ವಿಶ್ವ ರೇಬಿಸ್ ದಿನಾಚರಣೆ
ರೇಬಿಸ್ ನಿಯಂತ್ರಣ ಕುರಿತು ಜರುಗಿದ ತಾಂತ್ರಿಕ ಕಾರ್ಯಾಗಾರ
ಧಾರವಾಡ: ವಿಶ್ವ ರೇಬಿಸ್ ದಿನಾಚರಣೆಯ ಪ್ರಯುಕ್ತ ಧಾರವಾಡ ಪಶು ಆಸ್ಪತ್ರೆ ಆವರಣದಲ್ಲಿ ಸಾರ್ವಜನಿಕ ಆರೋಗ್ಯಕ್ಕಾಗಿ ರೇಬಿಸ್ ನಿಯಂತ್ರಣ ಕುರಿತಾದ ತಾಂತ್ರಿಕ ಕಾರ್ಯಗಾರವನ್ನು ಜಿಲ್ಲಾ ಆರೋಗ್ಯಧಿಕಾರಿ ಡಾ.ಎಸ್.ಎಮ್. ಹೊನಕೇರಿ ಉದ್ಘಾಟಿಸಿ, ಮಾತನಾಡಿದರು.
- ಪ್ರೊ. ಬರಗೂರು ಅವರ ದಿಟ್ಟ ಹೆಜ್ಜೆ – 25 ವರ್ಷಗಳ ಸಾರ್ಥಕ ಯಾನ!
- ಸಂಪುಟದಿಂದ ಹೊರಗಿಟ್ಟಿರುವುದು ನನಗೆ ಸಿಕ್ಕ ಪ್ರತಿಫಲವೇ?: ಬಿ ಆರ್ ಪಾಟೀಲ್
- ಸಂಪುಟದಲ್ಲಿ ಭ್ರಷ್ಟಾಚಾರಿಗಳು, ಪೇಮೆಂಟ್ ಕೋಟಾ ಮೂಲಕ ಅವಕಾಶ ಗಿಟ್ಟಿಸಿಕೊಂಡವರು ಇದ್ದಾರೆ: ಆರ್.ಅಶೋಕ
- ಬಿಜೆಪಿ ನಾಯಕರು ಸಂವಿಧಾನ ಓದಿದನ ನಂತರ ಕಾಂಗ್ರೆಸ್ ಲೆಟರ್ಹೆಡ್ ಓದಲಿ: ಬಿ.ಕೆ.ಹರಿಪ್ರಸಾದ್
- ನೀರು ಸತ್ಯಾಗ್ರಹ ಕೃತಕ ಬುದ್ಧಿಮತ್ತೆ ಮತ್ತು ಕೃಷಿ ಕುರಿತು ಗಂಭೀರ ಚರ್ಚೆ
ರೇಬಿಸ್ ರೋಗ ಒಂದು ಪ್ರಾಣಿಜನ್ಯ ರೋಗವಾಗಿದ್ದು, ಪ್ರಾಣಿ ಕಡಿತದ ನಂತರ ಲಸಿಕೆಯನ್ನು ಸರಿಯಾಗಿ ತೆಗೆದುಕೊಳ್ಳುವ ಮೂಲಕ ಮಾನವರ ರೇಬಿಸ್ ರೋಗವನ್ನು ಸಂಪೂರ್ಣವಾಗಿ ತಡೆಯಬಹುದು. ರೋಗ ನಿಯಂತ್ರಣ ಸಲುವಾಗಿ ಕಾರ್ಯ ಸಾಧಕ ಪರಿಹಾರ ಮಾರ್ಗಗಳನ್ನು ಹುಡುಕಲು ಕರೆ ನೀಡಿದರು.
