ದರ್ಗಾ ಮಾಳ, ರಾಮಯ್ಯ, ಹುಸೇನಜ್ಜ, ಬುಡ್ಡಿ ದೀಪ, ಆದಿಮದ ಬಿಡಿ ಬಿಡಿ ಚಿತ್ರಗಳು

1 year ago

ದರ್ಗಾ ಮಾಳದ ಚಿತ್ರಗಳು ಪುಸ್ತಕದ ನೆಪದಲ್ಲಿ

ದರ್ಗಾ ಮಾಳ, ರಾಮಯ್ಯ, ಹುಸೇನಜ್ಜ, ಬುಡ್ಡಿ ದೀಪ, ಆದಿಮದ ಬಿಡಿ ಬಿಡಿ ಚಿತ್ರಗಳು

ಒಂದು ದೇಶದ ವರ್ತಮಾನದಲ್ಲಿ ಯಾವ ಸಮುದಾಯ/ಜನರು ಆತಂಕದಲ್ಲಿ ಬದುಕುವ ಪರಿಸ್ಥಿತಿ ಇರುತ್ತದೋ ಅಂಥವರ ಪರವಾಗಿ ಇರುವುದು, ಬರೆಯುವುದು ಮತ್ತು ಅವರನ್ನು ಸೆಲೆಬ್ರೇಟ್ ಮಾಡುವುದು ಒಬ್ಬ ಸೂಕ್ಷ್ಮ ಬರಹಗಾರನ ಕರ್ತವ್ಯ. ಆ ಕೆಲಸ ರಾಮಣ್ಣ ಮಾಡಿದ್ದಾರೆ. ಹಾಗಾಗಿಯೇ ಅಲ್ಲಿ ಹುಸೇನಜ್ಜನ ನೆನಪಿದೆ. ದರ್ಗಾ ಮಾಳದ ಅನೇಕ ಮುಸಲ್ಮಾನ್ ಬಂಧುಗಳು ಅಕ್ಷರ ರೂಪದಲ್ಲಿ ಹೊಸ ಜೀವ ಪಡೆದಿದ್ದಾರೆ. It is timely. Now Kotiganahalli Ramaih is not just politically correct but he is correct emotionally as well.

ಹಾಗಾಗಿಯೇ ಚಿಂತಕ ನೆಲ್ಲುಕುಂಟೆ ವೆಂಕಟೇಶ್ ಈ ಪುಸ್ತಕ ಗ್ಲೋಬಲ್ ಲೈಬ್ರರಿಗಳಲ್ಲಿ ಇರಬೇಕು ಎಂದಿರಬಹುದು.

ಈ ಪುಸ್ತಕ ಬರೆದ ರಾಮಣ್ಣನವರಿಗೆ ಅಭಿನಂದಿಸುವುದೂ ಕೃತಕವಾದೀತು. It is not just a craft, but it is his life style and living expression.

Thank You ಕೊಂಡ ರಾಮನ್ನ….

