ರಾಣಿ ಅಹಲ್ಯಾಬಾಯಿ ಹೋಳ್ಕರ್ 300ನೇ ಜಯಂತಿ

1 year ago

ರಾಣಿ ಅಹಲ್ಯಾಬಾಯಿ ಹೋಳ್ಕರ್ ಭಾರತಮಾತೆಯ ಪರಿಶುದ್ದ ಅರಾಧಕಿ, ಪ್ರಜೆಗಳಲ್ಲಿ ರಾಷ್ಟ್ರಪ್ರೇಮ ಬಿತ್ತಿದ್ದರು: ಆರೋಗ್ಯ ಭಾರತಿ ಪ್ರಮುಖ್ ಸು.ನಾಗರಾಜು

ಬಾಲಕಿಯರಿಗೆ ಶಿಕ್ಷಣ, ಮಹಿಳೆಯರ ಸ್ವಾಭಿಮಾನದ ಪ್ರತೀಕ ರಾಣಿ ಅಹಲ್ಯಾಬಾಯಿ ಹೋಳ್ಕರ್: ಡಾ.ಪುಣ್ಯವತಿ ನಾಗರಾಜ್

ಬೆಂಗಳೂರು: ಬಸವೇಶ್ವರನಗರದ ಪುಣ್ಯ ಆಸ್ಪತ್ರೆ ಸಭಾಂಗಣದಲ್ಲಿ ಆರೋಗ್ಯ ಭಾರತಿ ವೈದ್ಯರ ಸಮೂಹದಲ್ಲಿ ರಾಣಿ ಅಹಲ್ಯಬಾಯಿ ಹೋಳ್ಕರ್ ತ್ರಿಶತಾಬ್ದಿ ಜನ್ಮೋತ್ಸವ ಕಾರ್ಯಕ್ರಮ ನಡೆಯಿತು.

ದೀಪ ಬೆಳಗಿಸಿ ಕಾರ್ಯಕ್ರಮವನ್ನು ಆರೋಗ್ಯ ಭಾರತಿ ಪ್ರಾಂತ ಕಾರ್ಯಾಲಯ ಪ್ರಮುಖ್ ಸು.ನಾಗರಾಜುರವರು, ಖ್ಯಾತ ಅರ್ಥೋ ಶಸ್ತ್ರ ಚಿಕಿತ್ಸಕ ಡಾ.ರವೀಂದ್ರ ಪುಟ್ಟಸ್ವಾಮಿ, ಡಾ.ಪುಣ್ಯವತಿ ನಾಗರಾಜು, ಡಾ.ನಾಗರಾಜ್, ಬಿಬಿಎಂಪಿ ಮಾಜಿ ಸದಸ್ಯ ಗಂಗಭೈರಯ್ಯ ನೇರವೆರಿಸಿದರು. ನಂತರ ಭಾರತಮಾತೆ ಮತ್ತು ಅಹಲ್ಯಬಾಯಿ ಹೋಳ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಆರೋಗ್ಯ ಭಾರತಿ ಪ್ರಮುಖ್ ಸು.ನಾಗರಾಜು ಮಾತನಾಡಿ, 300 ವರ್ಷಗಳಲ್ಲಿ ಭಾರತಮಾತೆ ಹಲವಾರು ಗಣ್ಯಮಹನೀಯರುಗಳು ದೇಶ ಸೇವೆ ಮಾಡಿದ್ದಾರೆ. ಅದರಲ್ಲಿ ಪ್ರಮುಖರಾದ ರಾಣಿ ಅಹಲ್ಯಾಬಾಯಿ ಹೋಳ್ಕರ್ ಎಂದರು.

ಮಗುವನ್ನು ಹೆರುವ ಎಲ್ಲ ತಾಯಂದಿರು ಮಾತೃ ದೇವತೆ ಎಂದು ಕರೆಯುತ್ತಾರೆ. ಇಡಿ ಊರಿನ ಜನರೆ ಅಹಲ್ಯಾಬಾಯಿ ಹೋಳ್ಕರ್ ರವರನ್ನು ತಾಯಿ ಎಂದೇ ಭಾವಿಸಿದ್ದರು. ರಾಜತಂತ್ರಜ್ಞೆ, ಪರಿಸರವಾದಿ, ಉತ್ತಮ ಆಡಳಿತಗಾರ್ತಿ ಎಂಬ ಕೀರ್ತಿಗೆ ಅಹಲ್ಯಾಬಾಯಿ ಹೋಳ್ಕರ್ ಭಾಜನರಾದರು ಎಂದರು.

ಪ್ರಜೆಗಳನ್ನು ತಾಯಿಯಂತೆ ಪೂಜಿಸುತ್ತಿದ್ದರು. ಭಾರತಮಾತೆ ಪರಿಶುದ್ಧ ಅರಾಧಕಿ ಅಹಲ್ಯಾಬಾಯಿ ಹೋಳ್ಕರ್. ಪ್ರಜೆಗಳಲ್ಲಿ ರಾಷ್ಟ್ರಪ್ರೇಮ ಬಿತ್ತಿದರು. ಶಿವನ ಅರಾಧಕರಾಗಿದ್ದರು ಎಂದರು.

