ಶಿಕ್ಷಣ ಇಲಾಖೆಗೆ ತನ್ನ ಪ್ರಾಧ್ಯಾಪಕರಿಗೆ ತರಬೇತಿ ಕೊಡದಷ್ಟು ಕಳಪೆಯೇ?
ಧಾರವಾಡದಲ್ಲಿ ನೂರಾರು ಕೋಟಿ ವೆಚ್ಚ ಮಾಡಿ ‘ಉನ್ನತ ಶಿಕ್ಷಣ ಅಕಾಡೆಮಿ’ ಸ್ಥಾಪಿಸಿದ್ದಾರೆ.
ಅದರ ಉದ್ದೇಶವೇನು ಸಚಿವರೇ?
ಇಂದು ಅಜೀಂ ಪ್ರೇಮ್ ಜಿ ವಿವಿ, ನಾಳೆ ಆರೆಸ್ಸೆಸ್ ಸಂಸ್ಥೆಗಳಿಗೆ ಕೊಡುವುದಿಲ್ಲ ಎನ್ನುವುದಕ್ಕೆ ಗ್ಯಾರಂಟಿ ಏನು?ಕಡೆಗೆ ‘ರಾಜ್ಯ ಶಿಕ್ಷಣ ನೀತಿ’ ಆಯೋಗದ ನಿಲುವೇನು?
- ಬಿ. ಶ್ರೀಪಾದ ಭಟ್, ಸಾಮಾಜಿಕ ಹೋರಾಟಗಾರರು




