ಕೆಪಿಸಿಸಿ ಸೇವಾದಳ ರಾಜ್ಯ ಪದಾಧಿಕಾರಿಗಳ ಸಭೆ
ಬೆಂಗಳೂರು: ಕೆಪಿಸಿಸಿ ಕಛೇರಿಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳ ರಾಜ್ಯ ಪದಾಧಿಕಾರಿಗಳ ಸಭೆ ನಡೆಯಿತು.
- ಎನ್ಜಿಟಿಯಲ್ಲಿ ವಕೀಲರನ್ನು ನೇಮಿಸಿ ಹೋರಾಟ ಮಾಡಬೇಕು: ಆರ್.ಅಶೋಕ
- ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
- ಮೈಸೂರು ದಸರಾ: ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ
- ಪೌರಕಾರ್ಮಿಕರ ದಿನಾಚರಣೆ ಪ್ರಯುಕ್ತ ಕಸ ಸಂಗ್ರಹಣೆ ಇಲ್ಲ
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
ಸೇವಾದಳ ರಾಜ್ಯ ಮುಖ್ಯ ಸಂಘಟಕ ಎಂ.ರಾಮಚಂದ್ರ, ರಾಜ್ಯ ಮಹಿಳಾ ಸಂಘಕರಾದ ಗಿರೀಜಾ ಹೂಗಾರ್, ಸೇವಾದಳ ಕರ್ನಾಟಕದ ಉಸ್ತುವಾರಿ ಸಂಗ್ರಾಮ್ ತಾವಡೆ, ಸಹ ಉಸ್ತುವಾರಿ ವೇಣುಗೋಪಾಲ್, ಕಾರ್ಯಾಧ್ಯಕ್ಷ ವಿ.ವಿ.ತುಳಸಿಗೇರಿ, ಸೇವಾದಳ ಯುವ ಬ್ರಿಗೇಡ್ ಅಧ್ಯಕ್ಷ ಜುನೇದ್ ಕಾರ್ಯಕಾರಿಣಿ ಸಭೆ ಉದ್ಘಾಟನೆ ಮಾಡಿದರು.
ಎಂ.ರಾಮಚಂದ್ರ ಮಾತನಾಡಿ, ಸೇವಾದಳ ರಾಜಕೀಯ ಸಂಘಟನೆ ಮಾಡಬೇಕು ಅಥವಾ ಸೇವಾ ಸಂಘಟನೆ ಮಾಡಬೇಕ ಎಂಬುದು ಚರ್ಚಿಸಲಾಯಿತು. ಸೇವಾದಳದಿಂದ ರಾಜಕೀಯದಲ್ಲಿ ಸಂಘಟನೆ ಹಾಗೂ ಜನ ಸೇವೆ ಮಾಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ ಎಂದರು.
ಅಧಿಕಾರ ಶಾಶ್ವತ ಅಲ್ಲ, ಜನ ಸೇವೆ ಮತ್ತು ನಿಷ್ಟೆ, ಶ್ರದ್ಧೆಯಿಂದ ಸೇವಾದಳ ಸಂಘಟನೆ ಮಾಡಿ, ಎಲ್ಲರು ಒಟ್ಟಾಗಿ ಸಾಗಬೇಕು ಎಂದು ಕರೆ ನೀಡಿದರು.
ಸೇವಾದಳದಲ್ಲಿ ಕ್ರಿಯಾಶೀಲರಾಗಿ ಇರುವವರಿಗೆ ಹೆಚ್ಚಿನ ಅವಕಾಶ ನೀಡಲಾಗುವುದು. ಸೇವಾದಳ ಸಂಘಟನೆಗಾಗಿ 7 ಕಾರ್ಯಯೋಜನೆ ರೂಪಿಸಲಾಗಿದೆ. ಜಿಲ್ಲಾಮಟ್ಟದ ಪದಾಧಿಕಾರಿಗಳು ಸೆಪ್ಟಂಬರ್ ಒಳಗೆ ನೀಡಬೇಕು ಹಾಗೂ ಸೇವಾದಳ ಒಬ್ಬ ಕಾರ್ಯಕರ್ತ 10 ಸದಸ್ಯರನ್ನು ನೋಂದಣಿ ಮಾಡಬೇಕು. 224ವಿಧಾನಸಭಾ ಕ್ಷೇತ್ರದಲ್ಲಿ ಸೇವಾದಳ ವಿಕ್ಷಕರನ್ನು ನೇಮಕ ಮಾಡಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5 ಸಾವಿರ ಸೇವಾದಳ ಸದಸ್ಯರನ್ನು ನೋಂದಣಿ ಕಾರ್ಯ ಮಾಡಬೇಕು ಎಂದರು.
ಪ್ರತಿ ಜಿಲ್ಲೆಯಲ್ಲಿ ಸೇವಾದಳದ ವತಿಯಿಂದ ಮೂರು ದಿನದ ತರಬೇತಿ ಶಿಬಿರ ಆಯೋಜಿಸಲಾಗುವುದು. ಪ್ರತಿ ಭಾನುವಾರ ಧ್ವಜಾರೋಹಣ ಮತ್ತು ಧ್ವಜವಂದನಾ ಕಾರ್ಯಕ್ರಮ. ಅಕ್ಟೋಬರ್ 2ರಂದು ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಪ್ರತಿ ಜಿಲ್ಲೆಯಲ್ಲಿ ಸರ್ವೋದಯ ಜ್ಯೋತಿ ಪಾದಯಾತ್ರೆ ಕಾರ್ಯಕ್ರಮ ನಡೆಯಲಿದೆ ಎಂದರು.
1924ರಲ್ಲಿ ಬೆಳಗಾವಿ ನಡೆದ ಕಾಂಗ್ರೆಸ್ ಪಕ್ಷದ ಅಧಿವೇಶನದಲ್ಲಿ ಮಹಾತ್ಮ ಗಾಂಧೀಜಿ ಅವರು ಅಧ್ಯಕ್ಷರಾಗಿದ್ದರು. 2024ರ ಶತಮಾನೋತ್ಸವ ಶುಭ ಸಂದರ್ಭದಲ್ಲಿ ಹುಬ್ಬಳ್ಳಿ ಮತ್ತು ಧಾರವಾಡ ಅವಳಿ ನಗರದಲ್ಲಿ ಸೇವಾದಳ ವತಿಯಿಂದ ಮಹಾತ್ಮ ಗಾಂಧಿ ಭಾರತ ಸರ್ವೋದಯ ಜ್ಯೋತಿ ಸಮಾವೇಶವನ್ನು 25ನೇ ಡಿಸೆಂಬರ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಸೇವಾದಳ ಸೇವಾಮನೋಭಾವನೆಯಿಂದ ಜನಸೇವೆ ಮತ್ತು ಸಂಘಟನೆ ಮಾಡುವ ಸಂಕಲ್ಪ ಮಾಡಲಾಗಿದೆ ಎಂದು ಹೇಳಿದರು.
ಸೇವಾದಳ ಪದಾಧಿಕಾರಿಗಳು ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಮತ್ತು ಜಿಲ್ಲಾ ಮತ್ತು ಬ್ಲಾಕ್ ಅಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಿದ್ದರು.



