ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಕೊಲೆ ಹಾಗೂ ಆಸ್ಪತ್ರೆ ಮೇಲೆ ಪ್ರತಿಭಟನಾಕಾರರ ದಾಳಿ ಖಂಡನೆ

2 years ago

ಕೊಲ್ಕತ್ತಾ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಕೊಲೆ ಹಾಗೂ ಆಸ್ಪತ್ರೆ ಮೇಲೆ ಪ್ರತಿಭಟನಾಕಾರರ ದಾಳಿ ಖಂಡಿಸಿ ವಿ.ಸಿ.ಎನ್. ವೈದ್ಯರುಗಳ ಕ್ಷೇಮಾಭಿವೃದ್ದಿ ಸಂಘದಿಂದ ಖಂಡನೆ

ಬೆಂಗಳೂರು: ವಿ.ಸಿ.ಎನ್. ವೈದ್ಯರುಗಳ ಕ್ಷೇಮಾಭಿವೃದ್ದಿ ಸಂಘ ವತಿಯಿಂದ ಕೊಲ್ಕತ್ತಾದ ವೈದ್ಯಕೀಯ ಕಾಲೇಜು ಆವರಣದಲ್ಲಿ ಸಾತ್ನಕೋತ್ತರ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮತ್ತು ಕೊಲೆ ಹಾಗೂ ಆರ್.ಜಿ.ಕಾರ್ ಆಸ್ಪತ್ರೆಯ ಮೇಲೆ ಪ್ರತಿಭಟನೆಕಾರರು ನುಗ್ಗಿ ದಾಂಧಲೆ ಖಂಡಿಸಿದರು.

ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ವಿ.ಸಿ.ಎನ್.ಡಾಕ್ಟರ್ಸ್ ವೇಲ್ ಫೇರ್ ಅಸೋಸಿಯೇಷನ್ ಅಧ್ಯಕ್ಷ ಡಾ.ಎಸ್.ರಾಜು, ಕಾರ್ಯದರ್ಶಿ ಬಿ.ಟಿ.ರಮೇಶ್, ಸಂಘದ ವೈದ್ಯರುಗಳಾದ ಡಾ||ಭೋಜಮ್ಮ,  ಡಾ||ವೆಂಕಟರಾಮ್, ಡಾ||ಚಂದ್ರಶೇಖರ್, ಡಾ||ಚಂದ್ರಿಕಾ ಆನಂದ್, ಡಾ||ಪ್ರೀತ್ ಶೆಟ್ಟಿ, ಡಾ ಮಂಜುನಾಥ್ ಘಟನೆಯನ್ನು ಖಂಡಿಸಿದರು.

ಡಾ||ಎಸ್.ರಾಜುರವರು ಮಾತನಾಡಿ, ವೈದ್ಯರು ದೇವರ ಸಮಾನ ಎಂದು ಹೇಳುತ್ತಾರೆ. ರೋಗಿಗಳ ರೋಗದ  ಸಮಸ್ಯೆ ಸಂಕಷ್ಟಗಳನ್ನು ನಮ್ಮ ಬಳಿ ಬಂದು ಹೇಳುತ್ತಾರೆ ಅವರ ಜೀವ ಉಳಿಸಲು ವೈದ್ಯರು ಶ್ರಮವಹಿಸುತ್ತಾರೆ. ಆದರೆ ವೈದ್ಯರುಗಳ ಮತ್ತು ಆರೋಗ್ಯ ಸಿಬ್ಬಂದಿಗಳ ಮೇಲೆ ಹಲ್ಲೆ ಹಿಂಸೆ, ಸಂಸ್ಥೆಗಳ ಮೇಲೆ ದಾಂಧಲೆ ನಡೆಯುತ್ತಿದೆ ಅತ್ಯಂತ ವಿಷಾದಕರ ಸಂಗತಿಯಾಗಿದೆ ಎಂದರು.

ಪಶ್ಚಿಮ ಬಂಗಾಳ, ಕೋಲ್ಕತ್ತಾದಲ್ಲಿ ಸಾತ್ನಕೋತ್ತರ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಕೊಲೆ ಹಾಗೂ ಆರ್.ಜಿ.ಕಾರ್ ಆಸ್ಪತ್ರೆ ಮೇಲೆ  ಪ್ರತಿಭಾಟನಕಾರರು ದಾಳಿ ಮಾಡಿರುವದನ್ನ ವಿ.ಸಿ.ಎನ್. ವೈದ್ಯರುಗಳ ಕ್ಷೇಮಾಭಿವೃದ್ದಿ ಸಂಘ ಖಂಡನೆ ವ್ಯಕ್ತಪಡಿಸುತ್ತದೆ ಎಂದರು.