ಕ್ರೊನಲಾಜಿ

ಮಾರ್ಚ್ ಮೂರನೆಯ ವಾರ, ಅದೊಂದು ದಿನ ರಾಮಣ್ಣ ಫೋನ್ ಮಾಡಿದರು. ಗೆಳೆಯ ವೆಂಕಟೇಶ್ ಕಚೇರಿಯಲ್ಲಿ ಸೇರಿದೆವು. ಅವರು ಬೇರೆ ಬೇರೆ ಸಂದರ್ಭಗಳಲ್ಲಿ ಬರೆದಿದ್ದು, ಚದುರಿ ಹೋಗಿದ್ದ ಸುಮಾರು ೩೨ ಮಕ್ಕಳ ನಾಟಕಗಳು ಮತ್ತೆ ಸಿಕ್ಕಿವೆ. ಅದರ ಜೊತೆ ಬಿಡಿ ಬರಹಳು ಕೆಲವು ಮುದ್ರಿಸಬೇಕಿದೆ ಎಂಬ ಪ್ರಸ್ತಾಪವಿಟ್ಟರು. ಕುಪ್ಪಂ ವಿವಿಯ ಪ್ರಸಾದ್ ಗೆ ಮಾತನಾಡಿ, ನಾನೂ ಮಾತನಾಡುತ್ತೇನೆ ಎಂದೆ. ಕೂಡಲೇ ಪ್ರಸಾದ್ ಗೆ ಫೋನ್ ಮಾಡಿದ ರಾಮಣ್ಣನವರ ಪ್ರಸ್ತಾಪಕ್ಕೆ ಪ್ರಸಾದ್ ಒಪ್ಪಿಗೆ ಸೂಚಿಸಿದರು. ಆ ಕೆಲಸಕ್ಕೆ ಇನ್ನೂ ಚಾಲನೆ ಸಿಕ್ಕಿಲ್ಲ. ಅದೇ ದಿನ ದರ್ಗಾ ಮಾಳದ ಚಿತ್ರಗಳು ಪುಸ್ತಕಕ್ಕೆ ಕಲಾವಿದ ರಾಠೋಡ್ ಅವರನ್ನು ಚಿತ್ರ ಬರೆಯಲು ಕೇಳಿದೆವು. ಸಮಯದ ಅಭಾವದಿಂದ ರಾಠೋಡ್ ಆ ಕೆಲಸ ಮಾಡಲಾಗಲಿಲ್ಲ. ಕಲಾವಿದ ಮನು ಆ ಕೆಲಸವನ್ನು ಸಮರ್ಥವಾಗಿ ಮಾಡಿದ್ದಾರೆ.
**
ಮೂರ್ಲಾಕು ದಿನಗಳ ತರುವಾಯ ಮೈಸೂರಿನಿಂದ ಜನ್ನಿ ಮತ್ತು ವೈಜಿ ಫೋನ್ ಮಾಡಿ ’ಏಪ್ರಿಲ್ ಎಂಟರಂದು ರಾಮಣ್ಣನ ಪುಸ್ತಕ ಬಿಡುಗಡೆಗೆ ಹೋಗಬೇಕು. ಏಳನೇ ತಾರೀಖು ಹೋಗಿದ್ದು ಬರುವುದೋ ಎಂಟಕ್ಕೋ ಎಂದು ಕೇಳಿದರು. ಸಾರ್ ಪುಸ್ತಕ ಪ್ರಿಂಟ್ ಆಗಿದೆಯಾ., ಮೊನ್ನೆ ಅಷ್ಟೇ ಪ್ರಸ್ತಾಪ ಮಾಡಿದ್ದರೆಂದೆ. ಇದಾದ ಮೇಲೆ….
**
ಮಾರ್ಚ್ ೨೮: ರಾಮಣ್ಣ ಫೋನ್ ಮಾಡಿ, ಬಾಸೂ… ಬೆಂಗಳೂರಿಕಿ ವಸ್ತಾವುಂಡಾನು ಸಿಕ್ತಾರ ? ಅಂದರು. ರಾಂಡಿ ಸಾರ್ ಕಲಸ್ತಾಮ್ ಅಂದೆ. ವೆಂಕಟೇಶ್ ಅವರ ಆಫೀಸಿನಲ್ಲಿ ಭೇಟಿಯಾದೆವು. ಅಂದು ಅವರಿಗಿದ್ದದ್ದು ಎರಡು ಕೆಲಸ. ದರ್ಗಾ ಮಾಳದ ಕಥೆಗಳು ಪ್ರೂಫ್ ಹಾಕುವುದು ಮತ್ತು ಆರ್ಟ್ಸಿಸ್ಟ್ ವಿಷ್ಣು ಭೇಟಿಯಾಗುವುದು. ಮೊದಲನೆಯ ಕೆಲಸವನ್ನು ಪ್ರೆಸ್ ಕ್ಲಬ್ ನಲ್ಲಿ ಅವರಿಗಿಷ್ಟವಾದ ಜಾಗದಲ್ಲೇ ಕುಳಿತು ಮುಗಿಸಿದರು. ಎರಡನೆಯ ಕೆಲಸ ಮುಂದಕ್ಕೋಯಿತು. ರಾತ್ರಿವರೆಗೆ ನಮ್ಮೊಂದಿಗಿದ್ದು ತಮ್ಮ ಸ್ನೇಹಿತರ ಮನೆಗೆ ಹೊರಟರು.
