ಸ್ಕಾಲರ್ಶಿಪ್ ಪಡೆಯಲು ಆದಾಯ ಪ್ರಮಾಣ ಪತ್ರದ ವಿಚಾರದ ಗೊಂದಲ ಸರಿಪಡಿಸಿ

4 hours ago

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಹಿಂದುಳಿದ ವರ್ಗದವರು ಮತ್ತು ಇತರರಿಗೆ ನೀಡುವ ಸ್ಕಾಲರ್ಶಿಪ್ ಯೋಜನೆಯ ಫಲಾನುಭವಿಗಳಾಗಲು ಪೋಷಕರು ಸಲ್ಲಿಸುವ ಆದಾಯ ಪ್ರಮಾಣ ಪತ್ರ ಒಂದು ಲಕ್ಷದ ಒಳಗೆ ಇರಬೇಕು. ಆದರೆ ಕಂದಾಯ ಇಲಾಖೆಯಲ್ಲಿ ಉಪ ತಹಸಿಲ್ದಾರರು ಆದಾಯ ಪ್ರಮಾಣ ಪತ್ರವನ್ನು ಒಂದು ಲಕ್ಷದ ಇಪ್ಪತ್ತು ಸಾವಿರ ರೂಪಾಯಿಗಳಿಗೆ ಮಾತ್ರವೇ ನೀಡಲು ಸಾಧ್ಯ. ಒಂದು ಲಕ್ಷದ ಒಳಗೆ ಕೊಡಲು ಸಾಧ್ಯವಿಲ್ಲ ಎಂದು ನಿರಾಕರಿಸುತ್ತಾರೆ.

ಯಾವ ಪೋಷಕರು ಒಂದು ಲಕ್ಷದ ಒಳಗೆ ವಾರ್ಷಿಕ ಆದಾಯ ಪ್ರಮಾಣ ಪತ್ರವನ್ನು ಸಲ್ಲಿಸುತ್ತಾರೆ, ಅಂತಹವರ ಮಕ್ಕಳಿಗೆ ಮಾತ್ರ ಸರ್ಕಾರದ ವಿವಿಧ ಸ್ಕಾಲರ್ಶಿಪ್ ಯೋಜನೆಯ ಹಣ ಬರುತ್ತದೆ. ಇದಕ್ಕಿಂತ ಹೆಚ್ಚಿಗೆ ಆದಾಯ ಪ್ರಮಾಣ ಪತ್ರವನ್ನು ಸಲ್ಲಿಸಿದರೆ ಅವರಿಗೆ ಈ ಯೋಜನೆಯ ಫಲಾನುಭವಿಗಳಾಗಲು ಸಾಧ್ಯವಿಲ್ಲ.

ಈಗ ರಾಜ್ಯ ಸರ್ಕಾರವೇ ಎಲ್ಲದಕ್ಕೂ 1,20,000 ರೂ.ಗಳ ಆದಾಯವನ್ನು ಮಿತಿ ಮಾಡಿ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಗಮನಹರಿಸಿ ಸ್ಕಾಲರ್ಶಿಪ್ ಪಡೆದುಕೊಳ್ಳಲು ವಿದ್ಯಾರ್ಥಿಗಳು ಮತ್ತು ಪೋಷಕರು ಅನುಭವಿಸುತ್ತಿರುವ ಗೊಂದಲಮಯವಾದ ಸಮಸ್ಯೆಯನ್ನು ಪರಿಹರಿಸಿಕೊಟ್ಟು 1,20,000 ರೂ.ಗಳ ಆದಾಯ ಪ್ರಮಾಣ ಪತ್ರದ ಆಧಾರದ ಮೇಲೆ ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡಲು ಸಂಬಂಧಪಟ್ಟ ಇಲಾಖೆಯ ಸಚಿವರು ಗಮನಹರಿಸಬೇಕು. ಜೊತೆಗೆ ಸಮಾಜ ಕಲ್ಯಾಣ ಇಲಾಖೆಯ ಸಚಿವರು ಈ ಈ ವಿಚಾರದಲ್ಲಿ ವಿಶೇಷವಾದ ಆಸಕ್ತಿಯನ್ನು ತೋರಿಸಬೇಕಾಗಿದೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply