ಬೆಂಗಳೂರು: ಸೇವಾ ಮನೋಭಾವನೆಯಿಂದ ಸಮಾಜ ಸೇವೆ, ಸಂಘಟನೆ ಮಾಡುವುದೇ ಕಾಂಗ್ರೆಸ್ ಸೇವಾದಳದ ಉದ್ದೇಶ ಎಂದು ರಾಜ್ಯ ಸೇವಾದಳದ ಮುಖ್ಯಸ್ಥ ಎಂ.ರಾಮಚಂದ್ರ ಹೇಳಿದರು.
ಬೆಂಗಳೂರಿನ ಕಾಂಗ್ರೆಸ್ ಭವನದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳ ಬೆಂಗಳೂರು ವಲಯ ಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಮಾತಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಸೇವಾದಳಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ಸೇವಾಮನೋಭಾವನೆಯಿಂದ ಸಂಘಟನೆ, ಸಮಾಜಸೇವೆ ಮಾಡುವುದೇ ಸೇವಾದಳದ ಉದ್ದೇಶ. ನಾವು ಎನ್ನುವುದು ಬಿಡಬೇಕು, ನಾವು ಎಂಬುದು ಎಲ್ಲರ ಮನಸ್ಸಿಗೆ ಬಂದರೆ ಕಾಂಗ್ರೆಸ್ ಸೇವಾದಳದ ಸಂಘಟನೆ ಪ್ರಬಲವಾಗುತ್ತದೆ ಎಂದರು.
ನಿಮ್ಮ ಕಾರ್ಯವೈಖರಿ ಸೇವಾದಳ ಗಮನಿಸುತ್ತದೆ. ಮುಂದಿನ ದಿನಗಳಲ್ಲಿ ಸೇವಾದಳದ ಕಾರ್ಯಕರ್ತರಿಗೆ ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಅವಕಾಶ ಸಿಗುತ್ತದೆ. ಕಾಂಗ್ರೆಸ್ ಸೇವಾದಳದಲ್ಲಿ ಕಾರ್ಯನಿರ್ವಹಿಸುವುದು ಪವಿತ್ರವಾದ ಕೆಲಸ. ನಾನು ಎಂಬದು ಇಲ್ಲ, ಎಲ್ಲರು ಒಂದೇ ಎಂಬ ಭಾವನೆಯುಳ್ಳ ಪ್ರತಿಯೊಬ್ಬರು ಕಾಂಗ್ರೆಸ್ ಸೇವಾದಳದಲ್ಲಿ ಕಾರ್ಯನಿರ್ವಹಿಸಬಹುದು ಎಂದು ಕರೆ ನೀಡಿದರು.
ಸೇವಾದಳದ ನಾಯಕಾರದ ಗೋಪಾಲಗೌಡ, ಜುನೇದ್, ವಿನಾಯಕಮೂರ್ತಿ, ದೀಪಕ್ ಸೇಠ್ ಮತ್ತು ಸೇವಾದಳದ ಪದಾಧಿಕಾರಿಗಳು, ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.