**
ಅತ್ಯಂತ ಕಡಿಮೆ ಸಮಯದಲ್ಲಿ ಗುರು ಪುಸ್ತಕವನ್ನು ಅಚ್ಚುಕಟ್ಟಾಗಿ ಮುದ್ರಿಸಿದ್ದಾರೆ. ಅಂದು ರಾಮಣ್ಣನ ಕೈಲಿದ್ದ ಪ್ರಿಂಟ್ ಔಟ್ ನಲ್ಲಿದ್ದ ಕೆಲವು ಚಿತ್ರಗಳು ಬದಲಾಗಿವೆ. ಹೊಸ ಚಿತ್ರಗಳು ಬಂದಿವೆ. ಗುಡ್ ಜಾಬ್ ಗುರುಪ್ರಸಾದ್. ಅಭಿನಂದನೆಗಳು.
**
ಏಪ್ರಿಲ್ ೮ ರಂದು ನಾನು ಶಿವಮೊಗ್ಗದಿಂದ ಬೆಳಿಗ್ಗೆ ಹೊರಟು ಬೆಂಗಳೂರಿಗೆ ಬಂದೆ. ಜನ್ನಿ ಇತ್ತ ಮೈಸೂರಿನಿಂದ ಬಂದಿದ್ದರು. ವೈಜಿ, ಜನ್ನಿ, ವೆಂಕಟೇಶ್, ಸಿದ್ದ ಎಲ್ಲರೂ ಬೆಟ್ಟಕ್ಕೆ ಹೋದೆವು. ರಾಮಣ್ಣನ ಶಿಷ್ಯರು, ಅಭಿಮಾನಿಗಳು, ಕ್ರಿಟಿಕ್ಸ್ ಎಲ್ಲರೂ ಸೇರಿದ್ದರು.. ಹಸಿರು ಶಾಲು ಹೆಗಲಿಗೇರಿಸಿದ್ದ ರಾಮಣ್ಣ ನಮ್ಮನ್ನ ಬರಮಾಡಿಕೊಂಡರು. ವೆಂಕಟೇಶ್ ಬಂದಿದ್ದು ಅವರ ಖುಷಿ ಹೆಚ್ಚಾಗಲು ಕಾರಣವಾಯಿತು. ( ವೆಂಕಟೇಶ್ ಮತ್ತು ರಾಮಣ್ಣ ನವರ ಜರ್ನಿ ಒಂದು ಪುಸ್ತಕದ ವಸ್ತು, ಆ ಬಗ್ಗೆ ಖುದ್ದು ರಾಮಣ್ಣ ಅಥವಾ ವೆಂಕಟೇಶ್ ಬರೆಯಬೇಕು. ಅವರೀರ್ವರ ಒಡನಾಟ, ಕೆಲಸಗಳ ಬಗ್ಗೆ ನಾನು ಹತ್ತಿರದಿಂದ ಬಲ್ಲೆ)
**
ರಾಮಣ್ಣನ ಕನಸಿನ ಅಂಬೇಡ್ಕರ್ ಲೈಬ್ರರಿಯ ಎದುರು, ಅವರ ಮನೆ ಮತ್ತು ಕಾರ್ಯಾಲಯ ಬುಡ್ಡಿ ದೀಪದ ಪಕ್ಕದ ಅಂಗಳದಲ್ಲಿ, ಬಾವಿ ಕಟ್ಟೆಯ ಮೇಲೆ, ವೇದಿಕೆ ಪಕ್ಕದಲ್ಲಿ ಚಾಪೆಯ ಮೇಲೆ ಸುಮಾರು ನೂರಿನ್ನೂರು ಮಂದಿ ಇದ್ದೆವು. ದರ್ಗಾ ಮಾಳದ ಚಿತ್ರಗಳು ಬಿಡುಗಡೆ ಆಯಿತು. ಪುರುಶೋತ್ತಮ ಬಿಳಿಮಲೆ ರಾಮಣ್ಣನಂತಃ ಒಬ್ಬ ಅನಾರ್ಕಿಸ್ಟ್ ಮಾತ್ರ ಇಂಥ ಪುಸ್ತಕ ಬರೆಯಲು ಸಾಧ್ಯವೆಂದು ಅಭಿಮಾನದಿಂದ ಹೇಳಿದರು. ಜೊತೆಗೆ ರಾಮಯ್ಯ ಅಂಬೇಡ್ಕರ್ ಅವರನ್ನು ಬೆಳೆಸುತ್ತಿರುವುದಾಗಿಯೂ ಹೇಳಿ ರಾಮಣ್ಣದ ಬದ್ಧತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
**
ಚಿಂತಕ ನೆಲ್ಲುಕುಂಟೆ ವೆಂಕಟೇಶ್ ಪುಸ್ತಕದಲ್ಲಿ ಉತ್ಪ್ರೇಕ್ಷೆಗಳು ಉಳಿದಿರುವ ಬಗ್ಗೆ ಹೇಳಿ ಎಡಿಟ್ ನಲ್ಲಿ ಆಗಿರಬಹುದಾದ ಅನಾಹುತವಿರಬಹುದೆಂಬ ಅನುಮಾನ ವ್ಯಕ್ತಪಡಿಸಿದರು. ಪಾತ್ರಗಳು ಸಹಜವಾಗಿ ಆರ್ಗ್ಯಾನಿಕ್ ಆಗಿ ಬೆಳೆಯಬೇಕಾದ ಹೆಚ್ಚುಗಾರಿಕೆಯನ್ನೂ ಮನಗಾಣಿಸಿದರು.

