ಭವ್ಯ ಭಾರತ ನಿರ್ಮಾಣ ಮಾಡೋಣ: ಎಂ.ರಾಮಚಂದ್ರ
ಬೆಂಗಳೂರು: ಕಾಂಗ್ರೆಸ್ ಭವನದಲ್ಲಿ ಸೇವಾದಳ ಸಂಸ್ಥಾಪಕ ಡಾ.ನಾ.ಸು.ಹರ್ಡೀಕರ್ ರವರ 136ನೇ ಜನ್ಮದಿನಾಚರಣೆ ಆಯೋಜಿಸಲಾಗಿತ್ತು.
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
ಮಹಾತ್ಮ ಗಾಂಧೀಜೀ ಮತ್ತು ನಾ.ಸು.ಹರ್ಡೀಕರ್ ರವರ ಭಾವಚಿತ್ರಕ್ಕೆ ಕೆಪಿಸಿಸಿ ಸೇವಾದಳ ಅಧ್ಯಕ್ಷ ಎಂ.ರಾಮಚಂದ್ರರವರು ಪುಷ್ಪನಮನ ಸಲ್ಲಿಸಿದರು.

ರಾಜ್ಯ ಸೇವಾದಳದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿ ಸಿಹಿ ವಿತರಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಎಂ.ರಾಮಚಂದ್ರ, ಸೇವಾದಳ ಸಂಸ್ಥಪಕರಾದ ನಾ.ಸು.ಹರ್ಡೀಕರ್ ರವರು ಶಿಸ್ತ್ರು, ಸೇವಾ ಮನೋಭಾವನೆಯಿಂದ ಸೇವಾದಳದಲ್ಲಿ ಜನಸೇವೆ ಮಾಡಬೇಕು ಎಂದು ಕಲಿಸಿಕೊಟ್ಟರು ಎಂದರು.

ಕೆಪಿಸಿಸಿ ರಾಜ್ಯ ಸೇವಾದಳ ವಿಭಾಗ ರಾಜ್ಯಾದ್ಯಂತ ಉತ್ತಮ ಸಂಘಟನೆ ಮಾಡಿದೆ ಮತ್ತು ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಸೇವಾದಳದ ಕಾರ್ಯಕರ್ತರು ಜನರ ನಡುವೆ ಉತ್ತಮ ಬಾಂಧವ್ಯದಲ್ಲಿ ಸರ್ಕಾರದ ಯೋಜನೆಗಳು ತಲುಪಿಸುವಂತೆ ಮಾಡಿದ್ದಾರೆ ಎಂದರು.

ಕೆಪಿಸಿಸಿ ಅಧ್ಯಕ್ಷರು, ರಾಷ್ಟ್ರಿಯ ಅಧ್ಯಕ್ಷರ ಅನುಮತಿ ಪಡೆದು ಮುಂದಿನ ದಿನಗಳಲ್ಲಿ ಘಟಪ್ರಭದಲ್ಲಿ ರಾಜ್ಯ ಸಮಾವೇಶ ಮಾಡಲಾಗುವುದು. ಸೇವಾದಳ ಸಂಸ್ಥಾಪಕ ನಾ.ಸು.ಹರ್ಡೀಕರ್ ಅವರ ಆದರ್ಶ, ಸಿದ್ದಾಂತಗಳನ್ನು ಎಲ್ಲರೂ ಆಳವಡಿಸಿಕೊಂಡು ದೇಶದ ಅಭಿವೃದ್ದಿಗೆ ಶ್ರಮಿಸೋಣ ಎಂದು ಕರೆ ನೀಡಿದರು.




