ಬೆಂಗಳೂರು: ಡಾ ರಾಜಕುಮಾರ್ ಜನುಮ ದಿನದ ಅಂಗವಾಗಿ ಬಂಜಾರ ಲೇಖಕ ಬಾಲು ನಾಯ್ಕ್ ರಚಿಸಿರುವ ಪಂಚಪದಿ ಛಂದಸ್ಸಿನ ನೂತನ ಪ್ರಯೋಗವಾಗಿ ನಟ ʻಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಸಾರʼ 260 ಪುಟಗಳ ಪ್ರಥಮ ಕೃತಿಯನ್ನು ಅಶ್ವಿನಿ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿದರು. ಈ ಕೃತಿಗೆ ಮುನ್ನುಡಿ ಬರೆದು ಪ್ರೋತ್ಸಾಹ ನೀಡಿದ ಪುನೀತ್ ಜೊತೆ ನಟಿಸಿರುವ ಹಿರಿಯ ರಂಗತಜ್ಞ ಹಾಗೂ ಕರ್ನಾಟಕ ಸರ್ಕಾರದ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಡಾ. ಎ ಅರ್. ಗೋವಿಂದಸ್ವಾಮಿ ಉಪಸ್ಥಿರಿದ್ದರು. ಈ ಪುಸ್ತಕದ ಮುದ್ರಕ ಸನ್ ಸ್ಟಾರ್ ಪಬ್ಲಿಕೇಷನ್ ನ ಶೇಖರ್ ರೆಡ್ಡಿ, ಬೆಂಗಳೂರು ವಿಶ್ವವಿದ್ಯಾಲಯದ ಪರಿಸರ ತಜ್ಞ ಡಾ. ಡಿ ಪರಮೇಶ ನಾಯ್ಕ್ ಉಪಸ್ಥಿತರಿದ್ದರು.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ಈ ಸಂದರ್ಭದಲ್ಲಿ ಅಶ್ವಿನಿ ಪುನಿತ್ ರಾಜ್ ಕುಮಾರ್ ಮಾತನಾಡಿ, ಪುನೀತ್ ಅವರಿಗೆ ಬಡ ತಳಸಮುದಾಯಗಳ ಅಭಿವೃದ್ಧಿಯ ಬಗ್ಗೆ ಅತ್ಯಂತ ಒಲವಿತ್ತು. ಇಂತಹದೆ ಬಂಜಾರ ಸಮುದಾಯದ ಗ್ರಾಮೀಣ ಪ್ರತಿಭೆ ಬಾಲು ನಾಯಕ್ ಪುನೀತ್ ರಾಜ್ ಕುಮಾರ್ ಅವರ ಕುರಿತು ರಚಿಸಿದ ಕೃತಿಯನ್ನು ನೋಡಿ ಸಂತೋಷವಾಗಿದೆ. ರಾಜ್ಯದಲ್ಲಿರುವ ಬುಡಕಟ್ಟು ಹಿನ್ನೆಲೆಯ ಬಂಜಾರ ಸಮುದಾಯ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ಮಾಹಿತಿ ನನಗಿದೆ. ಇವರ ಶ್ರೇಯಸ್ಸಿಗೆ ಮುಂದಿನ ದಿನದಲ್ಲಿ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಜೊತೆ ಕೆಲಸ ನಿರ್ವಹಿಸಲು ಅಭಿಲಾಷೆ ಇದೆ ಎಂದರು.
ಈ ಸಂದರ್ಭದಲ್ಲಿ ಡಾ. ಎ.ಆರ್. ಗೋವಿಂದಸ್ವಾಮಿ ಮಾತನಾಡಿ, ಡಾ. ರಾಜ್ ಕುಮಾರ್, ಡಾ. ಪುನೀತ್ ರಾಜ್ ಕುಮಾರ್, ಡಾ. ಶಿವಣ್ಣ ಅವರ ಜೊತೆ ಅಭಿನಯಿಸಿದ ಬಗ್ಗೆ ಮೆಲುಕು ಹಾಕಿದರು. ಡಾ. ಪುನೀತ್ ರಾಜ್ ಕುಮಾರ್ ಒಬ್ಬರು ರಾಷ್ಟ್ರದ ಜನಪರ, ಸಮಾಜಮುಖಿ ನಾಯಕ ನಟರು. ವಾಸ್ತವವಾದ ಮತ್ತು ಸೈಕಲಾಜಿಕಲ್ ರಿಯಲಿಸಂ, ಆಕ್ರೋಬೆಟಿಕ್ ಅಭಿನಯ ಶೈಲಿ ಮೊದಲಿಗೆ ಮೈಗೂಡಿಸಿಕೊಂಡಿದ್ದ ರಾಷ್ಟ್ರದ ಏಕೈಕ ಕಲಾವಿದರು ಹಾಗೂ ಬಡವರ ಬಗ್ಗೆ ತಾಯಿ ಹೃದಯವನ್ನು ಹೊಂದಿದ್ದವರು ಎಂದರು.




