ಗಾಂಧಿನಗರದ ಕಾಟನ್ ಪೇಟೆ ಪ್ರಮುಖ ಬೀದಿಗಳಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಆನೆಯ ಮೇಲೆ ಶಿವಲಿಂಗ ಮೂರ್ತಿ ಭವ್ಯ ಮೆರವಣಿಗೆ
ಬೆಂಗಳೂರು: ಗಾಂಧಿನಗರ ವಿಧಾನಸಭಾ ಕ್ಷೇತ್ರದ ಕಾಟನ್ ಪೇಟೆ ತುಳಸಿ ತೋಟದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಲೋಕ ಕಲ್ಯಾಣರ್ಥಕ್ಕಾಗಿ ಸಾಧು ಸಂತರು, ನಾಗಸಾಧುಗಳು, ಅಘೋರಿಗಳಿಂದ ಮಹಾಶತರುದ್ರಯಾಗ ಮತ್ತು ಕಾಟನ್ ಪೇಟೆ ಪ್ರಮುಖ ಬೀದಿಗಳಲ್ಲಿ ಆನೆ ಮೇಲೆ ಶಿವಲಿಂಗ ಇಟ್ಟು ಪ್ರಮುಖ ರಾಜಬೀದಿಗಳಲ್ಲಿ ಮೆರವಣಿಗೆ ಕಾರ್ಯಕ್ರಮ ನಡೆಯಿತು.
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
ಸಾಧು, ಸಂತರು, ನಾಗಸಾಧುಗಳು, ಅಘೋರಿಗಳು, ಮಹರ್ಷಿ ಆನಂದ್ ಗುರೂಜಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಕಾಟನ್ ಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಮೂರ್ತಿ ಮಹಾಶತ್ರರುದ್ರಯಾಗದಲ್ಲಿ ಭಾಗವಹಿಸಿದ್ದರು.
ಮಹರ್ಷಿ ಆನಂದ್ ಗುರೂಜಿ ಮಾತನಾಡಿ, ನಾವು ಮಾಡಿದ ಪಾಪ, ಕರ್ಮದಿಂದ ಮುಕ್ತಿ ಪಡೆಯಲು ಮತ್ತು ಪುಣ್ಯ ಪ್ರಾಪ್ತಿ ಮಾಡಲು ಶಿವ ನಾಮಸ್ಮರಣೆ ಮಾಡಬೇಕು. ನಾಗಸಾಧುಗಳು, ಅಘೋರಿಗಳ ಬಂದಿರುವುದರಿಂದ ಸ್ಥಳವು ಪುಣ್ಯಸ್ಥಳವಾಗಿದೆ ಎಂದರು.
ಭಾರತೀಯ ಹಿಂದೂ ಸಂಪ್ರಾದಯದ ಶಿವ ಧ್ಯಾನ ಮಾಡುವುದರಿಂದ 72 ಸಾವಿರ ನರ ನಾಡಿಗಳು ಜಾಗೃತವಾಗುತ್ತದೆ ಎಂದರು.
ದಿನೇಶ್ ಗುಂಡೂರಾವ್ ಮಾತನಾಡಿ, ಉತ್ತರಪ್ರದೇಶದಿಂದ ಸಾಧು, ಸಂತರು ಮತ್ತು ಅಘೋರಿಗಳು ನಾಡಿನ ಜನರಿಗೆ ಆಶೀರ್ವಾದ ಮಾಡಲು ಬಂದಿದ್ದಾರೆ. ರಾಜ್ಯದಲ್ಲಿ ಸುಖ, ಶಾಂತಿ ನೆಮ್ಮದ್ದಿ ಲಭಿಸಲಿ ಹಾಗೂ ರೈತರಿಗೆ ಉತ್ತಮ ಮಳೆ, ಬೇಳೆಯಾಗಲಿ ಎಂದು ಹೋಮ ಮಾಡಲಾಗುತ್ತಿದೆ. ಮಹಾಶಿವನ ಆಶೀರ್ವಾದ, ಕೃಪೆ ಎಲ್ಲರ ಮೇಲಿರಲಿ ಎಂದರು.
ಭವ್ಯ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ವೀರಗಾಸೆ ಮತ್ತು ವಿವಿಧ ಕಲಾತಂಡಗಲು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತಾದಿಗಳು ಮತ್ತು ಮಾಜಿ ಪಾಲಿಕೆ ಸದಸ್ಯ ರಾಮಚಂದ್ರ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸರವಣನ್, ಗ್ಯಾರಂಟಿ ಯೋಜನೆಗಳು ಅನುಷ್ಠಾನ ಸಮಿತಿ ಅಧ್ಯಕ್ಷ ಉಮೇಶ್ ಬಾಬು, ಕಾಂಗ್ರೆಸ್ ಪಕ್ಷದ ಮುಖಂಡ ರಘು, ನವೀನ್ ಕುಮಾರ್ ರಾಥೋಡ್, ರಾಜ್ ಕಾರ್ತಿಕ್ ಹಾಜರಿದ್ದರು.
ಬಂದ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಮತ್ತು ಹಾಸ್ಯ ರಸದೌತಣ ನಗೆ ಜಾಗರಣೆ ಕಾರ್ಯಕ್ರಮದಲ್ಲಿ ಎಂ.ಎಸ್.ನರಸಿಂಹಮೂರ್ತಿ, ಪ್ರೊ.ಕೃಷ್ಣೆಗೌಡ, ದಯಾನಂದ್, ಮಿಮಿಕ್ರಿಗೋಪಿರವರ ಕಾರ್ಯಕ್ರಮಗಳು ನಡೆದವು.










