ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಬಿ.ಜಿ.ಎಸ್. ಆಟದ ಮೈದಾನದಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ಸಮಾರಂಭವನ್ನು ಬಿ.ಜೆ.ಎಸ್. ಆಟದ ಮೈದಾನದಲ್ಲಿ ಸ್ಥಳೀಯ ಶಾಸಕ, ವಸತಿ ಸಚಿವ ವಿ.ಸೋಮಣ್ಣ ಉದ್ಘಾಟಿಸಿದರು.
ಶಾಲೆಯ ಮಕ್ಕಳಿಂದ ಪಥ ಸಂಚಲನ ಮತ್ತು ವಿವಿಧ ವೇಷಭೂಷಣ ಧರಿಸಿದ ಮಕ್ಕಳು,ವಾದ್ಯತಂಡಗಳ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಇದೇ ವೇಳೆ ವಿಕಲಚೇತನರಿಗೆ ಯಂತ್ರ ಚಾಲಿತ ದ್ವಿಚಕ್ರವಾಹನ ವಿತರಿಸಲಾಯಿತು.
ವಿ.ಸೋಮಣ್ಣ ಮಾತನಾಡಿ ವಿಶ್ವದ ಬಲಿಷ್ಠ ಪ್ರಧಾನಿ ನರೇಂದ್ರಮೋದಿ ರವರ ನೇತೃತ್ವದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮದ ಅನ್ವಯ ಹರ್ ಘರ್ ತಿರಂಗಾ ಅಂದೋಲದಡಿ ನಮ್ಮ ಕ್ಷೇತ್ರದಲ್ಲಿ ಮನೆ ಮೇಲೆ ಹಾರಿಸಲು ತ್ರಿರ್ವಣ ಧ್ವಜವನ್ನು ಉಚಿತವಾಗಿ ವಿತರಿಸಲಾಗಿದೆ ಎಂದರು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಶಿಕ್ಷಣ,ಆರೋಗ್ಯ ಮತ್ತು ಪರಿಸರ ಮೂಲ ಆದ್ಯತೆ ನೀಡಲಾಗಿದೆ. ಶಿಕ್ಷಣದಿಂದ ಮಾತ್ರ ದೇಶ ಅಭಿವೃದ್ದಿ ಎಂಬಂತೆ ಶಿಕ್ಷಣಕ್ಕೆ ಆದ್ಯತೆ ನೀಡಿ ಸರ್ಕಾರಿ ಶಾಲೆಗಳನ್ನು ಹೈಟೆಕ್ ಶಾಲೆಗಳಾಗಿ ನಿರ್ಮಿಸಲಾಗಿದೆ ಎಂದರು.
ಕನಕಭವನ ಮತ್ತು ಜ್ಞಾನಸೌಧದಲ್ಲಿ ಐ.ಎ.ಎಸ್. ಮತ್ತು ಪರೀಕ್ಷಾ ತರಭೇತಿ ಕೇಂದ್ರ ಮತ್ತು ಡಿಜಿಟಲ್ ಗ್ರಂಥಾಲಯ ಸ್ಥಾಪಿಸಲಾಗಿದೆ. ಪ್ರತಿ ವಾರ್ಡ್ ನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ದಾಸರಹಳ್ಳಿ ಮತ್ತು ಪಂತರಪಾಳ್ಯದಲ್ಲಿ ಸೂಪರ್ ಸ್ಪಷಾಲಿಟಿ ಆಸ್ಪತ್ರೆ ತೆತೆಯಲಾಗಿದೆ.
ಪರಿಸರ ಸ್ವಚ್ಚತೆಗೆ ಆದ್ಯತೆ ನೀಡಿ, ಕ್ಷೇತ್ರದಲ್ಲಿರುವ ಪಾರ್ಕ್ ನವೀಕರಣ ಮಾಡಿ ಹಸಿರುಮಯ ವಾತವರಣ ನಿರ್ಮಿಸಲಾಗಿದೆ. ಮಹಾತ್ಮಗಾಂಧೀಜಿ, ಸುಭಾಷ್ ಚಂದ್ರಬೋಸ್,ರಾಣಿ ಅಬ್ಬಕ್ಕ, ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಲಕ್ಷಾಂತರ ದೇಶ ಪ್ರೇಮಿಗಳ ತ್ಯಾಗ, ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಲಭಿಸಿತು ಎಂದರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ತ್ಯಾಗ, ಬಲಿದಾನ ಮಾಡಿದ ಮಹನೀಯರುಗಳು ಇತಿಹಾಸ ಇಂದಿನ ಯುವ ಸಮೂಹ ಅರಿತುಕೊಳ್ಳಬೇಕು ಎಂದು ಹೇಳಿದರು.
ಗೋವಿಂದರಾಜನಗರ ಮಂಡಲ ಬಿ.ಜೆ.ಪಿ.ಅಧ್ಯಕ್ಷ ವಿಶ್ವನಾಥಗೌಡ, ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ವಾಗೇಶ್, ಶ್ರೀಧರ್, ದಾಸೇಗೌಡ, ರೂಪಲಿಂಗೇಶ್ವರ್, ಪಲ್ಲವಿ ಭಾಗವಹಿಸಿದ್ದರು.