ಬೆಟ್ಟದ ಮೇಲಿರುವ ರಾಮಣ್ಣನಿಗೆ ಸಮಾಜದಲ್ಲಿ ಅನೇಕ ಮಂದಿಯನ್ನು ನೋಡುವ ಒಂದು ಏರಿಯಲ್ ವ್ಯೂ ಕೂಡಾ ಸಿಕ್ಕಿದೆ ಎಂದು ಹೇಳಿದರಲ್ಲದೆ ತೇಜಸ್ವಿ ಅವರ ಪರಿಸರದ ಕಥೆಗಳ ಮತ್ತಿತರ ಪುಸ್ತಕಗಳ ಮುಂದುವರಿಕೆ ಭಾಗವೆಂದೂ ಅಭಿಮಾನದಿಂದ ಮೆಚ್ಚಿಕೊಂಡರು. ನಮ್ಮೆಲ್ಲರ ಪ್ರೀತಿಯ ರಾಮಣ್ಣನನ್ನು “ಬೆಟ್ಟದ ಜೀವ” ಎಂದು ಹೇಳಿ ನಮಗೂ ಖುಷಿ ತಂದರು.
**
ಇನ್ನೊಂದು ವಿಷಯ: ರಾಮಯ್ಯ ಹಲವು ಕಾರಣಗಳಿಂದಾಗಿ ಆದಿಮ ಜೊತೆಯಲ್ಲಿ ಇಲ್ಲವಾಗಿ ಅನೇಕ ವರ್ಷಗಳೇ ಕಳೆದಿದ್ದರೂ ಸಮಾರಂಭದಲ್ಲಿ ರಾಮಯ್ಯನವರ ಹೆಸರು ಆದಿಮದೊಂದಿಗೇ ಹಲವು ಭಾರಿ ಪ್ರಸ್ತಾಪವಾಯಿತು. ರಾಮಯ್ಯ ಆದಿಮದಲ್ಲಿ ದೈಹಿಕವಾಗಿ ಇಲ್ಲವಾದರೂ ಆದಿಮ ಎಂದರೆ ರಾಮಯ್ಯ, ರಾಮಯ್ಯ ಎಂದರೆ ಆದಿಮೆ ಎಂಬುದು ಪ್ರತಿಧ್ವನಿಸಿತು. ಅದು ಸರಿ ಕೂಡಾ. ಅಂದಹಾಗೆ ಮೊನ್ನೆ ನಾವೆಲ್ಲಾ ಸೇರಿದ್ದದ್ದು ರಾಮಯ್ಯನವರ ಬುಡ್ಡಿ ದೀಪ ಸಂಸ್ಥೆಯ ಅಂಗಳದಲ್ಲಿ.
**
ಕಡೆಯದಾಗಿ : ಒಂದು ದೇಶದ ವರ್ತಮಾನದಲ್ಲಿ ಯಾವ ಸಮುದಾಯ/ಜನರು ಆತಂಕದಲ್ಲಿ ಬದುಕುವ ಪರಿಸ್ಥಿತಿ ಇರುತ್ತದೋ ಅಂಥವರ ಪರವಾಗಿ ಇರುವುದು, ಬರೆಯುವುದು ಮತ್ತು ಅವರನ್ನು ಸೆಲೆಬ್ರೇಟ್ ಮಾಡುವುದು ಒಬ್ಬ ಸೂಕ್ಷ್ಮ ಬರಹಗಾರನ ಕರ್ತವ್ಯ. ಆ ಕೆಲಸ ರಾಮಣ್ಣ ಮಾಡಿದ್ದಾರೆ. ಹಾಗಾಗಿಯೇ ಅಲ್ಲಿ ಹುಸೇನಜ್ಜನ ನೆನಪಿದೆ. ದರ್ಗಾ ಮಾಳದ ಅನೇಕ ಮುಸಲ್ಮಾನ್ ಬಂಧುಗಳು ಅಕ್ಷರ ರೂಪದಲ್ಲಿ ಹೊಸ ಜೀವ ಪಡೆದಿದ್ದಾರೆ. It is timely. Now Kotiganahalli Ramaih is not just politically correct but he is correct emotionally as well.

ಹಾಗಾಗಿಯೇ ಚಿಂತಕ ನೆಲ್ಲುಕುಂಟೆ ವೆಂಕಟೇಶ್ ಈ ಪುಸ್ತಕ ಗ್ಲೋಬಲ್ ಲೈಬ್ರರಿಗಳಲ್ಲಿ ಇರಬೇಕು ಎಂದಿರಬಹುದು.

ಈ ಪುಸ್ತಕ ಬರೆದ ರಾಮಣ್ಣನವರಿಗೆ ಅಭಿನಂದಿಸುವುದೂ ಕೃತಕವಾದೀತು. It is not just a craft, but it is his life style and living expression.

Thank You ಕೊಂಡ ರಾಮನ್ನ….

– ನಾಗೇಶ್ ಕಾಳೇನಹಳ್ಳಿ, ಹಿರಿಯ ಪತ್ರಕರ್ತರು

Leave a Reply