ಕಾರ್ಯಗಾರದ ಅದ್ಯಕ್ಷತೆ ವಹಿಸಿದ್ದ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಎಸ್.ವಿ.ಸಂತಿ ಮಾತನಾಡಿ, ಜಿಲ್ಲೆಯ ಎಲ್ಲಾ ಪಶುವೈದ್ಯರು ಸೆಪ್ಟೆಂಬರ ತಿಂಗಳಿನಲ್ಲಿ ಶಾಲಾ-ಕಾಲೇಜುಗಳಲ್ಲಿ ನಡೆಸಿದ ರೇಬೀಸ್ ಜಾಗೃತಿ ಕಾರ್ಯಕ್ರಮದ ಬಗ್ಗೆ ತಿಳಿಸಿದರು.
ರೋಗದ ನಿಯಂತ್ರಣಕ್ಕಾಗಿ ಒಂದು ತಿಂಗಳವರೆಗೆ ಎಲ್ಲ ಸರ್ಕಾರಿ ಪಶು ಚಿಕಿತ್ಸಾಲಯಗಳಲ್ಲಿ ಸಾಕು ಪ್ರಾಣಿಗಳಾದ ನಾಯಿ ಮತ್ತು ಬೆಕ್ಕುಗಳಿಗೆ ಉಚಿತವಾಗಿ ನಾಯಿ ಹುಚ್ಚು ರೋಗದ ವಿರುದ್ದ ಲಸಿಕೆ ಹಾಕಲಾಗುವುದು ಎಂದು ತಿಳಿಸಿದರು. ಮತ್ತು ರೇಬಿಸ್ ರೋಗ ತಡೆಗಟ್ಟುವ ಮಾಹಿತಿಯ ಭಿತ್ತಿ ಪತ್ರಗಳನ್ನು ಸಭೆಯಲ್ಲಿ ಬಿಡುಗಡೆಗೊಳಿಸಿದರು.
ಡಾ. ಸುನಿಲ್ ಕುಮಾರ ಕೆ.ಎಮ್. ಅವರು ರೇಬಿಸ್ ರೋಗನಿರ್ಣಯ (ಡಯಗ್ನೋಸಿಸ್) ಮತ್ತು ರೋಗದ ನಿಯಂತ್ರಣದಲ್ಲಿ (ಕಂಟ್ರೊಲ್) ಆದ ಹೊಸ ವೈಜ್ಞಾನಿಕ ಬೆಳವಣಿಗೆಗಳ ಬಗ್ಗೆ ತರಬೇತಿ ನೀಡಿದರು. ಕಾರ್ಯಾಗಾರದಲ್ಲಿ ಭಾಗವಹಿಸಿದ ಎಲ್ಲ ಪಶುವೈದ್ಯರುಗಳಿಗೆ, ಸಿಬ್ಬಂದಿಗಳಿಗೆ ಸಭೆಯಲ್ಲಿ ರೇಬಿಸ್ ರೋಗ ನಿರೋದಕ ಲಸಿಕೆಯನ್ನು ಹಾಕಿಸಲಾಯಿತು.
ಮುಖ್ಯ ಅತಿಥಿಗಳಾಗಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಬಿ.ಎಲ್.ಪರಮೇಶ್ವರ ನಾಯಕ ಹಾಗೂ ಉಪನಿರ್ದೆಶಕ ಡಾ.ಪ್ರಮೋದ ಮೂಡಲಗಿ, ಡಾ.ಆರ್.ಎ.ಪಾಟೀಲ, ಡಾ.ಎಮ್.ಎನ್.ಪಾಟೀಲ, ಪಶುವೈದ್ಯಕೀಯ ಅಧ್ಯಕ್ಷ ಡಾ.ಕೃಷ್ಣಪ್ಪ ರಾಥೋಡ ಮತ್ತು ಇತರ ಸದಸ್ಯರು ಹಾಗೂ ಜಿಲ್ಲೆಯ ಎಲ್ಲಾ ಪಶುವೈದ್ಯರು ಉಪಸ್ಥಿತರಿದ್ದರು.