ರಾಣಿ ಅಹಲ್ಯಾಬಾಯಿ ಹೋಳ್ಕರ್ ಅವರು ಚಿನ್ನ, ವಜ್ರಾಭರಣ ಯಾವುದೇ ಮೌಲ್ಯಗಳು ಇಲ್ಲ. ರೈತ ಬೆಳೆದ ಆಹಾರಧಾನ್ಯಗಳು ಶೇಷ್ಠ. ಪ್ರಾಣಿಪಕ್ಷಿಗಳಿಗೆ ಧಾನ್ಯ ತಿನ್ನುತ್ತವೆ ಹೊರತು ಚಿನ್ನವಲ್ಲ ಎಂದು ರೈತ ಪರ ನಿಲುವು ಹೋಂದಿದ್ದರು ಎಂದರು.

ರಾಣಿ ಅಹಲ್ಯಾಬಾಯಿ ಹೋಳ್ಕರ್ ನೇತೃತ್ವದಲ್ಲಿ  ಮಹಿಳೆಯರ ತಂಡ ಕಟ್ಟಿಕೊಂಡು ಯುದ್ದಭೂಮಿಯಲ್ಲಿ ಹೋರಾಟ  ಮಾಡಿ ಜಯಗಳಿಸಿದರು ಎಂದರು.

ಡಾ.ಪುಣ್ಯವತಿ ನಾಗರಾಜ್ ಮಾತನಾಡಿ, ರಾಜಕೀಯ ವ್ಯಕ್ತಿಗಳಿಗೆ ಮಾದರಿಯಾಗಿರುವ ಅಹಲ್ಯಾಬಾಯಿ ಹೋಳ್ಕರ್ ರವರ ಬಗ್ಗೆ ಪ್ರಧಾನಿ ನರೇಂದ್ರಮೋದಿರವರು ಕಾಶಿಯಲ್ಲಿ ಸಮಾವೇಶದಲ್ಲಿ ಮಾತನಾಡಿ  ಅಹಲ್ಯಾಬಾಯಿ ಕುರಿತು ದೇಶದ ಗಮನ ಸೆಳೆದರು ಎಂದರು.

ರಾಣಿ ಅಹಲ್ಯಾಬಾಯಿ ಹೋಳ್ಕರ್ ರವರು 28 ಯುದ್ಧಗಳಲ್ಲಿ ಉತ್ತಮ ಆಡಳಿತ ಮತ್ತು ನೂರಾರು ದೇವಸ್ಥಾನಗಳ ಜೀರ್ಣೋದ್ಧಾರ ಮಾಡಿದರು. ಮಹೇಶ್ವರಿ ಸ್ಕಿಲ್ ಎಂಬ ಸೀರೆ ತಯಾರಿಕೆ ಆರಂಭಿಸಿದರು. ಮಹಿಳೆಯರು ಸ್ವಾವಲಂಬಿ ಬದುಕಿಗೆ ಅಹಲ್ಯಾಬಾಯಿ ಹೋಳ್ಕರ್ ಮಹಿಳೆಯರಿಗೆ ಸ್ಪೂರ್ತಿ ಮತ್ತು ಪ್ರತೀಕರಾಗಿದ್ದಾರೆ ಎಂದರು.

ಡಾ.ರವೀಂದ್ರ ಪುಟ್ಟಸ್ವಾಮಿ ಮಾತನಾಡಿ, ಇಂದೋರ್ ಮಹಾರಾಣಿ ಅಹಲ್ಯಾಬಾಯಿ ಹೋಳ್ಕರ್ ರವರು ಧೀಮಂತ ಮಹಿಳೆ, ಯುದ್ಧ ಕೌಶಲ್ಯ ಬುದ್ಧಿವಂತೆ ಎಂದು ಖ್ಯಾತಿ ಪಡೆದಿದ್ದರು. ಪ್ರಜಾಪಾಲನೆ, ಆಡಳಿತ ಕೌಶಲ್ಯವನ್ನು ಅವರ ಮಾವನಿಂದ ಅಹಲ್ಯಾಬಾಯಿ ಹೋಳ್ಕರ್ ರವರು ಕಲಿತರು. ಪತಿ ಸತ್ತಾಗ ಅಹಲ್ಯಾಬಾಯಿರವರು ಸತಿಸಹಗಮನ ಮಾಡುತ್ತೇನೆ ಎಂದಾಗ ಅವರ ಮಾವನವರು ವಿರೋಧ ವ್ಯಕ್ತಪಡಿಸಿದರು ಎಂದು ಹೇಳಿದರು.
 
ಉತ್ತರ, ದಕ್ಷಿಣ ಪೂರ್ವ ಪಶ್ಚಿಮ ಭಾರತದ ಹಲವಾರು ರಾಜ್ಯಗಳಲ್ಲಿ ಧಾರ್ಮಿಕ ಕಾರ್ಯಗಳಾದ ದೇವಸ್ಥಾನ ನಿರ್ಮಾಣ, ಧರ್ಮ ಛತ್ರ ಸ್ಥಾಪಿಸಿದರು. ತಮ್ಮ ವ್ಯಯಕ್ತಿಕ ಹಣದಿಂದ ಧರ್ಮಕಾರ್ಯಗಳನ್ನು ಮಾಡುತ್ತಿದ್ದರು. ಅಹಲ್ಯಾಬಾಯಿ ಹೋಳ್ಕರ್ ರವರು ಸತಿ ಧರ್ಮ, ರಾಜ ಧರ್ಮ ಯಶ್ವಸಿಯಾಗಿ ನಿಭಾಯಿಸಿದರು ಎಂದರು.

Leave a Reply