ಲಿಂಗಾಯತ ಚಳುವಳಿ ೨೦೧೭-೧೮ ಎರಡನೆಯ ಮುದ್ರಣಕ್ಕೆ.
ಲಿಂಗಾಯತ ಚಳುವಳಿ ೨೦೧೭-೧೧೮ ಪುಸ್ತಕ ಎರಡನೆಯ ಮುದ್ರಣ ಕಾಣುತ್ತಿದೆ. ಬಿಡುಗಡೆಯಾದ ನಾಲ್ಕಾರು ದಿನದಲ್ಲಿ ನಾನು ಅಮೇರಿಕೆಗೆ ಹೊರಟು ಹೋದೆ. ಅದ್ದರಿಂದ ಅನೇಕ ಸ್ನೇಹಿತರಿಗೆ ಗೌರವ ಪ್ರತಿ ತಲುಪಿಸಲಾಗಲಿಲ್ಲ. ‘ಪುಸ್ತಕ ಎಲ್ಲಿ ದೊರಕುತ್ತದೆ’ ಎಂದು ನನಗೆ ಓದುಗರು ಕೇಳುತ್ತಲೇ ಇದ್ದರು. ಪ್ರಕಾಶಕರ ವಿಳಾಸವನ್ನು ತಿಳಿಸುತ್ತ ಹೋದೆ. ಆದರೆ ಎಷ್ಟು ಓದುಗರಿಗೆ ಪುಸ್ತಕ ತಲುಪಿದೆಂದು ತಿಳಿದಿಲ್ಲ.
- ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಪೋಸ್ಟ್ ಕುರಿತು ಯೋಗೇಶ್ ಮಾಸ್ಟರ್ ಸ್ಪಷ್ಟೀಕರಣ
- ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆಗಾಗಿ ದೀರ್ಘಾವಧಿ ಯೋಜನೆ: ಕೃಷ್ಣ ಬೈರೇಗೌಡ
- ಹಾರಿಕಾ ಮಂಜುನಾಥ್ ವಿದೇಶಿ ವಿಶ್ವವಿದ್ಯಾಲಯಗಳಿಂದ ಡಿಗ್ರಿ ಪಡೆದಿದ್ದಾರೆಯೇ?
- ಪೌರ ಕಾರ್ಮಿಕರ ದಿರಿಸಿನಲ್ಲಿ ಡಿ ಕೆ ಶಿವಕುಮಾರ್
- ಹಾಸನದಲ್ಲಿ ಭಗತ್ ಸಿಂಗ್ ಜನ್ಮದಿನದ ಅಂಗವಾಗಿ ‘ನಾನೇಕೆ ನಾಸ್ತಿಕ’ ಸಮಾವೇಶ
ಉತ್ತರ ಕರ್ನಾಟಕದ ವಿಜಯಪುರ, ಕಲಬುರ್ಗಿ, ಬಾಗಲಕೋಟೆ, ಧಾರವಾಡ, ಬೆಳಗಾವಿಯ ಪುಸ್ತಕದ ಅಂಗಡಿಗಳಲ್ಲಿ ಪುಸ್ತಕಗಳಿಲ್ಲ ಎಂದು ನನಗೆ ಓದುಗರು ಹೇಳುತ್ತಲಿದ್ದಾರೆ. ಶಿವಮೊಗ್ಗದಲ್ಲೂ ಅದೆ ಕಥೆಯಂತೆ, ಅಲ್ಲಿಂದ ನಾಲ್ಕಾರು ಕರೆಗಳು ಬಂದಿದ್ದವು.
ಮೊದಲನೆಯ ಮುದ್ರಣದ ಸಮಯದಲ್ಲಿ ಪ್ರಕಾಶಕರು ನನಗೆ ೧೨೫ ಪ್ರತಿಗಳನ್ನು ಕೊಟ್ಟಿದ್ದರು. ಅದರಲ್ಲಿ ೨೫ ಪ್ರತಿಗಳು ಇಳಕಲ್ ಮತ್ತು ೨೫ ಪ್ರತಿಗಳು ಚಿಕ್ಕೋಡಿಯ ಬಿಡುಗಡೆ ಸಮಾರಂಭದಲ್ಲಿ ಗೌರವಪ್ರತಿ ಎಂದು ಖರ್ಚಾಗಿದ್ದವು.

ಕೆಲವೇ ಕೆಲವು ಪ್ರತಿಗಳನ್ನು ಬಿಡುಗಡೆಯ ಸಮಯದಲ್ಲಿ ಸ್ನೇಹಿತರಿಗೆ ಕೊಟ್ಟಿರುವೆ. ಪತ್ರಿಕಾ ಮಿತ್ರರಿಗೆ ಇನ್ನೂ ತಲುಪಿಸಿಲ್ಲ. ಶಾಸಕರಿಗೆ, ರಾಜಕೀಯ ಸ್ನೇಹಿತರಿಗೆ ಪ್ರತಿಗಳು ತಲುಪಿಲ್ಲ. ಅನೇಕ ಖಾಸಾ ಸ್ನೇಹಿತರಿಗೆ ಗೌರವ ಪ್ರತಿ ಇನ್ನೂತಲುಪಿಲ್ಲ. ಕಾರಣ ನನ್ನಲ್ಲಿ ಪ್ರತಿಗಳು ಉಳಿದಿಲ್ಲ.
ಎರಡನೆಯ ಮುದ್ರಣಕ್ಕೆ ಪ್ರಕಾಶಕರು ಬದಲಾಗಲಿದ್ದಾರೆ. ಪುಸ್ತಕದ ಬೆಲೆಯನ್ನು ಕಡಿಮೆ ಮಾಡಿ ಹೆಚ್ಚು ಜನರಿಗೆ ತಲುಪಿಸುವ ಗುರಿ ಹೊಂದಿರುವೆ. ನನಗೇನು ಪುಸ್ತಕ ಮಾರಿ ಲಾಭ ಗಳಿಸಿ ಜೀವನ ಮಾಡಬೇಕಾಗಿಲ್ಲ.
೪೫೦ ಪುಟಗಳ ಕೇಸ್ ಬೈಂಡಿಂಗ್ ಪುಸ್ತಕವನ್ನು ೨೫೦ ರೂಪಾಯಿಗೆ ಮಾರಬೇಕೆಂದು ವಿನಂತಿಸಿಕೊಂಡಿರುವೆ. ೧೦-೧೫% ಕಮೀಷನ್ ದಲ್ಲಿ ಕೆಲಸಮಾಡಿ ಎಂದು ಮಾರಾಟಗಾರರನ್ನು ವಿನಂತಿಸಿಕೊಳ್ಳಬೇಕು.
ಪುಸ್ತಕದ ಬಗ್ಗೆ ಅದ್ಭುತ ಪ್ರತಿಕ್ರಿಯೆ ಬಂದಿವೆ. ಬಹಳ ವಿದ್ವಾಂಸರು ಮೆಚ್ಚಿಕೊಂಡು ಪ್ರತಿಕ್ರಿಯೆ ನೀಡಿದ್ದಾರೆ. ಓದುಗರಾದ ತಮ್ಮ ಆಶೀರ್ವಾದ ಸದಾ ಇರಲಿ ಎಂದು ಬಯಸುತ್ತ.
ಶರಣು ಶರಣಾರ್ಥಿಗಳು.
– ಜಿ ಬಿ ಪಾಟೀಲ್, ಪ್ರಧಾನ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ




