ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘದಿಂದ ಪ್ರತಿಭಟನೆ

1 year ago

ಕೆಪಿಸಿಎಲ್ 622ಎ.ಇ. ಮತ್ತು ಜೆ.ಇ. ನೇಮಕಾತಿ ಆದೇಶ ನೀಡಬೇಕು

ಬೆಂಗಳೂರು: ಫ್ರೀಡಂ ಪಾರ್ಕ್ ನಲ್ಲಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘದ ವತಿಯಿಂದ  ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ಎ.ಇ. ಮತ್ತು ಜೆ.ಇ. ಇಂಜಿನಿಯರ್ ಕೆಮಿಸ್ಟ್ ಕೆಮಿಕಲ್ ಸೂಪರ್ ವೈಸರ್ ನೇಮಕಾತಿ ಪರೀಕ್ಷೆಯಲ್ಲಿ ಉತೀರ್ಣರಾದರು ನೇಮಕಾತಿ ಪತ್ರ ನೀಡಲು ಮೀನಮೇಷ ಏಣಿಸುತ್ತಿರುವ ವಿರುದ್ಧ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪ್ರತಿಭಟನೆ ಮಾಡಿದರು.

ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘದ ಅದ್ಯಕ್ಷ ಕಾಂತ್ ಕುಮಾರ್, ಉಪಾಧ್ಯಕ್ಷ ಶ್ರೇಯಸ್, ಪ್ರಧಾನ ಕಾರ್ಯದರ್ಶಿ ಸಂಜಯ್ ಕುಮಾರ್, ಕಾರ್ಯದರ್ಶಿ ಅಭಿಲಾಶ, ಉತೀರ್ಣರಾದ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

KPCL -2017 ರ ನೇಮಕಾತಿ ಅಧಿಸೂಚನೆಯ 622 AE JE ಕೆಮಿಸ್ಟ್ ಕೆಮಿಕಲ್ ಸೂಪರ್ವೈಸರ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಉಂಟಾಗಿರುವ ಕಾನೂನು ತೊಡಕುಗಳನ್ನು ನಿವಾರಿಸಿ ಈ ಕೂಡಲೇ ಪ್ರಕ್ರಿಯೆ ಪೂರ್ಣಗೊಳಿಸಿ ಆದೇಶ ಪತ್ರ ನೀಡಬೇಕು ಎಂದು ಆಗ್ರಹಿಸಿದರು.

KPCL ಸಂಸ್ಥೆಯು ವಿವಿಧ ವೃಂದದ 622 ಹುದ್ದೆಗಳಿಗೆ 2017 ರಲ್ಲಿ ಅಧಿಸೂಚನೆ ಹೊರಡಿಸಿತ್ತು. ಹೈಕೋರ್ಟ್‌ ಆದೇಶದಂತೆ ದಿನಾಂಕ 18-02-2024 ರಲ್ಲಿ KEA ಮುಖಾಂತರ ಮರುಪರೀಕ್ಷೆ ಯಾವುದೇ ರೀತಿ ಅಕ್ರಮವಿಲ್ಲದೇ ಪಾರದರ್ಶಕವಾಗಿ ಪರೀಕ್ಷೆ ನಡೆದು ಫಲಿತಾಂಶ ಪ್ರಕಟಿಸಿತ್ತು.

ನಂತರ ಕೆಪಿಸಿಎಲ್‌ ಸಂಸ್ಥೆಯು ದಾಖಲಾತಿ ಪರೀಶೀಲನೆ ನಡೆಸಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಸೆಪ್ಟಂಬರ್-2024 ರಲ್ಲಿ ಪ್ರಕಟಿಸಿದ್ದರು. ಆದರೇ ನೇಮಕಾತಿಗೆ ಕಾನೂನು ತೊಡಕಿನ ನೆಪ ಹೇಳಿ ಕಳೆದ 5 ತಿಂಗಳಿನಿಂದ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸದೇ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಕಿಡಿಕಾರಿದರು.

ಈಗಾಗಲೇ 8 ವರ್ಷಗಳ ವಿಳಂಬವಾಗಿದ್ದು, ನಿರುದ್ಯೋಗದ ಸಮಸ್ಯೆ, ಕೌಟಂಬಿಕ ಸಮಸ್ಯೆಗಳಿಂದ ನೊಂದುಬೆಂದು ನರಕಯಾತನೆ ಅನುಭವಿಸುತ್ತಿದ್ದೇವೆ. ಕಷ್ಟಪಟ್ಟು ಸಾಕಿ, ಸಲುಹಿ, ಓದಿಸಿದ ನಮ್ಮ ತಂದೆ ತಾಯಿಯರಿಗೆ ಅಧಾರವಾಗಬೇಕಿದ್ದ ನಾವು ಭಾರವಾಗಿದ್ದೇವೆ ಎಂದು ಅಲವತ್ತುಕೊಂಡರು.

ಎಲ್ಲಾ ಅಭ್ಯರ್ಥಿಗಳ ಜೀವನ ಅತಂತ್ರ ಸ್ಥಿತಿಯಲ್ಲಿದೆ ಹಾಗೂ ಎಲ್ಲರ ಭವಿಷ್ಯ ಕೆಪಿಸಿಎಲ್ ನೇಮಕಾತಿಯ ಮೇಲೆಯೇ ನಿರ್ಧಾರವಾಗಿದೆ. ಈ ಕೂಡಲೇ ನೇಮಕಾತಿ ಪೂರ್ಣಗೊಳಿಸಿ ಆದೇಶ ಪ್ರತಿ ನೀಡಬೇಕೆಂದು ಮಾನ್ಯ ಮುಖ್ಯಮಂತ್ರಿಗಳಿಗೆ ಮತ್ತು ಇಂಧನ ಸಚಿವರಿಗೆ ಮನವಿ ಸಲ್ಲಿಸಿದರು.

Leave a Reply