ವೈದ್ಯ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ, ಕೊಲೆ ಉಗ್ರ ಶಿಕ್ಷೆಯಾಗಬೇಕು ಮತ್ತು ದಾಂಧಲೆ ಮಾಡಿದವರ ವಿರುದ್ದ ತತಕ್ಷಣ ಬಂಧಿಸಿ ಕ್ರಮ ವಹಿಸಬೇಕು. ಎಲ್ಲ ಆರೋಗ್ಯ ಸೇವಾ ಸೌಲಭ್ಯಗಳು ಮತ್ತು ಸರ್ಕಾರಿ, ಖಾಸಗಿ ಚಿಕಿತ್ಸಾಲಯಗಳು ಆರೋಗ್ಯ ಸೇವೆಯಲ್ಲಿ ನಿರತರಾಗಿರುವ ವೈದ್ಯರು, ಆರೋಗ್ಯ ಸಿಬ್ಬಂದಿಗಳಿಗೆ  ಸೂಕ್ತ ಭದ್ರತೆ ಒದಗಿಸಬೇಕು ಎಂದರು

ಆರೋಗ್ಯ ಸಂಸ್ಥೆಗಳ ಮೇಲೆ ದಾಳಿ, ಗಲಭೆ ಅಹಿತಕಾರ ಘಟನೆಯನ್ನು ಎದುರಿಸಲು ಕೇಂದ್ರ ಸರ್ಕಾರ ಕಠಿಣ ಕಾನೂನು ಜಾರಿಗೆ ತರಬೇಕು ಎಂದರು.

ನಾವು ಯಾವುದೇ ಭಯವಿಲ್ಲದೇ ನಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಕೆಲಸದ ಸ್ಥಳದಲ್ಲಿ ಆರೋಗ್ಯ ಕಾರ್ಯಕರ್ತರನ್ನು ರಕ್ಷ್ಮಿಸಲು ಕಠಿಣ ಕಾನೂನು ಜಾರಿಗಾಗಿ ಎಲ್ಲ ಕಾನೂನು ಜಾರಿ ಮಾಡುವ ಸಂಸ್ಥೆಗಳು ಜವಾಬ್ದಾರರಾಗಿರಬೇಕೆಂದು ಒತ್ತಾಯಿಸಿದರು.

ಪೊಲೀಸ್ ಮತ್ತು ಆರೋಗ್ಯ ಇಲಾಖೆ ವತಿಯಿಂದ ಆರೋಗ್ಯ ಸಂಸ್ಥೆಗಳಿಗೆ ಸೂಕ್ತ ಭದ್ರತೆ ವ್ಯವಸ್ಥೆ ಕಲ್ಪಿಸಬೇಕು. ಆರೋಗ್ಯ ಸೇವೆಯಲ್ಲಿ ನಿರತರಾಗಿರುವ ಕಾರ್ಯಕರ್ತರ ಮೇಲೆ ಸಾರ್ವಜನಿಕರು ಶಾಂತಿ, ತಾಳ್ಮೆ ವಹಿಸಬೇಕು. ಆರೋಗ್ಯ ಕಾರ್ಯಕರ್ತರು ಎದುರಿಸುತ್ತಿರುವ ಅಪಾಯಗಳನ್ನು ಮತ್ತು ಆರೋಗ್ಯ ಸೇವೆ ಕಾರ್ಯನಿರತರಾಗಿರುವವರಿಗೆ ರಕ್ಷಣೆ ಮಾಡಲು ಕಠಿಣ ಕಾನೂನು ಜಾರಿಗೆಯಾಗಬೇಕು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ರೋಗಿಗಳ ಆರೈಕೆ ಮತ್ತು ಗುಣಮುಖರಾಗಿ ಮಾಡಲು ವೈದ್ಯರುಗಳು, ಸಿಬ್ಬಂದಿಗಳು ಬೇದಬಾವವಿಲ್ಲದೆ ಕಾರ್ಯನಿರ್ವಹಿಸುತ್ತಾರೆ  ಇಂತಹ ಹೋರಾಟದಲ್ಲಿ ಸಹ ತುರ್ತು ಮತ್ತು ಅಗತ್ಯ ಆರೋಗ್ಯ ಸೇವೆಗಳು ಮುಂದುವರೆಯತ್ತದೆ ರೋಗಿಗಳ ತತಕ್ಷಣ ಚಿಕಿತ್ಸೆ ನೀಡುವುದು ನಮ್ಮ ಕರ್ತವ್ಯವಾಗಿದೆ ಎಂದರು.

ಆರೋಗ್ಯ ಸೇವೆಯಲ್ಲಿ ನಿರತರಾಗಿರುವ ವೈದ್ಯರು, ನರ್ಸ್ ಮತ್ತು ಸಿಬ್ಬಂದಿಗಳು ಆಂಬುಲೆನ್ಸ್ ಸಿಬ್ಬಂದಿಗಳ ಸುರಕ್ಷತೆ ರಕ್ಷಣೆಗಾಗಿ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ವಿನಂತಿಸಿದರು.

Leave a Reply